• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್‌ ಆರ್‌ ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿ, ಗಲಾಟೆ!

|

ಬೆಂಗಳೂರು, ಅ. 27: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಚಾರಕ್ಕೆ ತಡೆಯೊಡ್ಡಿದ ಘಟನೆ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಯಶವಂತಪುರದ ಬಿ.ಕೆ. ನಗರದಲ್ಲಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ಅವರ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರೋಡ್ ಶೋ ಮೂಲಕ ಪ್ರಚಾರ ಭಾಷಣವನ್ನು ಮಾಡುತ್ತಿದ್ದರು.

ಇದೇ ವೇಳೆ ಯಶವಂತಪುರದ ಬಿ.ಕೆ. ನಗರಕ್ಕೆ ಸಿದ್ದರಾಮಯ್ಯ ಅವರು ಬರುತ್ತಿದ್ದಂತೆಯೆ ಪ್ರಧಾನಿ ಮೋದಿ ಪರವಾಗಿ ಕೆಲವರು ಘೋಷಣೆ ಹಾಕಲು ಆರಂಭಿಸಿದರು. ಜೊತೆಗೆ ಸಿದ್ದರಾಮಯ್ಯ ಅವರ ವಾಹನ ಮುಂದೆ ಹೋಗದಂತೆ ತಡೆಯಲಾಯ್ತು.

ಆರ್. ಆರ್. ನಗರ ಚುನಾವಣೆ; ಜಾತಿ ಲೆಕ್ಕಾಚಾರದ್ದೇ ಮಾತು

ಘಟನೆಯಿಂದ ಆಕ್ರೋಶಗೊಂಡ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ಪೊಲೀಸರಿಗೆ ತಡೆ ಒಡ್ಡದವರನ್ನು ವಶಕ್ಕೆ ಪಡೆಯುವಂತೆ ಸಿದ್ದರಾಮಯ್ಯ ಅವರು ಸೂಚಿಸಿದರು. ಇಲ್ಲದಿದ್ದರೆ ಪೊಲೀಸ್ ಠಾಣೆಗೆ ಬಂದು ಧರಣಿ ಮಾಡು ಎಚ್ಚರಿಕೆಯನ್ನೂ ಸಿದ್ದರಾಮಯ್ಯ ಅವರು ಪೊಲೀಸರಿಗೆ ಕೊಟ್ಟರು. ಜೊತೆಗೆ ಬೆಂಗಳೂರು ಮಹಾನಗರ ಪೊಲೀಸ್ ಕಮಿಶನರ್ ಅವರಿಗೂ ದೂರವಾಣಿಯಲ್ಲಿ ಮಾತನಾಡಿ ಗೂಂಡಾಗಳ ದೌರ್ಜನ್ಯವನ್ನು ತಡೆಯದಿದ್ದರೆ ನಿಮ್ಮ ನಿವಾಸದ ಎದುರು ಬಂದು ಧರಣಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ಈ ಗೂಂಡಾಗಿರಿಗೆ ಯಾರೂ ಹೆದರಬೇಡಿ

ಈ ಗೂಂಡಾಗಿರಿಗೆ ಯಾರೂ ಹೆದರಬೇಡಿ

ಏಯ್! ಯಾರೂ ಹೆದರಿಕೊಳ್ಳಬೇಡಿ. ಈ ಗೂಂಡಾಗಿರಿಗೆ ಹೆರದಬೇಡಿ. ಇದೇ ರೀತಿ ಗೂಂಡಾಗಿರಿ ಮುಂದುವರೆಸಿದರೆ ಬಿಜೆಪಿ ಎಲ್ಲಿಯೂ ಸಭೆ ಮಾಡಲು ಬಿಡುವುದಿಲ್ಲ. ಬಿಜೆಪಿಯವರು ಎಲ್ಲಿಯೂ ಕೂಡ ಸಭೆ ಮಾಡಲು ನಾವು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.

ಬೆಳಗ್ಗೆ ಏಳುವಾಗ ಸಂಜೆ ಮಲಗುವ ಮುನ್ನ ಇವರ ಮುಖ ನೋಡಬೇಕಿತ್ತು!

ಗೂಂಡಾಗಿರಿ, ದೌರ್ಜನ

ಗೂಂಡಾಗಿರಿ, ದೌರ್ಜನ

ಈ ಗೂಂಡಾಗಿರಿ, ದೌರ್ಜನ ಇದಕ್ಕೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ ಎಂದರು. ಪೊಲೀಸರನ್ನು ತರಾಟೆಗೆ ತಡಗೆದುಕೊಂಡ ಸಿದ್ದರಾಮಯ್ಯ ಅವರು ನಿಮ್ಮ ಪೊಲೀಸ್ ಠಾಣೆಗೆ ಬಂದು ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆಲ್ಲ ಹೆದರುವ ಮಕ್ಕಳಲ್ಲ ನಾವು

ಇದಕ್ಕೆಲ್ಲ ಹೆದರುವ ಮಕ್ಕಳಲ್ಲ ನಾವು

ಇಂತಹ ಗಲಾಟೆ ಮಾಡುವವರನ್ನು ಸಾವಿರಾರು ಜನರನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಹೆದರುವ ಮಕ್ಕಳಲ್ಲ ನಾವು. ಇದಕ್ಕೆಲ್ಲ ಬೆದರುವ ಮಕ್ಕಳಲ್ಲ ನಾವು. ಬಗ್ಗುವ ಮಕ್ಕಳಲ್ಲ ನಾವು ಎಂದು ಪ್ರಚಾರಕ್ಕೆ ತಡೆ ಒಡ್ಡಿದವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಚ್ಚರಿಕೆ ಕೊಟ್ಟರು.

ಮಾನ್ಪಡೆ ಸಾವಿಗೆ ನಾವು ಕಾರಣರಾಗಿದ್ದರೆ, ಒಂದೂ ಕಾಲು ಲಕ್ಷ ಜನ ಸತ್ತರಲ್ಲ ಅದಕ್ಕೆ ಯಾರು ಹೊಣೆ?

  Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada
  ಮುನಿರತ್ನಗೆ ಸೋಲಿನ ಭಯ

  ಮುನಿರತ್ನಗೆ ಸೋಲಿನ ಭಯ

  ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಗಲಾಟೆ ಮಾಡಲು ಇವರನ್ನು ಕಳಿಸಿದ್ದಾರೆ. ಸಿದ್ದರಾಮಯ್ಯ ಬಂದಿದ್ದಾರೆ. ಹೀಗಾಗಿ ಸೋಲುತ್ತೇನೆ ಎಂದು ಮುನಿರತ್ನ ಗೂಂಡಾಗಳನ್ನು ಕಳುಹಿಸಿದ್ದಾರೆ. ಇದನ್ನು ಮತದಾರರು ಗಮನಿಸುತ್ತಿದ್ದಾರೆ. ನವೆಂಬರ್ 3ರಂದು ಇದಕ್ಕೆಲ್ಲ ಮತದಾರರು ತಕ್ಕ ಉತ್ತರವನ್ನು ಕೊಡುತ್ತಾರೆ, ಹುಷಾರ್ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ಕೊಟ್ಟರು.

  ಬಿಜೆಪಿಯವರಿಗೆ ಹಬ್ಬದಂತಾದ ಕೊರೊನಾ ವೈರಸ್!

  English summary
  Opposition leader Siddaramaiah's election campaign disrupted in RR nagar. Siddaramaiah was making a campaign speech on the road show on behalf of Congress candidate Kusuma H. Know more
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X