ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

80ಕ್ಕೂ ಹೆಚ್ಚು ನಮ್ಮ ಮೆಟ್ರೊ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್

|
Google Oneindia Kannada News

ಬೆಂಗಳೂರು, ಜುಲೈ 14: ಕೊರೊನಾ ವೈರಸ್ ಭೀತಿಯ ನಡುವೆಯೂ ನಮ್ಮ ಮೆಟ್ರೊ ಕಾಮಗಾರಿ ನಿಲ್ಲದೆ ನಡೆಯುತ್ತಲೇ ಇತ್ತು. ಇದೀಗ, ಮೆಟ್ರೊ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ನಾಗವಾರ ಮತ್ತು ಗೊಟ್ಟಿಗೆರೆ ಮಾರ್ಗದಲ್ಲಿ ನಡೆಯುತ್ತಿರುವ 2ನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಸುಮಾರು 80ಕ್ಕೂ ಅಧಿಕ ಕಾರ್ಮಿಕರಿಗೆ ಕೊವಿಡ್ ಸೋಂಕು ದೃಢವಾಗಿದೆ. ಇದು ಮೆಟ್ರೊ ಆಡಳಿತ ಮಂಡಳಿಗೆ ಭಾರಿ ಹಿನ್ನಡೆ ತಂದಿದೆ.

ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ 80 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ? ಮನೆಯಲ್ಲೇ ಕೂತು ತಿಳಿಯಬಹುದುಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ? ಮನೆಯಲ್ಲೇ ಕೂತು ತಿಳಿಯಬಹುದು

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಗೊಟ್ಟಿಗೆರೆ-ನಾಗವಾರ (ರೀಚ್ 6) ಮಾರ್ಗದ ಪ್ಯಾಕೇಜ್ 2 ಮತ್ತು 3 ನಿರ್ಮಾಣ ಒಪ್ಪಂದವನ್ನು ಎಲ್&ಟಿಗೆ ನೀಡಿದ್ದು, ಸುಮಾರು 2.88 ಕಿ.ಮೀ ದೂರದಲ್ಲಿ ಕೆಲಸ ಮಾಡುವ ಕಾರ್ಮಿಕರ ಶಿಬಿರದಲ್ಲಿ ಸೋಂಕು ಕಾಣಿಸಿಕೊಂಡಿದೆ.

Over 80 Namma Metro labourers tested positive for COVID19

ಈ ಕುರಿತು ಬಿಎಂಆಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಸಂತೋಷ್ ಪ್ರತಿಕ್ರಿಯಿಸಿದ್ದು 'ಕರ್ನಾಟಕಕ್ಕೆ ಹೊರರಾಜ್ಯದಿಂದ ಬಂದ ಓರ್ವ ವ್ಯಕ್ತಿಗೆ ಸೋಂಕು ದೃಢವಾದ ನಂತರ ಇಡೀ ತಂಡವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು' ಎಂದು ಮಾಹಿತಿ ನೀಡಿದ್ದಾರೆ.

'ಪಾಸಿಟಿವ್ ಬಂದಿರುವ ಎಲ್ಲರೂ ರೋಗ ಲಕ್ಷಣ ರಹಿತರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರೆಲ್ಲರನ್ನು ಕೊವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ' ಎಂದು ತಿಳಿಸಿದ್ದಾರೆ.

ಸೋಂಕಿತ ಕಾರ್ಮಿಕರಿಗೆ ಅವರ ಸಂಬಳದಲ್ಲಿ ಚಿಕಿತ್ಸಾ ವೆಚ್ಚ ಭರಿಸಲಾಗುವುದಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು "ಸರ್ಕಾರವು ವಿಧಿಸಿರುವ ನಿಯಮಗಳನ್ನು ಅನುಸರಿಸಲಾಗುವುದು" ಎಂದು ಹೇಳಿದ್ದಾರೆ. ಕಾರ್ಮಿಕರಲ್ಲಿ ಸೋಂಕು ವರದಿಯಾದ ಕಾರಣ ಬಹುಶಃ ಒಂದು ತಿಂಗಳ ಕಾಲ ಪ್ಯಾಕೇಜ್ 2 ಮತ್ತು 3 ಮಾರ್ಗದಲ್ಲಿ ಕೆಲಸ ಸ್ಥಗಿತಗೊಳ್ಳಬಹುದು ಎನ್ನಲಾಗಿದೆ.

English summary
Over 80 labourers working on the Nagawara - Gottigere line of Namma Metro phase two, have tested positive for COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X