ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ 130 ಕೋಟಿ ಜನರಲ್ಲಿ ಕೋವಿಡ್-19 ಹರಡಿರೋದು ಕಡಿಮೆ ಜನರಿಗೆ

|
Google Oneindia Kannada News

ಬೆಂಗಳೂರು, ಜು. 01: ಒಂದೆಡೆ ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಸಿಗದೇ ಮೃತಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಸೋಂಕು ದೇಶದ ಜನಸಂಖ್ಯೆಗೆ ಅನುಗುಣವಾಗಿ ಹರಡಿಲ್ಲ ಎಂದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ 130 ಕೋಟಿ ಜನರಲ್ಲಿ ಕೋವಿಡ್ -19 ಹರಡಿರೋದು ತುಂಬಾ ಕಡಿಮೆ ಜನರಿಗೆ ಎಂದಿದ್ದಾರೆ. ಕೊರನಾ ವೈರಸ್‌ನ್ನು ನಮ್ಮ ದೇಶದಲ್ಲಿ ನಿಯಂತ್ರಣ ಮಾಡಲಾಗಿದೆ. ನಿನ್ನೆ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆಯ ವಿಸ್ತರಣೆ ಬಗ್ಗೆ ಘೋಷಿಸಿದ್ರು ಎಂದಿದ್ದಾರೆ.

ಉಲ್ಲಂಘಿಸಿದವರ ವಿರುದ್ಧ ಕ್ರಮ

ಉಲ್ಲಂಘಿಸಿದವರ ವಿರುದ್ಧ ಕ್ರಮ

ಕೊರೊನಾ ವೈರಸ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ನಿಯಮಗಳಿವೆ. ನಿಯಮ‌ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ 19 ಪಾಸಿಟಿವ್ ಇದ್ದವರಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗುತ್ತದೆ. ಪಾಸಿಟಿವ್ ಇಲ್ಲದವರನ್ನು ಸಾಮಾನ್ಯ ಆಸ್ಪತ್ರೆಗಳಲ್ಲಿ ದಾಖಲು ಮಾಡಬಹುದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಆರ್. ಅಶೋಕ ಸಭೆಯಲ್ಲಿದ್ದ ವೈದ್ಯರಿಗೆ ಕೋವಿಡ್ - 19 ಸೋಂಕುಆರ್. ಅಶೋಕ ಸಭೆಯಲ್ಲಿದ್ದ ವೈದ್ಯರಿಗೆ ಕೋವಿಡ್ - 19 ಸೋಂಕು

ರಿಪೋರ್ಟ್ ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಈಗ ಆಸ್ಪತ್ರೆ ಮತ್ತು ಬೆಡ್‌ಗಳ ಲಭ್ಯತೆ ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸಾಕಷ್ಟು ಬೆಡ್

ಬೆಂಗಳೂರಿನಲ್ಲಿ ಸಾಕಷ್ಟು ಬೆಡ್

ಬೆಂಗಳೂರಿನಲ್ಲಿ ಸಾಕಷ್ಟು ಬೆಡ್ ಲಭ್ಯತೆ ಇದೆ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಚಿಕಿತ್ಸೆ ಸಿಗದೆ ನಿನ್ನೆ, ಇವತ್ತು ಇಬ್ಬರು ಮೃತಪಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕುಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕು

ಪಾಸಿಟಿವ್ ಇರುವ ಎಲ್ಲರಿಗೂ ಬೆಡ್ ಒದಗಿಸುವ ಕೆಲಸ ಮಾಡುತ್ತದೆ. ಬೆಡ್ ಕೊರತೆ ಇದೆ ಎನ್ನುವುದು ಸತ್ಯ ಅಲ್ಲ. ಯಾವುದೇ ತಡೆ ಇಲ್ಲದೇ ತಕ್ಷಣ ರೋಗಿಯನ್ನು ದಾಖಲು ಮಾಡಲು ವ್ಯವಸ್ಥೆ ಇದೆ. ಸಮಸ್ಯೆ ಆಗಿದ್ದರೆ ಸರ್ಕಾರ ಅದನ್ನು ಪರಿಹರಿಸುವ ಕೆಲಸ ಮಾಡುತ್ತದೆ. ಹಿಂದೆ ಕೆಲವು ಸಮನ್ವಯದ ಸಮಸ್ಯೆ ಇದ್ದ ಕಾರಣ ಆಂಬ್ಯುಲೆನ್ಸ್ ಸಮಸ್ಯೆ ಆಗಿತ್ತು, ಈಗ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಅಥವಾ ನಾನ್ ಕೋವಿಡ್ ಆಗಿದ್ದರೂ ಅವರಿಗೆ ದಾಖಲಿಸಿಕೊಳ್ಳುವ ಕೆಲಸ ಆಗಲೇಬೇಕು ಎಂದಿದ್ದಾರೆ.

ಹೆಚ್ಚು ಮಾಹಿತಿ ಇಲ್ಲ

ಹೆಚ್ಚು ಮಾಹಿತಿ ಇಲ್ಲ

ಕಂದಾಯ ಸಚಿವ ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದ ಸಭೆಯಲ್ಲಿದ್ದ ವೈದ್ಯೆಗೆ ಪಾಸಿಟಿವ್ ಬಂದಿದ್ದರೂ ಕ್ವಾರಂಟೈನ್ ಅಗತ್ಯವಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ಅಶ್ವಥ್ ನಾರಾಯಣ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್

ನನಗೆ ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವರು ಕೋವಿಡ್ ನೆಗೆಟಿವ್ ಅನ್ನೋದು ಮಾಹಿತಿ ಇದೆ. ಹೆಚ್ಚಿನ‌ ಮಾಹಿತಿ ತೆಗೆದುಕೊಳ್ಳುತ್ತೇನೆ. ಲ್ಯಾಬ್‌ಗಳು ಯಾವುದೂ ಬಂದ್ ಆಗಲ್ಲ. ಅಲ್ಲಿ ಪಾಸಿಟಿವ್ ಬಂದರೂ ಎರಡು ಗಂಟೆ ಸ್ಯಾನಿಟೈಸೇಷನ್ ಮಾಡಿ ನಂತರ ಬದಲಿ ಸಿಬ್ಬಂದಿ ಕಾರ್ಯನಿರ್ವಹಿಸುವ ವ್ಯವಸ್ಥೆ ಅಗುತ್ತದೆ. ಬೆಂಗಳೂರು ದೊಡ್ಡ ಸಿಟಿ ಅಗಿರುವ ಕಾರಣ ನಿರ್ವಹಣೆ ದೊಡ್ಡ ಸವಾಲು. ಅದಕ್ಕೆ ದೊಡ್ಡ ನಗರಕ್ಕೆ ವಿಶೇಷ ಆದ್ಯತೆ ಕೊಡಬೇಕಾಗುತ್ತದೆ ಎಂದಿದ್ದಾರೆ.

ಕಡಿಮೆ ಸೋಂಕಿತರು

ಕಡಿಮೆ ಸೋಂಕಿತರು

ಭಾರತದಲ್ಲಿ ಇಡೀ ವಿಶ್ವದಲ್ಲೇ ಕಡಿಮೆ ಕೊರೊನಾ ವೈರಸ್ ಸೋಂಕಿತರಿದ್ದಾರೆ. ಉತ್ತಮ ನಾಯಕತ್ವ ಇರೋದ್ರಿಂದ ದೇಶ ಭರವಸೆಯ ದಿಕ್ಕಿನಲ್ಲಿ ಸಾಗುತ್ತಿದೆ. ಭಾರತ ಕೋವಿಡ್ ರೋಗಾಣುವನ್ನು ನಿಯಂತ್ರಣ ಮಾಡಿದ ಕ್ರಮವನ್ನು ಇಡೀ ಪ್ರಪಂಚ ನೋಡುತ್ತಿದೆ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿಕೆ ಕೊಟ್ಟಿದ್ದಾರೆ.

ಪ್ರಧಾನಿಗೆ ಅಭಿನಂದನೆ

ಪ್ರಧಾನಿಗೆ ಅಭಿನಂದನೆ

ಕೊರೊನಾವೈರಸ್, ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಜನ ಇರಬಾರದೆಂದು ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಲಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಹೀಗಾಗಿ ಯೋಜನೆಯನ್ನು ನವೆಂಬರ್ ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.

ರಾಜ್ಯದ ಜನತೆಯ ಪರವಾಗಿ ಪ್ರಧಾನಿಗಳಿಗೆ ಅಭಿನಂದನೆಗಳು. ಒನ್‌ ನೇಷನ್ ಒನ್ ಕಾರ್ಡ್ ಬರಲಿದೆ. ಅದರ ಜಾರಿಗೆ ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ಅನನುಕೂಲತೆ ಆಗದಿರಲೆಂದು ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.

English summary
On one hand, coronavirus outbreaks are on the rise across the country. Coronavirus patients in Bengaluru are dying without treatment. On the other hand DCM Dr. Ashwath Narayan said the infection did not spread as much to the country's population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X