ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ

|
Google Oneindia Kannada News

ಬೆಂಗಳೂರು, ಮೇ 9: ನೈಋತ್ಯ ರೈಲ್ವೆ ನಿಲ್ದಾಣದಲ್ಲಿ ಪ್ರತಿ 8 ಗಂಟೆಗೆ ಒಂದು ಮಗುವಿನಂತೆ ಎರಡು ವರ್ಷದಲ್ಲಿ 2 ಸಾವಿರ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ವೆ ರಕ್ಷಣಾ ಪಡೆ ನೀಡಿರುವ ಮಾಹಿತಿ ಪ್ರಕಾರ ಜುಲೈ 2017ರಿಂದ ಇಲ್ಲಿಯವರೆಗೆ 22 ತಿಂಗಳ ಅವಧಿಯಲ್ಲಿ 174 ಬಾಲಕಿಯರು ಸೇರಿದಂತೆ 2,223 ಮಕ್ಕಳನ್ನು ನನ್ಹೆ ಫರಿಶ್ತೆ ಯೋಜನೆಯಡಿಯಲ್ಲಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ನೈರುತ್ಯ ರೈಲ್ವೆ ಕಾಮಗಾರಿ:1 ಗಂಟೆ ತಡವಾಗಿ ಸಂಚರಿಸಲಿವೆ ರೈಲುಗಳುನೈರುತ್ಯ ರೈಲ್ವೆ ಕಾಮಗಾರಿ:1 ಗಂಟೆ ತಡವಾಗಿ ಸಂಚರಿಸಲಿವೆ ರೈಲುಗಳು

2019ರ ಜನವರಿಯಿಂದ ಏಪ್ರಿಲ್ ವರೆಗೆ 187 ಬಾಲಕರು ಹಾಗೂ 11 ಬಾಲಕಿಯರು ಸೇರಿ 198 ಮಕ್ಕಳನ್ನು ರಕ್ಷಿಸಲಾಗಿದೆ. ಕೆಲವು ಮಕ್ಕಳನ್ನು ಅವರ ಪೋಷಕರಿಗೆ ಹಾಗೂ ಇನ್ನು ಕೆಲವು ಮಕ್ಕಳನ್ನು ಮಕ್ಕಳಾ ರಕ್ಷಣಾ ಸಮಿತಿಗೆ ಸೇರಿಸಲಾಗಿದೆ.

Over 2 thousand kids rescued from SWR railway stations

2017ರ ಜುಲೈನಿಂದ ಡಿಸೆಂಬರ್ ವರೆಗೆ 539 ಬಾಲಕರು ಹಾಗೂ 70 ಬಾಲಕಿಯರು ಸೇರಿ 609 ಮಕ್ಕಳನ್ನು ರಕ್ಷಿಸಲಾಗಿದೆ. 2018ರಲ್ಲಿ ಒಟ್ಟು 1416 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು.

ಕೆಲವರು ಮಕ್ಕಳನ್ನು ಅಪಹರಿಸಲು ರೈಲ್ವೆ ನಿಲ್ದಾಣವೇ ಬೆಸ್ಟ್ ದಾರಿ ಎಂದುಕೊಳ್ಳುತ್ತಾರೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದ ಮಕ್ಕಳ ಪೈಕಿ ಬಿಹಾರ, ಒಡಿಶಾ, ನೇಪಾಳದವರೇ ಹೆಚ್ಚಿನವರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ವೆ ನಿಲ್ದಾಣಗಳ ಮೇಲೆ ಉಗ್ರರ ನೆರಳು, ರಾಜ್ಯಾದ್ಯಂತ ಹೈ ಅಲರ್ಟ್ ರೈಲ್ವೆ ನಿಲ್ದಾಣಗಳ ಮೇಲೆ ಉಗ್ರರ ನೆರಳು, ರಾಜ್ಯಾದ್ಯಂತ ಹೈ ಅಲರ್ಟ್

ಅವರು ಮಕ್ಕಳನ್ನು ಕರೆತಂದು ಲೆದರ್ ಕಾರ್ಖಾನೆ, ಹೋಟೆಲ್‌ ಇನ್ನಿತರೆ ಕಡೆಗಳಲ್ಲಿ ಕಡಿಮೆ ಹಣ ನೀಡಿ ಕೆಲಸದಲ್ಲಿ ತೊಡಗಿಸುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ಆಹಾರವನ್ನು ನೀಡದೆ ಕೆಲವೊಮ್ಮೆ ಮಕ್ಕಳ ಸಾವಿಗೆ ಕಾರಣರಾಗುತ್ತಾರೆ.

English summary
On an average, at least one child is rescued every eight hours across the South Western Railway (SWR) network. Railway Protection Force (RPF) records show 2,223 kids, including 174 girls, were rescued since July 2017 (22 months) under Operation Nanhe Farishte.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X