ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ಬಾಗ್‌ನಲ್ಲಿ ಅಂದದ ಆರ್ಕಿಡ್‌ ಹೂಗಳ ಪ್ರದರ್ಶನ

|
Google Oneindia Kannada News

ಬೆಂಗಳೂರು, ಅ.15 : ವಾರಗಳೂ ಕಳೆದರೂ ಬಾಡದೆ ಜನರನ್ನು ಆಕರ್ಷಿಸುವ ಆರ್ಕಿಡ್ ಹೂಗಳನ್ನು ನೋಡಲು ಲಾಲ್‌ಬಾಗ್‌ಗೆ ಬನ್ನಿ. ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಲಾಲ್‌ಬಾಗ್‌ನಲ್ಲಿ ಮೂರು ದಿನಗಳ 'ಆರ್ಕಿಡ್ ಪುಷ್ಪ ಮೇಳ- 2014'ನ್ನು ಆಯೋಜಿಸಿದೆ. ಸುಂದರವಾದ ಹೂಗಳನ್ನು ನೋಡುವ ಜೊತೆಗೆ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶವನ್ನು ಕಲ್ಪಿಸಲಾಗಿದೆ.

ಆರ್ಕಿಡ್ ಪುಷ್ಪಗಳ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡಲು ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಲಾಲ್‌ಬಾಗ್‌ನ ಡಾ. ಎಂ.ಎಚ್. ಮರಿಗೌಡ ಸಭಾಂಗಣದಲ್ಲಿ ಅ.17 ರಿಂದ 19ರವರೆಗೆ 'ಆರ್ಕಿಡ್ ಪುಷ್ಪ ಮೇಳ- 2014' ಆಯೋಜಿಸಿದೆ. ಮೇಳದಲ್ಲಿ ಆರ್ಕಿಡ್ ಪುಷ್ಪಗಳನ್ನು ನೋಡಿ ಆನಂದಿಸುವ ಜೊತೆಗೆ ಇಷ್ಟವಾದ ಹೂವಿನ ಗಿಡಗಳನ್ನು ಖರೀದಿಸಿ ಮನೆಗೂ ತೆಗೆದುಕೊಂಡು ಹೋಗಬಹುದು.

Orchid

ಆರ್ಕಿಡ್ ಪುಷ್ಪ ಮೇಳ- 2014ರ ಬಗ್ಗೆ ಮಾಹಿತಿ ನೀಡಿರುವ ಸೊಸೈಟಿ ಅಧ್ಯಕ್ಷ ಡಾ.ಕೆ.ಎಸ್. ಶಶಿಧರ್ ಅವರು, ಕಾಡಿನಲ್ಲಿ ಬೆಳೆಯುವ 270ಕ್ಕೂ ಹೆಚ್ಚು ತಳಿಯ ಹಾಗೂ ಭಾರತದಲ್ಲಿ ಬೆಳೆ­ಯುವ ಸುಮಾರು 1,300 ಕ್ಕೂ ಹೆಚ್ಚು ಪುಷ್ಪ ತಳಿಗಳು ಇಂದು ಒಂದೊಂದಾಗಿ ಕಣ್ಮರೆಯಾ­ಗುತ್ತಿವೆ. ಆದ್ದರಿಂದ ಕಾಡಿನ ಪುಷ್ಪಗಳನ್ನು ಸಂರಕ್ಷಿಸುವುದೇ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. [ಬೆಂಗಳೂರು ಹೂವಿನ ಅರಮನೆಯಲ್ಲಿ ಹಂಪಿ ಕಲ್ಲಿನ ರಥ]

ಮೂರು ದಿನಗಳ ಪ್ರದರ್ಶನದಲ್ಲಿ ಸೊಸೈಟಿಯ ಸುಮಾರು 300ಕ್ಕೂ ಹೆಚ್ಚು ಸದಸ್ಯರು ಬೆಳೆದಿರುವ ಡೆಂಡ್ರೋಬಿಯಮ್ಸ್, ಪ್ಯಾಪಿಲೊ ಪೀಡಿಯಂ, ವ್ಯಾಂಡಾ ಮತ್ತಿತರ 50 ತಳಿಯ ಆರ್ಕಿಡ್ ಹೂವಿನ ಸಸಿಗಳನ್ನು ಪ್ರದರ್ಶಿಸಲಾಗುವುದು. ಇದಲ್ಲದೆ ಹೈಬ್ರೀಡ್ ತಳಿಗಳಾದ ಫಲನೊಪ್ಸಿಸ್, ವ್ಯಾಂಡಾ, ವೊಕಾರಾ ಸೇರಿದಂತೆ ಹಲವು ಬಗೆಯ ಆರ್ಕಿಡ್‌ ಹೂಗಳನ್ನು ಪ್ರದರ್ಶಿಸಲಾಗುವುದು ಎಂದು ಶಶಿಧರ್ ತಿಳಿಸಿದರು. [ಆರ್ಕಿಡ್ ಸೊಸೈಟಿ ವೆಬ್ ಸೈಟ್ ನೋಡಿ]

ಇದರೊಂದಿಗೆ ಮಾರಾಟಕ್ಕೆಂದೇ ಸುಮಾರು 12 ಬಗೆಯ ಆರ್ಕಿಡ್ ತಳಿಗಳು ಪ್ರದರ್ಶನದಲ್ಲಿರುತ್ತವೆ. ಕಳೆದ ವಾರ ತೋಟಗಾರಿಕಾ ಇಲಾಖೆ ನರ್ಸರಿಮೆನ್ಸ್‌ ಕೋ-ಅಪರೇಟಿವ್‌ ಸೊಸೈಟಿ ಹಮ್ಮಿಕೊಂಡಿದ್ದ 'ಸಸ್ಯೋತ್ಸವ' ನೋಡಿಬಂದವರು ಈ ಭಾರಿ ಆರ್ಕಿಡ್‌ ಹೂಗಳನ್ನು ನೋಡಲು ಲಾಲ್‌ಬಾಗ್‌ಗೆ ಭೇಟಿ ಕೊಡಿ.

English summary
Orchid Society of Karnataka organized 'Orchid flower show 2014' in Lalbagh Dr. M.H. Marigowda Hall from October 17 to 19 to creating awareness about orchid cultivation and conservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X