ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓರಿಯನ್ ಮಾಲ್ 'ಫನ್ ಲೀಗ್' ಚಿಣ್ಣರ ಉತ್ಸವ

By Rajendra
|
Google Oneindia Kannada News

ಬೆಂಗಳೂರು, ಮೇ 17. 2014: ಬ್ರಿಗೇಡ್ ಗೇಟ್ ವೇನಲ್ಲಿರುವ ಓರಿಯನ್ ಮಾಲ್ ಮಕ್ಕಳ ಮಜಾ ಮತ್ತು ಆಟೋಟಗಳ ಉತ್ಸವ - ಫನ್ ಲೀಗ್ ಗೆ ಚಾಲನೆ ನೀಡಿದೆ. ತನ್ನ ಸಾಂಪ್ರದಾಯಿಕ ವೈಭವೋಪೇತ ಶೈಲಿಯಲ್ಲಿ ನಡೆಯುವ ಈ ಉತ್ಸವ ಮೇ 18ರವರೆಗೆ ನಡೆಯಲಿದೆ.

ಓರಿಯನ್ ಮಾಲ್ ಆವರಣದಲ್ಲಿರುವ ಸರೋವರದ ದಡದಲ್ಲಿ ಈ ಉತ್ಸವವು 10 ದಿನಗಳ ಕಾಲ ನಡೆಯಲಿದ್ದು, ಟಿಕೆಟ್ ನೀಡಿ ಪ್ರವೇಶ ಪಡೆಯಬೇಕು. ಉತ್ಸವವು ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ನಡೆಯಲಿದೆ. 16 ವರ್ಷಗಳೊಳಗಿನ ಎಲ್ಲ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಾಗಾಗಿ, ಅತ್ಯಂತ ಅಗಾಧ ಸಂತೋಷವನ್ನು ನೀಡುವ ಈ ಉತ್ಸವಕ್ಕೆ ಇಡೀ ಕುಟುಂಬವನ್ನು ಕರೆತರುವ ಸಮಯವಿದು.

ಈಗ ಬೇಸಗೆ ರಜೆಯ ದಿನ. ಎಲ್ಲ ಹೆತ್ತವರೂ ತಮ್ಮ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಖುಷಿ ನೀಡಬೇಕೆಂದು ಬಯಸುತ್ತಾರೆ. ಅಂತಹ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಿರುವಾಗ ಇಡೀ ಕುಟುಂಬವನ್ನೇ ಮಾಲ್ ಗೆ ಕರೆತಂದು, ಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿರುವ ಉತ್ಸವದಲ್ಲಿ ಪಾಲ್ಗೊಂಡು ರಜೆಯ ಮಜಾ ಅನುಭವಿಸುವುದಕ್ಕಿಂತ ಬೇರೆ ಆಯ್ಕೆ ಇದೆಯೇ?

ಸರೋವರದ ದಡದಲ್ಲಿ ಅಲಂಕಾರ ಮಾಡುವುದರಿಂದ ಹಿಡಿದು ಮಕ್ಕಳಿಗೆ ಇಲ್ಲಿ ತುಂಬಾ ಕುತೂಹಲಕಾರಿ, ಖುಷಿಕೊಡುವ ವಿಷಯಗಳಿವೆ. ಬಣ್ಣಬಣ್ಣದ ಧ್ವಜಗಳಿಂದ ಕೂಡಿರುವ ಪ್ರವೇಶ ಕಮಾನು ಮಕ್ಕಳನ್ನು ಅತ್ಯಂತ ಆದರದಿಂದ ಬರಮಾಡಿಕೊಳ್ಳುತ್ತದೆ.

ನಮಗೆಲ್ಲರಿಗೂ ಬಾಲ್ಯದಲ್ಲಿ ಗಂಟೆಗಟ್ಟಲೆ ಮನರಂಜನೆ ನೀಡಿದ ಟೆಲಿಮ್ಯಾಚ್ ಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದ್ದು, ಆ ಮೂಲಕ ಫನ್ ಲೀಗ್ ಗೆ ಬರುವ ಕುಟುಂಬಗಳಿಗೆ ಮನರಂಜನೆ ನೀಡಲಾಗುತ್ತದೆ. ಪ್ರತಿ ದಿನವೂ ಸರೋವರದ ದಡದಲ್ಲಿ ಟೆಲಿ-ಮ್ಯಾಚ್ ಥೀಮ್ ಇರುವ ಆಟೋಟಗಳನ್ನು ಏರ್ಪಡಿಸಲಾಗುವುದು.

ಎಲ್ಲ ದಿನಗಳಲ್ಲೂ, ಮಕ್ಕಳಿಗೆ 3 ಟೆಲಿ-ಮ್ಯಾಚ್ ಆಟಗಳನ್ನು ಆಡುವ ಅವಕಾಶವಿರುತ್ತದೆ. ಸಂಜೆ 5 ಗಂಟೆಯಾಗುತ್ತಲೇ ಇದು ಮುಗಿದು ವಿಜೇತರ ಗೋಡೆಯನ್ನು ಅಳವಡಿಸಿ, ಗೆದ್ದವರಿಗೆ ಬಹುಮಾನಗಳನ್ನೂ ವಿತರಿಸಲಾಗುತ್ತದೆ.

ಮಕ್ಕಳಿಗೆ ಖುಷಿ ನೀಡುವಂತಹ ಕೆಲವೊಂದು ಆಟಗಳೆಂದರೆ- ಸ್ಕ್ಯಾಂಬಲ್ಡ್ ಎಗ್ಸ್, ಬ್ರಿಕ್ ವಾಲ್, ವಾಟ್ ಎ ಮೆಷ್, ಸ್ಪಿನ್ನಿಂಗ್ ವೀಲ್, ಮೇಕ್ ಇಟ್ ಎ ಗೋಲ್, ಜಂಪ್ ದಿ ಹರ್ಡಲ್ಸ್, ಬೌನ್ಸಿಂಗ್ ಬಾಲ್ ಮತ್ತು ವಿನ್ನಿಂಗ್ ವಾಲ್. ಗಾಳಿ ತುಂಬಿಸುವ ಅಥವಾ ಊದುವ ಆಟವೂ ಇದ್ದು, ಪ್ರತಿ 4 ದಿನಗಳಿಗೊಮ್ಮೆ ಇದು ಬದಲಾಗುತ್ತಾ ಇರುತ್ತದೆ. ಮಕ್ಕಳು ಹೆಚ್ಚು ಮಜಾ ಅನುಭವಿಸುವ ಗಾಳಿ ಊದುವ ಆಟಗಳೆಂದರೆ, ವೆಲ್ಕ್ರೋ ಬಾಲ್, ಬಂಗೀ ರೇಸ್ ಮತ್ತು ಕ್ರ್ಯಾಷಿಂಗ್ ಬೌಲ್ಡರ್ಸ್.

ಚೆಲ್ಲಾಟದ ಮೋಜು, ಆಟೋಟಗಳಲ್ಲದೆ, ಈ ಉತ್ಸವದಲ್ಲಿ ಅನೇಕ ಮನರಂಜನೆಗಳನ್ನೂ ಒದಗಿಸಲಾಗುತ್ತದೆ. ನೆಲಬಿಟ್ಟು ಎತ್ತರದಲ್ಲಿ ಹೆಜ್ಜೆ ಇಟ್ಟು ನಡೆಯುವವರು (ಸ್ಟಿಲ್ಟ್ ವಾಕರ್ಸ್), ಎತ್ತರದ ಕೀಲುಬೊಂಬೆ, ಕೋಡಂಗಿ ಅಭಿನಯ ಮಾಡುವವರು ಬಹುತೇಕ ದಿನಗಳಲ್ಲಿ ಸಂಜೆ 4ರಿಂದ 7 ಗಂಟೆಯವರೆಗೆ ಸರೋವರದ ಸುತ್ತಮುತ್ತಲೂ ಓಡಾಡುತ್ತಾರೆ.

ಇದು ಮಕ್ಕಳಿಗಂತೂ ವಿಶೇಷ ಮಜಾ ಮತ್ತು ಮನರಂಜನೆಯನ್ನು ನೀಡಲಿದೆ. ಸಾಯಂಕಾಲಗಳಲ್ಲಿ ಸಂಗೀತ ಸಂಜೆಗಳೂ ನಡೆಯಲಿದ್ದು, ದೊಡ್ಡವರು ಮಾತ್ರವಲ್ಲದೆ ಪುಟ್ಟಪುಟ್ಟ ಮಕ್ಕಳೂ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಲಿದ್ದಾರೆ.

ಕಾರ್ಯಕ್ರಮ ನಿರ್ವಾಹಕರು ಸುತ್ತಲೂ ಸಂಚರಿಸುತ್ತಾ, ಅಲ್ಲಿ ಬಂದಿರುವ ಜನರಲ್ಲಿ ಸಂವಾದ ನಡೆಸುತ್ತಾ, ನಡೆಯುವ ವಿವಿಧ ಚಟುವಟಿಕೆಗಳನ್ನು ಘೋಷಿಸುವುದು ಮಾತ್ರವಲ್ಲದೇ, ಅದರಲ್ಲಿ ಪಾಲ್ಗೊಳ್ಳುವಂತೆ ಎಲ್ಲರಿಗೂ ಉತ್ತೇಜನ ನೀಡುತ್ತಾರೆ. ಇಷ್ಟೇ ಅಲ್ಲದೆ, ಉತ್ಸವಕ್ಕೆ ಆಗಮಿಸಿದ ಕುಟುಂಬಗಳಿಗೆ ಓರಿಯನ್ ಮಾಲ್ ನಲ್ಲಿ ದೇಶದ ಅತಿದೊಡ್ಡ ಬೌಲಿಂಗ್ ಆವರಣ, ಬ್ಲೂಓ, ಟೈಮ್ ಝೋನ್, 11 ಸ್ಕ್ರೀನ್ ಪಿವಿಆರ್ ಮತ್ತೂ ಅನೇಕ ಮನರಂಜನಾ ಆಯ್ಕೆಗಳೂ ಇರುತ್ತವೆ.

Orian Mall fun league

"ಬೇಸಗೆ ರಜೆಯಲ್ಲಿ ಹೊರಾಂಗಣದ ಮುಕ್ತ ಸ್ಥಳದಲ್ಲಿ ಹಾಗೂ ಸುರಕ್ಷಿತ ಪ್ರದೇಶದಲ್ಲಿ ಮನರಂಜನೆ ಸಿಗುವಂತಿರಬೇಕು ಎಂದು ಹೆತ್ತವರು ಹಾತೊರೆಯುತ್ತಾರೆ. ಇದರ ಜತೆಗೇ, ಕುಟುಂಬಕ್ಕೆ ಸಿಗುವ ಮನರಂಜನೆಗೂ ಆದ್ಯತೆ ನೀಡುತ್ತಾರೆ. ನಮ್ಮ 'ಫನ್ ಲೀಗ್' ಉತ್ಸವವು ಮಕ್ಕಳಿಗೆ ಸಾಕಷ್ಟು ಮಜಾ, ಆಟಗಳ ಖುಷಿ ಮತ್ತು ಮನರಂಜನೆಯನ್ನು ಒದಗಿಸುವ ಅತ್ಯದ್ಭುತ ಅವಕಾಶ ನೀಡುತ್ತದೆ ಎನ್ನುವುದಂತೂ ಖಾತ್ರಿ..."

"ಪ್ರತಿಯೊಂದು ಆಟಕ್ಕೂ ಬದ್ಧತೆಯಿರುವ ಸಿಬ್ಬಂದಿ ಹಾಗೂ ಮೇಲ್ವಿಚಾರಕರನ್ನು ನಿಯೋಜಿಸಲಾಗಿದ್ದು, ಅವರು ಮಕ್ಕಳಿಗೆ ಭಾರಿ ಖುಷಿಯನ್ನು ನೀಡುವುದರ ಜತೆಗೆ ಅವರ ಸಂಪೂರ್ಣ ಸುರಕ್ಷತೆಯನ್ನೂ ನೋಡಿಕೊಳ್ಳುತ್ತಾರೆ" ಎನ್ನುತ್ತಾರೆ ಬ್ರಿಗೇಡ್ ಗ್ರೂಪ್ ಕಮರ್ಷಿಯಲ್ ಮತ್ತು ರಿಟೇಲ್ ಸಿಇಓ ವಿಶಾಲ್ ಮಿರ್‍ಚಂದಾನಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.orionmalls.com ಜಾಲತಾಣಕ್ಕೆ ಭೇಟಿನೀಡಿ. (ಒನ್ಇಂಡಿಯಾ ಕನ್ನಡ)

English summary
Orion Mall at Brigade Gateway, Bangalore announces the unveiling of the Fun League – a children’s fun and games festival which is on till May 18th in its customary grand style. Fun League will be a 10-day ticketed event by the lakeside area of the mall. The fest will be on from 2PM to 9PM. The fun and entertainment is open to all youngsters below the age of 16 years and so, it’s time to bring the whole family over for a whale of a time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X