• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ: ನಗರದಲ್ಲಿ ಅರ್ಧದಷ್ಟು ಎಸಿ ಬಸ್‌ಗಳ ಸೇವೆ ಅಲಭ್ಯ

|
Google Oneindia Kannada News

ಬೆಂಗಳೂರು ಆಗಸ್ಟ 08: ಇಂಧನ ದರ ಏರಿಕೆ, ಸಿಬ್ಬಂದಿ ಕೊರತೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ 'ವಜ್ರ ಎಸಿ ಬಸ್‌'ಗಳು ಅರ್ಧದಷ್ಟು ರಸ್ತೆಗೆ ಇಳಿಯದೇ ಸಾರಿಗೆ ಸೇವೆಯಿಂದ ಹೊರಗುಳಿದಿವೆ.

ಕೊರೋನಾ ನಂತರ ಪ್ರಯಾಣಿಕರನ್ನು ಓಲೈಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಜ್ರ ಎಸಿ ಬಸ್‌ ಟಿಕೆಟ್ ದರ ಇಳಿಕೆ ಮಾಡಿದ್ದಲ್ಲೆ ಆಕ್ಯುಪೆನ್ಸಿ ಹೆಚ್ಚಿಸಿತು. ಇದಾಗಿ ಆರು ತಿಂಗಳು ಕಳೆದರೂ ಸಹ ಉದ್ದೇಶಿತ ಎಲ್ಲ ಎಸಿ ಬಸ್‌ಗಳು ರಸ್ತೆಗಗಳಿಗೆ ಇಳಿಯುತ್ತಿಲ್ಲ. ಇಂಧನ ಬೆಲೆ ಹೆಚ್ಚಿರುವುದು, ಎಸಿ ಬಸ್‌ ಸೇವೆಗೆ ಸಿಬ್ಬಂದಿ ಕೊರತೆ, ಎಸಿ ಬಸ್ ಸೇವೆಗಳ ವೇಳಾಪಟ್ಟಿ ಮಿತಿಗೊಳಿಸುವಂತೆ ಆಗ್ರಹ ಕೇಳಿ ಬಂದ ಹಿನ್ನೆಲೆ ಅರ್ಧದಷ್ಟು ಎಸಿ ಬಸ್‌ಗಳು ನಗರ ರಸ್ತೆಯಲ್ಲಿ ಸಂಚಾರ ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಒಟ್ಟು 860ಎಸಿ ಬಸ್‌ಗಳು ಇದ್ದು, ಅವುಗಳಲ್ಲಿ 834 ವೋಲ್ವೋ ಬಸ್‌ಗಳಾಗಿವೆ. ಈ ಒಟ್ಟು ಸಂಖ್ಯೆಯಲ್ಲಿ 373 ಎಸಿ ಬಸ್‌ಗಳು ಸೇವೆ ನೀಡುತ್ತಿದ್ದು, ಉಳಿದವುಗಳು ಸೇವೆಗೆ ಬಳಕೆ ಆಗುತ್ತಿಲ್ಲ. ಕೊರೋನಾ ಪಿಡುಗು ಎಲ್ಲೆ ಆವರಿಸಿದ ನಂತರ, ಪದೇ ಪದೆ ಲಾಕ್‌ಡೌನ್, ಜತೆಗೆ ನೌಕರರಿಗೆ ಮನೆಯಿಂದ ಕೆಲಸ (ವರ್ಕ್ ರ್ಫರಂ ಹೋಮ್‌) ಮಾಡಲು ಅವಕಾಶ ದೊರೆತ ಬಳಿಕ ಎಸಿ ಬಸ್‌ಗಳ ಬೇಡಿಕೆ ತೀವ್ರವಾಗಿ ಕುಸಿಯಿತು. ಕೊರೋನಾ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಉಪಯೋಗಿಸಲು ಹಿಂದೇಟು ಹಾಕಿದರು.

ಇದೆಲ್ಲ ಮನಗಂಡು ಬಿಎಂಟಿಸಿ ನಿಗಮ ಕೋವಿಡ್ ಕಡಿಮೆಯಾದ ನಂತರ ಕಳೆದ ಡಿಸೆಂಬರ್‌ನಲ್ಲಿ, ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು, ಟಿಕೆಟ್ ದರವನ್ನು ಶೇ.35 ರಷ್ಟು ಕಡಿಮೆ ಮಾಡಿತು. ನಿತ್ಯದ ಮತ್ತು ಮಾಸಿಕ ಪಾಸ್‌ಗಳ ದರದಲ್ಲಿ ಇಳಿಕೆ ಮಾಡಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಜನರು ಬಿಎಂಟಿಸಿ ಬಸ್ ಬಳಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಧಿಕಾರಿಗಳು ಸಮರ್ಥಿಸಿಕೊಂಡರು.

ಆದಾಯದ ಬಹುತೇಕ ಹಣ ಇಂಧನಕ್ಕೆ

ಆದಾಯದ ಬಹುತೇಕ ಹಣ ಇಂಧನಕ್ಕೆ

ವಾಸ್ತವದಲ್ಲಿ ಡೀಸೆಲ್ ಖರೀದಿಗೆ ಬಿಎಂಟಿಸಿ ಹೆಚ್ಚು ಹಣ ವ್ಯಯಿಸುತ್ತಿದೆ. ಆದಾಯದ ಬಹುಪಾಲು ಡಿಸೇಲ್ ಖರ್ಚಾಗುತ್ತಿದೆ. ಅಲ್ಲದೇ ಎಸಿ ಬಸ್‌ಗಳ ಕಾರ್ಯ ನಿರ್ವಹಣೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಸೇವೆಗಳ ವೇಳಾಪಟ್ಟಿಯಲ್ಲಿ ಏರಿಕೆ ಮಾಡದಂತೆ ನಿಗಮಕ್ಕೆ ಒತ್ತಾಯಿಸಲಾಗಿದೆ. ಸಾಮಾನ್ಯ ಬಸ್‌ಗಳಿಗಿಂತಲೂ ಎಸಿ ಬಸ್‌ ನಿರ್ವಹಣೆ ಸೇವೆಗೆ ವೆಚ್ಚ ಜಾಸ್ತಿ ಇರುತ್ತದೆ. ಅಲ್ಲದೇ ಸಾಮಾನ್ಯ ಬಸ್‌ಗಳು ಪ್ರತಿ ಲೀಟರ್‌ ಡಿಸೇಲ್‌ಗೆ 4 ಕಿಮೀ ಓಡಿದರೆ, ಎಸಿ ಬಸ್‌ಗಳು ನಗರ ವ್ಯಾಪ್ತಿಯಲ್ಲಿ ಪ್ರತಿ ಲೀಟರ್‌ ಡಿಸೇಲ್‌ಗೆ ಕೇವಲ 2 ಕಿಮೀ ಮೈಲೇಜ್ ನೀಡುತ್ತವೆ. ಇತ್ತ ಮೈಲೇಜು ಕಡಿಮೆ, ಟಿಕೆಟ್ ದರ ಇಳಿಕೆಯಿಂದಾಗಿ ಅರ್ಧದಷ್ಟು ಬಸ್‌ಗಳು ನಗರದಲ್ಲಿ ಸೇವೆ ನೀಡುತ್ತಿಲ್ಲ ಎನ್ನಲಾಗಿದೆ.

ನಿಗಮದಲ್ಲಿ 5,000 ಸಿಬ್ಬಂದಿ ಕೊರತೆ

ನಿಗಮದಲ್ಲಿ 5,000 ಸಿಬ್ಬಂದಿ ಕೊರತೆ

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿಯ ಐಟಿ ವಿಭಾಗದ ನಿರ್ದೇಶಕ ಸೂರ್ಯಸೇನ್ ಅವರು, "ಬಿಎಂಟಿಸಿ ನಿಗಮದಲ್ಲಿ 5,000 ಸಿಬ್ಬಂದಿ ಕೊರತೆ ಇದೆ. ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ಎಸಿ ಬಸ್‌ ಹೊರತಾಗಿ ಇತರೆಡೆಗೆ ಪ್ರಯಾಣ ಸೇವೆ ನೀಡುವ ಎಸಿ ಬಸ್‌ಗಳು ನಷ್ಟದಲ್ಲಿವೆ. ಇಂಧನ ವೆಚ್ಚಕ್ಕಾಗಿ ಬಿಎಂಟಿಸಿ 2ಕೋಟಿ ರೂ.ಗಿಂತ ಅಧಿಕ ವೆಚ್ಚ ಮಾಡುತ್ತಿದೆ. ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರ ವ್ಯಾಪ್ತಿಯಲ್ಲಿ ಹೆಚ್ಚುವರಿ ಬಸ್‌ ಓಡಿಸುತ್ತಿಲ್ಲ," ಎಂದರು.

ಎಸಿ ಬಸ್‌ನಿಂದ 1 ಕಿ.ಮೀಗೆ 55-60ರೂ. ಆದಾಯ

ಎಸಿ ಬಸ್‌ನಿಂದ 1 ಕಿ.ಮೀಗೆ 55-60ರೂ. ಆದಾಯ

ವಜ್ರ ಎಸಿ ಬಸ್‌ ಸೇವೆಗಳು ಪ್ರತಿ ಕಿ.ಮೀಗೆ 47ರೂ. ಸಂಗ್ರಹಿಸಿದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ವಹಿಸುವ ವಾಯು ವಜ್ರ ಸೇವೆಗಳು ಪ್ರತಿ ಕಿ.ಮೀಗೆ 55-60ರೂ.ವರೆಗೆ ಹಣ ಗಳಿಸುತ್ತವೆ. ಹೀಗಿದ್ದರು ನಗರದಲ್ಲಿ ವಜ್ರ ಎಸಿ ಬಸ್‌ಗಳ ಕಡಿಮೆ ದರದಲ್ಲೇ ಸಂಚಾರ ಸೇವೆ ಮುಂದುವರಿಸಲಿವೆ. ಬಿಎಂಟಿಸಿಯು ಬೆಂಗಳೂರಿಗೆ ಎಸಿ ಬಸ್ ಸೇವೆ ಪರಿಚಯಿಸಿದ್ದಕ್ಕಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಎಸಿ ಬಸ್ ಖರೀದಿಗೆ ನೂರಾರು ಕೋಟಿ ವ್ಯಯಿಸಲಾಗಿದೆ. ಎರಡು ವರ್ಷಗಳಿಂದ, AC ಬಸ್ ಫ್ಲೀಟ್ ಬಳಕೆಯಾಗದೆ ಉಳಿದಿವೆ. ಇದು ಸದ್ಯತೆ ಪರಿಸ್ಥಿತಿ ಮಾತ್ರವೇ ಆಗಿದ್ದು, ಇಂಧನ ಬೆಲೆ ಇಳಿಕೆಯಾದಾಗ ನಗರದಲ್ಲಿ ಬಿಎಂಟಿಸಿಯ ಹೆಚ್ಚು ಎಸಿ ಬಸ್ ಸೇವೆ ನೀಡಲಿವೆ ಎಂದು ಸೂರ್ಯಸೇನ್‌ ಮಾಹಿತಿ ನೀಡಿದರು.

ಅಧಿಕಾರಿಗಳ ಸಮರ್ಥನೆ

ಅಧಿಕಾರಿಗಳ ಸಮರ್ಥನೆ

"ಅರ್ಧದಷ್ಟು ಎಸಿ ಬಸ್‌ ಸಂಚರಿಸಿದಿದ್ದರೂ ಸಹ ಹಾಲಿ ಸೇವೆ ನೀಡುತ್ತಿರುವ ಎಸಿ ಬಸ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಟಿಕೆಟ್, ಪಾಸ್‌ಗಳ ದರ ಇಳಿಕೆ ಉಪಕ್ರಮವು ಪ್ರಯಾಣಿಕರನ್ನು ಸೆಳೆದಿದೆ. ಎಸಿ ಬಸ್‌ ಟಿಕೆಟ್ ದರ ಕಡಿಮೆ ಮಾಡಿರುವುದರಿಂದ ಜನರು ಆಟೋ, ಟ್ಯಾಕ್ಸಿಗಳನ್ನು ಬಿಟ್ಟು ಬಿಎಂಟಿಸ್ ಬಸ್ ಬಳಸುತ್ತಿದ್ದಾರೆ. ಅಲ್ಲದೇ ಜನ ಸಂಚಾರ ಹೆಚ್ಚಿರುವ ಬೆಳಗ್ಗೆ ಮತ್ತು ಸಂಜೆ ವೇಳೆ ಎಸಿ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿರುತ್ತಾರೆ," ಎಂದು ಅಧಿಕಾರಿ ತಿಳಿಸಿದರು.

Recommended Video

   ಕಾಮಗಾರಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಭೈರತಿ ಸಿಡಿಲು | Oneindia Kannada
   English summary
   Not service provide half Bangalore Metropolitan Transport Corporation (BMTC) AC bus in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X