ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಟಿಪಿ ಕಳ್ಳರಿದ್ದಾರೆ ಎಚ್ಚರಿಕೆ, ಟೆಕ್ಕಿಗಳೇ ಅವರ ಟಾರ್ಗೆಟ್

|
Google Oneindia Kannada News

ಬೆಂಗಳೂರು, ಜನವರಿ 16: ಓಟಿಪಿ(ಒನ್‌ ಟೈಮ್ ಪಾಸ್‌ವರ್ಡ್) ಕದಿಯುವ ಕಳ್ಳರು ನಗರದಲ್ಲಿ ಹೆಚ್ಚಾಗಿದ್ದು, ಅತಿ ಹೆಚ್ಚು ಟೆಕ್ಕಿಗಳೇ ಅವರ ಶಿಖಾರಿಗಳಾಗಿದ್ದಾರೆ.

ಹೊಸ ತಂತ್ರದಿಂದ ಟೆಕ್ಕಿಗಳ ಲಕ್ಷಾಂತರ ರೂಗಳಿಗೆ ಪಂಗನಾಮ ಹಾಕಿದ್ದಾರೆ.ಆದರೆ ಒಂದೇ ಒಂದು ಅಪರಾಧಿಯೂ ಇಲ್ಲಿಯವರೆಗೆ ಪೊಲೀಸರ ಕೈಗೆ ಸಿಗದಿರುವುದು ವಿಪರ್ಯಾಸವೇ ಸರಿ.

ರಾಜ್ಯದ ಏಕೈಕ ಸೈಬರ್‌ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ! ರಾಜ್ಯದ ಏಕೈಕ ಸೈಬರ್‌ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ!

ಅವರ ಲ್ಯಾಪ್‌ಟಾಪ್‌ನಲ್ಲಿ ಒಟಿಪಿ ಮೂಲಕ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಅದರಿಂದ ಸುಲಭವಾಗಿ ಬ್ಯಾಂಕ್‌ನಿಂದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.

OTP theft on rise, many techies victims

ಓಟಿಪಿ ಕಳ್ಳರು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಪ್‌ಡೇಟ್ ಮಾಡಬೇಕು ಎಂದು ಕೇಳುತ್ತಾರೆ, ಬಳಿಕ ನಿಮ್ಮ ಮೊಬೈಲ್‌ಗೆ ಒಂದು ಓಟಿಪಿ ಬರುತ್ತದೆ ಅದನ್ನು ತಿಳಿಸಿ ಎಂದು ಹೇಳುತ್ತಾರೆ ಓಟಿಪಿಯನ್ನು ಹೇಳಿದ ಬಳಿಕ ಕಾಲ್ ಕಟ್ ಮಾಡಿ, ಆ ಓಟಿಪಿ ಬಳಸಿ ಹಣವನ್ನು ಲೂಟಿ ಮಾಡುತ್ತಾರೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು 2-3 ತಿಂಗಳಿನಿಂದ ಈ ಕುರಿತು ದೂರುಗಳು ಬರಲಾರಂಭಿಸಿವೆ.ಮೊದಲು 5-10 ಸಾವಿರ ಕದ್ದರೆ ದಿನದಿಂದ ದಿನಕ್ಕೆ ಹೆಚ್ಚಾಗಿ ಇದೀಗ 50ರಿಂದ 1 ಲಕ್ಷ ರೂ ಕದಿಯುತ್ತಿದ್ದಾರೆ ಎಂದರು. ಶೀಘ್ರವೇ ಸೈಬರ್ ಕಳ್ಳರನ್ನು ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

English summary
A new form of OTP (one-time password) theft is on the rise in Bengaluru, and many IT employees have become its victims. Lakhs of rupees have been stolen using this method, but not a single culprit has been apprehended so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X