ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಔಟರ್‌ ರಿಂಗ್ ರೋಡ್ ಮೆಟ್ರೋ: ಮಾರ್ಚ್ ಅಂತ್ಯಕ್ಕೆ ಗುತ್ತಿಗೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 04: ಸಿಲ್ಕ್ ಬೋರ್ಡ್ ಹಾಗೂ ಕೆಆರ್ ಪುರಂ ಎರಡನೇ ಹಂತದ ನಮ್ಮ ಮೆಟ್ರೋ ಕಾರಿಡಾರ್ ಗುತ್ತಿಗೆಯನ್ನು ಮಾರ್ಚ್ ಅಂತ್ಯದೊಳಗೆ ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಮೆಟ್ರೋ ಕಾರಿಡಾರ್ ಯೋಜನೆಗೆ ವೇಗ ಸಿಕ್ಕಿದಂತಾಗುತ್ತದೆ. ಮೂರು ವರ್ಷ ಟೆಂಡರ್ ರದ್ದುಗೊಳಿಸುವುದು,ಅಥವಾ ಬಿಡ್ ಮುಂದೂಡುವುದರಲ್ಲೇ ಕಳೆದುಹೋಗಿತ್ತು.

ಬಜೆಟ್; ಬೆಂಗಳೂರು ಏರ್ ಪೋರ್ಟ್‌ ಮೆಟ್ರೋಗೆ ಕೇಂದ್ರದ ಒಪ್ಪಿಗೆಬಜೆಟ್; ಬೆಂಗಳೂರು ಏರ್ ಪೋರ್ಟ್‌ ಮೆಟ್ರೋಗೆ ಕೇಂದ್ರದ ಒಪ್ಪಿಗೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ನಮ್ಮ ಮೆಟ್ರೋ ರೈಲು ಯೋಜನೆಗೆ ಬರೋಬ್ಬರಿ 14,788 ಕೋಟಿ ರೂ. ಘೋಷಣೆ ಮಾಡುವ ಮೂಲಕ ನಗರಕ್ಕೆ ಬಂಪರ್‌ ಕೊಡುಗೆ ನೀಡಿದ್ದಾರೆ.

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಏರ್‌ಪೋರ್ಟ್

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಏರ್‌ಪೋರ್ಟ್

ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೀಚ್‌-2ಎ ಹಾಗೂ ರೀಚ್‌-2ಬಿ ನ ಒಟ್ಟು 58.19 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಗೆ ಈ ಅನುದಾನ ನೀಡಲಾಗಿದೆ. ಇದರಿಂದ ವಿಶೇಷವಾಗಿ ಐಟಿ ಉದ್ಯೋಗಿಗಳು ಹಾಗೂ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ

ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ

ಈಗಾಗಲೇ ಬೆಂಗಳೂರು ನಗರದಲ್ಲಿನಮ್ಮ ಮೆಟ್ರೋ 1ನೇ ಹಂತದಲ್ಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಒಂದನೇ ಹಂತ ವಿಸ್ತರಿತ ಮಾರ್ಗದ ಕಾಮಗಾರಿಗಳು ಸಹ ನಡೆಯುತ್ತಿವೆ. 2ನೇ ಹಂತದ ಮಾರ್ಗದ ಕಾಮಗಾರಿಗಳು ನಡೆಯತ್ತಿವೆ. ಎರಡನೇ ಹಂತದ ವಿಸ್ತರಿತ ಮಾರ್ಗದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತದೆ.

ಭೂಸ್ವಾಧೀನ ಪ್ರಕ್ರಿಯೆ

ಭೂಸ್ವಾಧೀನ ಪ್ರಕ್ರಿಯೆ

ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಕ್ಕೆ (ಕೆಐಎಎಲ್‌) 'ನೀಲಿ ಮಾರ್ಗ'ವೆಂದು ಹೆಸರಿಟ್ಟಿದೆ. ಸಿಲ್ಕ್ ಬೋರ್ಡ್‌ನಿಂದ ಹೊರವರ್ತುಲ ರಸ್ತೆ ಮೂಲಕ ಕೆ.ಆರ್‌.ಪುರಕ್ಕೆ ಸಂಪರ್ಕ ಕಲ್ಪಿಸುವ 2 'ಎ' ಹಂತದ 17.13 ಕಿ.ಮೀ. ಮಾರ್ಗದಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಲ್ಲಿ ಒಟ್ಟು 13 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ 2.18 ಹೆಕ್ಟೇರ್‌ ಸರಕಾರಿ ಮತ್ತು 2.64 ಹೆಕ್ಟೇರ್‌ ಖಾಸಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada
ಕೆಆರ್ ಪುರಂನಿಂದ ಕೆಂಪೇಗೌಡ ಏರ್‌ಪೋರ್ಟ್

ಕೆಆರ್ ಪುರಂನಿಂದ ಕೆಂಪೇಗೌಡ ಏರ್‌ಪೋರ್ಟ್

ಈ ಮಾರ್ಗದ ಮೆಟ್ರೋ ಕೆ.ಆರ್‌.ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಒಟ್ಟು 29.06 ಕಿ.ಮೀ. ಇರುವುದನ್ನು 38 ಕಿ.ಮೀ ಮಾರ್ಗಕ್ಕೆ ವಿಸ್ತರಿಸಲಾಗಿದೆ. ಏಳು ನಿಲ್ದಾಣಗಳ ಬದಲಿಗೆ 17 ನಿಲ್ದಾಣವನ್ನು ಹೊಂದಿದೆ. ಈ ಯೋಜನೆಗೆ ಸಂಬಂಧಿಸಿದಂತೆ 31.88 ಹೆಕ್ಟೇರ್‌ ಜಾಗದ ಅವಶ್ಯಕತೆಯಿದ್ದು, 12.5 ಹೆಕ್ಟೇರ್‌ ಸರಕಾರಿ ಮತ್ತು 19.3 ಹೆಕ್ಟೇರ್‌ ಖಾಸಗಿಯವರಿಂದ ವಶಪಡಿಸಿಕೊಳ್ಳಲಾಗಿದೆ.

English summary
Namma Metro is set to award the contract of its most-awaited corridor between Silk Board and KR Puram (Phase 2A) by March-end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X