ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ವೈ ಮದುವೆ ಊಟ ಮಾಡೋಲ್ಲಾ, ಬರೀ ತಿಥಿ ಊಟನೇ ಮಾಡೋದು: ಸಿದ್ದರಾಮಯ್ಯ ಮಾತಿಗೆ ನಿಂತರೆ!

|
Google Oneindia Kannada News

ವಿರೋಧಿಗಳಿಗೆ ಹೇಳಬೇಕಾಗಿರುವ ಮಾತನ್ನು ವ್ಯಂಗ್ಯವಾಗಿ ಮತ್ತು ಕಟುವಾಗಿ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ವಿಶೇಷ ವ್ಯಂಗ್ಯದ ದಾಟಿಯಲ್ಲಿ ಟೀಕಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಕಷ್ಟ ಕೇಳೋಕೆ ಆ ಅಶೋಕ (ಕ್ಷೇತ್ರದ ಶಾಸಕ) ಬರೋಲ್ಲಾ, ಮತ್ಯಾಕೆ ಓಟ್ ಹಾಕಿದ್ರಿ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಪ್ರೊ. ರಾಜೀವ್ ಗೌಡ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಬಿಜೆಪಿಯವರ ಸುಳ್ಳು ಭರವಸೆಯನ್ನು ನಂಬಬೇಡಿ, ನಾನು ಹೇಳುವ ಮಾತನ್ನು ಒಮ್ಮೆ ಮನೆಗೆ ಹೋಗಿ ಆಲೋಚಿಸಿ"ಎಂದು ಕರೆ ನೀಡಿದರು.

ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ

ನರೇಂದ್ರ ಮೋದಿ ಸರಕಾರದ ದುರಾಡಳಿತ, ಬೆಲೆ ಏರಿಕೆ, ಯಡಿಯೂರಪ್ಪನವರ ಸರಕಾರದ ಭ್ರಷ್ಟಾಚಾರ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು.. ಈ ಎಲ್ಲಾ ವಿಚಾರದ ಬಗ್ಗೆ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು. ಜೊತೆಗೆ, ಯಡಿಯೂರಪ್ಪ ತಿಥಿ ಊಟಕ್ಕೆ ಮಾತ್ರ ಹೋಗುವುದು ಎಂದು ಲೇವಡಿ ಮಾಡಿದರು.

 ನಿಮಗೆ ಕೈಮುಗಿದು ಪ್ರಾರ್ಥನೆ ಮಾಡಿ ಕೇಳಿಕೊಳ್ಳುತ್ತಿದ್ದೇನೆ ಬದಲಾವಣೆಯನ್ನು ತನ್ನಿ

ನಿಮಗೆ ಕೈಮುಗಿದು ಪ್ರಾರ್ಥನೆ ಮಾಡಿ ಕೇಳಿಕೊಳ್ಳುತ್ತಿದ್ದೇನೆ ಬದಲಾವಣೆಯನ್ನು ತನ್ನಿ

"ಅಶೋಕ ಹೇಳುವುದು ಸರಿಯಾ, ಸುಳ್ಳಾ, ಮೋದಿ ಹೇಳುವುದರಲ್ಲಿ ಸತ್ಯವಿದೆಯಾ ಎನ್ನುವುದನ್ನು ನೀವು ಅರಿತುಕೊಳ್ಳಬೇಕು. ನಾವು ಏನು ತಪ್ಪು ಮಾಡಿದೆವು ಎಂದು ನಮಗೆ ಸೋಲಿನ ಶಿಕ್ಷೆಯನ್ನು ನೀಡಿದ್ದೀರಿ. ಅಕ್ಕಿ, ಹಾಲು, ಇಂದಿರಾ ಕ್ಯಾಂಟೀನ್, ಸಾಲಮನ್ನಾ ಮಾಡಿದ್ದಕ್ಕಾ ನಮ್ಮನ್ನು ನೀವು ಸೋಲಿಸಿದ್ದು"ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಜನರನ್ನು ಪ್ರಶ್ನಿಸಿದರು. ದಯವಿಟ್ಟು ನಿಮಗೆ ಕೈಮುಗಿದು ಪ್ರಾರ್ಥನೆ ಮಾಡಿ ಕೇಳಿಕೊಳ್ಳುತ್ತಿದ್ದೇನೆ ಬದಲಾವಣೆಯನ್ನು ತನ್ನಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

 ಆರು ಬಾರಿ ಇಲ್ಲಿ ಅಶೋಕನನ್ನು ಗೆಲ್ಲಿಸಿದ್ದೀರಿ, ಬದಲಾವಣೆ ಮಾಡಿ ಸಾಕು

ಆರು ಬಾರಿ ಇಲ್ಲಿ ಅಶೋಕನನ್ನು ಗೆಲ್ಲಿಸಿದ್ದೀರಿ, ಬದಲಾವಣೆ ಮಾಡಿ ಸಾಕು

"ಬೆಂಗಳೂರು, ಮೈಸೂರು ಭಾಗದ ಯುವಕರು ಪಾಪ ಮೋದಿ..ಮೋದಿ ಎಂದು ಅನ್ನುತ್ತಿದ್ದರು, ಅವರಿಗೆ ಮೋದಿ, ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ಕೆಲಸ ಕೇಳಿದರೆ ಪಕೋಡ ಮಾರಿ ಅನ್ನುತ್ತಿದ್ದಾರೆ. ಈಗ ಪಕೋಡ ಮಾರುವುದಕ್ಕೂ ಆಗುವುದಿಲ್ಲ, ಆ ಮಟ್ಟಿಗೆ ಅಡುಗೆ ಎಣ್ಣೆಯ ಬೆಲೆ ಜಾಸ್ತಿಯಾಗಿದೆ. ಎಂಬತ್ತು ರೂಪಾಯಿ ಇದ್ದ ಕಡ್ಲೇಕಾಯಿ ಎಣ್ಣೆ ಈಗ ಇನ್ನೂರು ರೂಪಾಯಿ ಆಗಿದೆ. ಆರು ಬಾರಿ ಇಲ್ಲಿ ಅಶೋಕನನ್ನು ಗೆಲ್ಲಿಸಿದ್ದೀರಿ, ಬದಲಾವಣೆ ಮಾಡಿ ಸಾಕು"ಎಂದು ಸಿದ್ದರಾಮಯ್ಯ ಹೇಳಿದರು.

 ಬಿಎಸ್ವೈ ಮದುವೆ ಊಟ ಮಾಡೊಲ್ಲಾ, ಬರೀ ತಿಥಿ ಊಟನೇ ಮಾಡೋದು

ಬಿಎಸ್ವೈ ಮದುವೆ ಊಟ ಮಾಡೊಲ್ಲಾ, ಬರೀ ತಿಥಿ ಊಟನೇ ಮಾಡೋದು

"ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಅಡುಗೆ ಅನಿಲ ನಾಲ್ಕು ನೂರು ಇತ್ತು, ಈಗ ಅದು ದುಪ್ಪಟ್ಟಾಗಿದೆ. ಎಲ್ಲಪ್ಪಾ ನರೇಂದ್ರ ಮೋದಿ ಅಚ್ಚೇದಿನ್ ಬಂತು"ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಿಸ್ಟರ್ ಅಶೋಕ್, ಮೋದಿ ಎಷ್ಟು ಸುಳ್ಳು ಹೇಳುತ್ತಿದ್ದಾರೆಂದು ನೀವು ಜನರಿಗೆ ಹೇಳಬೇಕು. ಆ ಯಡಿಯೂರಪ್ಪಗೆ ಮುಂಬಾಗಿಲಿನಿಂದ ಬಂದೇ ಗೊತ್ತಿಲ್ಲ. ಅವರು ಯಾವತ್ತೂ ಮದುವೆ ಊಟ ಮಾಡೋದೇ ಇಲ್ಲ, ಬರೀ ತಿಥಿ ಊಟನೇ ಮಾಡುವುದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Recommended Video

ಚೀನಾ vs ಅಮೆರಿಕ ಗೆಲುವು ಯಾರಿಗೆ? | Oneindia Kannada
 ಬೊಮ್ಮಾಯಿಯನ್ನು ಸಿಎಂ ಮಾಡಿಸಿದ್ದೇ ಯಡಿಯೂರಪ್ಪ. ಹಾಗಾಗಿ, ಅವನು ಬಿಎಸ್ವೈ ಸ್ಟ್ಯಾಂಪ್

ಬೊಮ್ಮಾಯಿಯನ್ನು ಸಿಎಂ ಮಾಡಿಸಿದ್ದೇ ಯಡಿಯೂರಪ್ಪ. ಹಾಗಾಗಿ, ಅವನು ಬಿಎಸ್ವೈ ಸ್ಟ್ಯಾಂಪ್

"ಬರೀ ಹಿಂಬಾಗಿಲಿನಿಂದ ಬಂದು ಅವರು ಸಿಎಂ ಆದರು. ಇನ್ನು ಆ ಮಗ ಬೊಮ್ಮಾಯಿ ಏನು ಮಾಡುತ್ತಾನೋ ಗೊತ್ತಿಲ್ಲ, ಈಗಲೇ ಏನೂ ಮಾತಾಡೋಕೆ ಹೋಗುವುದಿಲ್ಲ, ಮೂರು ತಿಂಗಳಾಗಲಿ. ಬೊಮ್ಮಾಯಿಯನ್ನು ಸಿಎಂ ಮಾಡಿಸಿದ್ದೇ ಯಡಿಯೂರಪ್ಪ. ಹಾಗಾಗಿ, ಅವನು ಬಿಎಸ್ವೈ ಸ್ಟ್ಯಾಂಪ್ ಆಗೇ ಆಗುತ್ತಾನೆ. ಪದ್ಮನಾಭ ನಗರದಲ್ಲಿ ನಮ್ಮನ್ನು ಸೋಲಿಸಿ, ಸಾಕುಸಾಕು ಮಾಡಿಬಿಟ್ಟಿದ್ದೀರಾ, ಬದಲಾವಣೆ ಮಾಡಿ"ಎಂದು ಸಿದ್ದರಾಮಯ್ಯ ಮತ್ತೆ ಸಭೆಯಲ್ಲಿ ಆಗ್ರಹಿಸಿದರು.

English summary
Opposition Leader Siddaramaiah Criticized Former CM BS Yediyurappa says he will always have tithi meal and not having wedding meal. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X