ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 2021:ಭೌತಿಕವಾಗಿ, ವರ್ಚುವಲ್ ಆಗಿ ಎಷ್ಟು ಮಂದಿ ಭಾಗಿ?

|
Google Oneindia Kannada News

ಬೆಂಗಳೂರು,ಫೆಬ್ರವರಿ 05: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5ರವರೆಗೆ ನಡೆದ ಏರೋ ಇಂಡಿಯಾ 2021ರಲ್ಲಿ ಎಷ್ಟು ಮಂದಿ ಭಾಗವಹಿಸಿದ್ದರು ಎಂಬುದರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

ಭೌತಿಕವಾಗಿ 16 ಸಾವಿರ ಹಾಗೂ ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಟಾರ್ಟ್ಅಪ್‌ಗಳಿಂದ ದೇಶದಲ್ಲಿ 4.71 ಲಕ್ಷ ಉದ್ಯೋಗ ಸೃಷ್ಟಿ:ರಾಜನಾಥ್ ಸಿಂಗ್ಸ್ಟಾರ್ಟ್ಅಪ್‌ಗಳಿಂದ ದೇಶದಲ್ಲಿ 4.71 ಲಕ್ಷ ಉದ್ಯೋಗ ಸೃಷ್ಟಿ:ರಾಜನಾಥ್ ಸಿಂಗ್

ವಿಶ್ವದ ಮೊದಲ ಹೈಬ್ರೀಡ್ ಏರೋ ಮತ್ತು ರಕ್ಷಣಾ ಪ್ರದರ್ಶನ ಎಂದೇ ಬಣ್ಣಿಸಲಾದ 13ನೇ ಆವೃತ್ತಿಯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಆಯೋಜಿಸಿತ್ತು. ಜಾಗತಿಕ ಮಟ್ಟದ ಉದ್ಯಮಿಗಳು, ನಿಯೋಗದೊಂದಿಗೆ ಸಂವಾದ, ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆದವು.

 Over 16,000 People Attended Aero India 2021 Physically And Over 4.5 Lakh Virtually, Says Rajnath Singh

ತಂತ್ರಜ್ಞಾನ ವರ್ಗಾವಣೆಗೆ 19, ನಾಲ್ಕು ಹಸ್ತಾಂತರ ಒಪ್ಪಂದಗಳು ಸೇರಿದಂತೆ ಒಟ್ಟಾರೇ 121 ಪರಸ್ಪರ ತಿಳುವಳಿಕೆ ಒಪ್ಪಂದಗಳಾಗಿದ್ದು, ಮುಂದಿನ ಏಳೆಂಟು ವರ್ಷಗಳಲ್ಲಿ ಸೇನೆಯನ್ನು ಆಧುನೀಕರಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು 130 ಬಿಲಿಯನ್ ಡಾಲರ್ ಹೂಡಿಕೆಯನ್ನು ಸರ್ಕಾರ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ವಿಶ್ವಾದ್ಯಂತ ಕೋವಿಡ್-19 ಸಾಂಕ್ರಾಮಿಕ ತಡೆಯ ಹೊರತಾಗಿಯೂ ಬೆಂಗಳೂರು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಯಶಸ್ವಿಯಾಗಿದೆ. 55 ರಾಷ್ಟ್ರಗಳಿಂದ 84 ವಿದೇಶಿ ಕಂಪನಿಗಳು ಸೇರಿದಂತೆ 540 ದೇಶಿಯ ಕಂಪನಿಗಳು ಪಾಲ್ಗೊಂಡಿದ್ದಾಗಿ ಮಾಹಿತಿ ನೀಡಿದರು.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

English summary
Defence minister Rajnath Singh on Friday said that over 16,000 people attended Aero India 2021 physically and over 4.5 lakh people watched it virtually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X