ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿ 30 ಕೊವಿಡ್ ಲಸಿಕೆಗಳ ಸಂಶೋಧನೆ: 20ರಲ್ಲಿ ಮುನ್ನಡೆ

|
Google Oneindia Kannada News

ಬೆಂಗಳೂರು, ಜುಲೈ 25: ಭಾರತದಲ್ಲಿ 30 ಕೊವಿಡ್ ಲಸಿಕೆ ಸಂಶೋಧನೆ ನಡೆದಿದ್ದು, ಅದರಲ್ಲಿ 20 ಲಸಿಕೆ ಮುನ್ನಡೆ ಕಾಯ್ದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

48 ನಿಮಿಷದಲ್ಲಿ 5 Km ಆಟೋ ಎಳೆದ ಭೂಪ | Oneindia Kannada

ಜಗತ್ತಿನ 213ದೇಶಗಳಲ್ಲಿ ಕೊರೊನಾ ವೈರಸ್‌ನಿಂದಾಗಿ ಜನರು ಸಾಯುತ್ತಿದ್ದಾರೆ. ಲಸಿಕೆ ಕಂಡು ಹಿಡಿಯುವ ಭರದಿಂದ ಸಾಗಿದೆ. ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿದ್ದು, ಈ ರೇಸ್ ನಲ್ಲಿ ಭಾರತ ಕೂಡ ಪ್ರಧಾನ ಪಟ್ಟಿಯಲ್ಲಿದೆ.

ಭಾರತದಲ್ಲಿ ಒಂದೇ ದಿನ 48,000 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಭಾರತದಲ್ಲಿ ಒಂದೇ ದಿನ 48,000 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ

ಈ ಬಗ್ಗೆ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ ವಿಜಯ್ ರಾಘವನ್ ಅವರು ಮಾಹಿತಿ ನೀಡಿದ್ದು, ಸೈನರ್ಜಿಯಾ ಫೌಂಡೇಷನ್ ಸಂಸ್ಥೆ ಆಯೋಜಿಸಿದ್ದ ವರ್ಚುವಲ್ ಫೋರಂ ನಲ್ಲಿ ಪಾಲ್ಗೊಂಡು ಮಾತನಾಡಿದರು.

Over 30 Attempts Being Made In Country On Covid Vaccine

ಭಾರತದಲ್ಲಿ ಈ ವರೆಗೂ ಕೊರೊನಾ ವೈರಸ್ ಗೆ ಸಂಬಂಧಿಸಿದ ಲಸಿಕೆ ತಯಾರಿಕೆಯಲ್ಲಿ ವಿವಿಧ ಸಂಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ದೇಶದಲ್ಲಿ ಈ ವರೆಗೂ ಲಸಿಕೆಯ ಮೇಲೆ 30 ಬಾರಿ ಪ್ರಯೋಗ ನಡೆಸಲಾಗಿದೆ. ಈ ಪೈಕಿ 20 ಪ್ರಯೋಗಗಳಲ್ಲಿ ಮಹತ್ವದ ಮುನ್ನಡೆ ಕಂಡುಬಂದಿದೆ ಎನ್ನಲಾಗಿದೆ.

ಕೊವಿಡ್-19 ಲಸಿಕೆ ತಯಾರಿಕೆಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ತರವಾದದ್ದು ಎಂದು ರಾಘವನ್ ಅವರು, ಕೊವಿಡ್ 19ನಿಂದ ಎಲ್ಲ ತಯಾರಕರೂ ಒಗ್ಗೂಡಿ ವೆಂಟಿಲೇಟರ್‌ಗಳು, ಆಮ್ಲಜನಕ-ಪೂರೈಕೆ ಸಾಧನಗಳು, ಸೋಂಕು ಸಂಪರ್ಕ-ಪತ್ತೆ ಹಚ್ಚುವ ಅಪ್ಲಿಕೇಶನ್‌ಗಳು, ಸಾರ್ವಜನಿಕ ಮುಕ್ತ ಮೂಲಕ ಔಷಧಿಗಳ ಆವಿಷ್ಕಾರ, ವಿನ್ಯಾಸ ಮತ್ತು ಅಭಿವೃದ್ಧಿ ಹೊರಬರುತ್ತಿವೆ ಎಂದು ಹೇಳಿದರು.

ಅಂತೆಯೇ ಕೊರೊನಾ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹವಾಮಾನ ಬದಲಾವಣೆ, ಪರಿಸರ ಮತ್ತು ಪರಿಸರ ವಿಜ್ಞಾನದ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ರಾಘವನ್ ಹೇಳಿದರು.

ದೇಶದ ದೊಡ್ಡ ದೊಡ್ಡ ಔಷಧ ತಯಾರಿಕಾ ಸಂಸ್ಥೆಗಳು ಲಸಿಕೆ ಸಂಶೋಧನೆ ಮತ್ತು ಅದರ ತಯಾರಿಕೆಯಲ್ಲಿ ತೊಡಗಿವೆ. ದೊಡ್ಡ ಸಂಸ್ಥೆಗಳು ಮಾತ್ರವಲ್ಲದೇ ದೇಶದ ಪುಟ್ಟ ಪುಟ್ಟ ಔಷಧ ತಯಾರಿಕಾ ಸಂಸ್ಥೆಗಳೂ ಕೂಡ ಲಸಿಕೆ ತಯಾರಿಕೆಯ ತೊಡಗಿರುವು ಗಮನಾರ್ಹ ಸಂಗತಿಯಾಗಿದೆ.

ಕೇವಲ ಔಷಧ ತಯಾರಿಕಾ ಸಂಸ್ಥೆಗಳು ಮಾತ್ರವಲ್ಲದೇ ಸ್ಟಾರ್ಟಪ್ ಗಳು, ಅಕಾಡೆಮಿಕ್ ಲ್ಯಾಬ್ ಗಳಲ್ಲೂ ಲಸಿಕೆಗಾಗಿ ಸಂಶೋಧನೆ ಮುಂದುವರೆದಿದೆ. ಕೇವಲ ಒಂದು ಲಸಿಕೆಯಿಂದ ಮಾತ್ರವೇ ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಆವಿಷ್ಕಾರ ಆಗುವ ಪ್ರತೀ ಲಸಿಕೆಗಳು ಒಂದಕ್ಕಿಂತ ಒಂದು ಭಿನ್ನ ಮತ್ತು ಪರಿಣಾಮಕಾರಿಯಾಗಿರಬೇಕು. ಇದು ಲಸಿಕೆ ತಯಾರಿಕರಿಗೆ ದೊಡ್ಡ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಕಂಪನಿಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದರು.

English summary
The work on research and development of Covid vaccine in the country is on a war footing. “There are over 30 attempts being made and 20 of them are doing reasonably well,” said Prof K Vijay Raghavan, principal scientific advisor, Union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X