• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒರಾಯನ್ ಮಾಲ್ ನಲ್ಲಿ ಕ್ರಿಸ್‍ಮಸ್ ಸಡಗರ ಸಂಭ್ರಮ

By Rajendra
|

ಬೆಂಗಳೂರು, ಡಿಸೆಂಬರ್ 24: ಕ್ರಿಸ್‍ಮಸ್ ಬಂದೇಬಿಡ್ತು. ಈ ಬಾರಿಯ ಕ್ರಿಸ್‍ಮಸ್ ಭರ್ಜರಿಯಾಗಿ ಸ್ವಾಗತ ಮಾಡಲು ಒರಾಯನ್ ಮಾಲ್ ಸಂಪೂರ್ಣ ಸಜ್ಜಾಗಿದೆ. ಕ್ರಿಸ್‍ಮಸ್ ಗೆ ಗ್ರಾಹಕರು ಕುಟುಂಬ ಸಮೇತರಾಗಿ ಬಂದು ಎಂಜಾಯ್ ಮಾಡಲು ಒರಾಯನ್ ಮಾಲ್ ಸಿದ್ಧತೆ ನಡೆಸಿದೆ.

ಬ್ರಿಗೇಡ್ ಗ್ರೂಪ್ ನ ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ಭಾಗವಾಗಿರುವ ಒರಾಯನ್ ಮಾಲ್, ಕ್ರಿಸ್‍ಮಸ್ ಗಾಗಿ ಸಾಂತಾ ಕ್ಲಾಸ್, ಸ್ನೋಮ್ಯಾನ್ ಕ್ಯಾರಕ್ಟರ್ ಮತ್ತು ಕ್ರಿಸ್‍ಮಸ್ ಕ್ಯಾರೋಲ್ಸ್ ಮುಂತಾದ ವಿಭಿನ್ನ ಕಾನ್ಸೆಪ್ಟ್ ಗಳಿಂದ ಕ್ರಿಸ್‍ಮಸ್ ಆಚರಣೆಯನ್ನು ಅನನ್ಯವಾಗಿಸಲು ತಯಾರಿ ನಡೆಸಿದೆ.

ಮಕ್ಕಳು ಅಪರಾಹ್ನ 1 ರಿಂದ 3ರ ತನಕ ಮತ್ತು ಸಂಜೆ 5ರಿಂದ 9ರ ತನಕ ಸಾಂತಾನನ್ನು ಮೀಟ್ ಮಾಡಿ ಖುಷಿ ಪಡಬಹುದು. ಕಿಡ್ಸ್ ಎಕ್ಸ್ ಮಾಸ್ ಡ್ರೆಸ್ ಅಪ್ ಫೋಟೋ ಆಪ್ಶನ್ ಬೆಳಗ್ಗೆ 11ರಿಂದ ರಾತ್ರಿ 8ರ ತನಕ ಲಭ್ಯ ಇರುತ್ತದೆ. [ ವಿಶೇಷ: ಕ್ರಿಸ್ಮಸ್ ಕುರಿತು ಯಜಮಾನ್ ಫ್ರಾನ್ಸಿಸ್ ಲೇಖನ]

ಒರಾಯನ್ ಮಾಲ್ ನಲ್ಲಿ ಕ್ರಿಸ್‍ಮಸ್ ಆಚರಣೆಯ ಕುರಿತು ಮಾತನಾಡಿದ ಒರಾಯನ್ ಮಾಲ್ ಜನರಲ್ ಮ್ಯಾನೇಜರ್ ಸುನಿಲ್ ಮುನ್ಷಿ, "ಹಬ್ಬದೊಂದಿಗಿನ ಮೋಜು ಹಾಗೂ ಹುರುಪಿನೊಂದಿಗೆ ಕ್ರಿಸ್‍ಮಸ್ ಆಚರಣೆಗಾಗಿ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ವಿವಿಧ ರೀತಿಯ ಅಲಂಕಾರ ಮತ್ತು ಜನಪ್ರಿಯ ಕ್ರಿಸ್‍ಮಸ್ ಸಂಕೇತಗಳಲ್ಲದೆ, ನಾವು ಕಿಡ್ಸ್ ಎಕ್ಸ್ ಮಾಸ್ ಡ್ರೆಸ್-ಅಪ್ ಫೋಟೋ ಆಪ್ಶನ್ ಅನ್ನೂ ಆಯೋಜಿಸಿದ್ದೇವೆ. ಇದು ನಮ್ಮ ಗ್ರಾಹಕರಿಗೆ ಕೌಟುಂಬಿಕ ವಾತಾವರಣ ನಿರ್ಮಿಸಲಿದೆ'' ಎಂದರು.

ಸುನಿಲ್ ಮುನ್ಷಿ ಪ್ರಕಾರ, ಒರಾಯನ್ ಮಾಲ್ ಗೆ ಪೂರ್ತಿಯಾಗಿ ಕ್ರಿಸ್‍ಮಸ್ ಮೆರುಗು ನೀಡಲಾಗಿದೆ. ಈ ಋತುವಿಗಾಗಿ ದೊಡ್ಡ ಸ್ಲೆಡ್ಜ್ ಲೇಡನ್ ನೊಂದಿಗೆ ಉಡುಗೊರೆಗಳು ಹಾಗೂ ಎಂಟು ಹಿಮಸಾರಂಗಗಳು ಹಾಗೂ ಕೆಂಪು ರಿಬ್ಬನ್‍ಗಳು ಹಾಗೂ ಚಿನ್ನದ ಬಣ್ಣದ ನಕ್ಷತ್ರಗಳೊಂದಿಗೆ ಅಲಂಕೃತವಾದ ಒಂದು ದೈತ್ಯ ಕ್ರಿಸ್‍ಮಸ್ ಟ್ರೀಯನ್ನು ಸಿಂಗರಿಸಲಾಗಿದೆ. [ಮಕ್ಕಳಿಗೆ ಮುದ ನೀಡುವ ಕ್ರಿಸ್ಮಸ್,ಸಾಂತಾಕ್ಲಾಸ್]

ದೊಡ್ಡ ಹಸಿರು ಬೆಲ್ ಗಳನ್ನು ಛಾವಣಿಯಿಂದ ಜೋತು ಬಿಡಲಾಗಿದೆ. ಒಂದು ದೊಡ್ಡ ಕೆಂಪು ಸ್ಟಾಕಿಂಗ್, ಥ್ರೋನ್ ಹಾಗೂ ಸಾಂತಾಗಾಗಿ ಒಂದು ಕೆಂಪು ಮೇಲ್ ಬಾಕ್ಸ್ ಹೀಗೆ ಮಾಲ್ ನಲ್ಲಿ ಕ್ರಿಸ್‍ಮಸ್ ಗಾಗಿ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗಿದೆ.

"ಕ್ರಿಸ್‍ಮಸ್ ಎಂಬುದು ಖುಷಿಯ ಹಾಗೂ ವಿನೋದದ ಗಳಿಗೆಯಾಗಿದೆ. ಹಾಗೂ ಒರಾಯನ್ ಮಾಲ್‍ ಅಲಂಕಾರವು ತುಂಬಾ ಚಿಂತನೆಯಿಂದ ಕೂಡಿದೆ. ಇದು ನಮ್ಮ ಗ್ರಾಹಕರನ್ನು ಖುಷಿಗೊಳಿಸುತ್ತದೆ ಹಾಗೂ ಅವರಲ್ಲಿ ಉಲ್ಲಾಸ ಮೂಡಿಸುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ'' ಎಂದು ಹೇಳುತ್ತಾರೆ ಸುನಿಲ್ ಮುನ್ಷಿ. (ಒನ್ಇಂಡಿಯಾ ಕನ್ನಡ)

English summary
Christmas is around the corner and the Orion Mall is all set to bring in the festive cheer with celebrations that revolve around shopping experience for the family. Children can catch Santa between 1 pm to 3pm in the afternoon and 5pm to 9 pm in the evening. Kids X Mas Dress-Up Photo Option will be available from 11 am to 8 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X