ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ 1000 ಸಿಬ್ಬಂದಿಗೆ ಕೊರೊನಾ

|
Google Oneindia Kannada News

ಬೆಂಗಳೂರು, ಆಗಸ್ಟ್ 5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಇದುವರೆಗೂ 1000ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ತಗುಲಿದೆ ಎಂಬ ವಿಚಾರ ಹೊರಬಿದ್ದಿದೆ.

Recommended Video

BS Yediyurappa , Manipal ಆಸ್ಪತ್ರೆಯಿಂದಲೇ ನಿರಂತರ ಕೆಲಸ | Oneindia Kannada

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ಬರುವ, ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NEKRTC) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಗಳಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿರಿಗೆ ಕೊವಿಡ್ ತಗುಲಿದೆ.

ಜಗತ್ತಿನಾದ್ಯಂತ 7 ಲಕ್ಷ ಕೊವಿಡ್ ಸಾವು, ಯಾವ ದೇಶದಲ್ಲಿ ಎಷ್ಟು?ಜಗತ್ತಿನಾದ್ಯಂತ 7 ಲಕ್ಷ ಕೊವಿಡ್ ಸಾವು, ಯಾವ ದೇಶದಲ್ಲಿ ಎಷ್ಟು?

ಕೊವಿಡ್‌ ಸೋಂಕಿನಿಂದ ಚೇತರಿಸಿಕೊಂಡ ಸಿಬ್ಬಂದಿಯನ್ನು ಇಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಕೊರೊನಾದಿಂದ ಗುಣಮುಖರಾಗಿದ್ದಕ್ಕೆ ಹೂವು ನೀಡಿ ಶುಭ ಹಾರೈಸಿದರು.

Over 1000 KSRTC, BMTC, NWKRTC and NEKRTC tested positive for Covid19 to Date

ಸಾವಿರ ಮಂದಿ ಸೋಂಕಿತರ ಪೈಕಿ ಚಾಲಕರು, ನಿರ್ವಾಹಕರು ಹೆಚ್ಚು. ಈಗಾಗಲೇ 700 ಸಿಬ್ಬಂದಿ ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಮಾರ್ಚ್‌ನಲ್ಲಿ ಇಡೀ ದೇಶ ಲಾಕ್‌ಡೌನ್ ಜಾರಿ ಮಾಡಿತ್ತು. ಈ ವೇಳೆ ರಾಜ್ಯ ಸಾರಿಗೆ ಸಂಸ್ಥೆ ಸಹ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ ಮತ್ತೆ ಬಸ್ ಸಂಚಾರ ಆರಂಭವಾಗಿದೆ.

ಸದ್ಯ, ರಾಜ್ಯಾದ್ಯಂತ ಎಲ್ಲ ಸಮಯದಲ್ಲೂ ಬಸ್ ಸಂಚಾರ ಆರಂಭವಾಗಿದೆ. ಮಾಸ್ಕ್ ಧರಿಸಿ ಚಾಲಕರು, ನಿರ್ವಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆಯೂ ಹಲವರಿಗೆ ಸೋಂಕು ತಗುಲಿದೆ.

English summary
As many as 1000 staff members of KSRTC, BMTC, NWKRTC and NEKRTC tested positive for Covid19 to date, of which 700 have recovered: Dy CM Laxman Savadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X