ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ಗಂಟೆಯಲ್ಲಿ 26 ಲಕ್ಷ ದಂಡ ವಸೂಲಿ ಮಾಡಿದ ಸಂಚಾರ ಪೊಲೀಸರು !

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ ಸಂಚಾರ ಪೊಲೀಸರು ದಂಡಾಸ್ತ್ರ ಪ್ರಯೋಗ ನಡೆಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ಕೇವಲ ಎರಡು ತಾಸಿನಲ್ಲಿ 26, 26,800 ರೂ. ದಂಡ ಸಂಗ್ರಹಿಸಿ ಬೆಂಗಳೂರು ಸಂಚಾರ ಪೊಲೀಸರು ದಾಖಲೆ ನಿರ್ಮಿಸಿದ್ದಾರೆ.

ಆಪರೇಷನ್ ಸರ್ಪ್ರೈಸ್ ಚೆಕ್ ಹೆಸರಿನಲ್ಲಿ ನಗರದ 44 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಇವತ್ತು ವಿಶೇಷ ದಂಡ ವಸೂಲಿ ಕಾರ್ಯಾಚರಣೆ ನಡೆಸಿದರು. ಬರೋಬ್ಬರಿ 174 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 5672 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ 26 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ವಾಹನ ಸಂಚಾರ ಕಡಿಮೆ ಇರುವ ಸಂದರ್ಭದಲ್ಲಿ ಕೇವಲ ಎರಡು ತಾಸು ಮಾತ್ರ ಹಮ್ಮಿಕೊಳ್ಳಲಾಗಿತ್ತು. ಈವರೆಗೂ ಸಂಚಾರ ನಿಯಮ ಉಲ್ಲಂಘನೆ ಕುರಿತು ಕೇಸು ದಾಖಲಿಸದ ಜಾಗಗಳಲ್ಲಿ ಸಂಚಾರ ಪೊಲೀಸರು ಕಾರ್ಯಚರಣೆ ನಡೆಸಿದರು. ಅಪಘಾತ ತಡೆಯುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಜಾಗೃತ ಸಂಚಾರ ಮಾಡುವ ಉದ್ದೇಶದಿಂದ ಈ ವೀಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

Operation Surprise Check : Traffic Police Collect 26 Lakh Fine Within 2 Hours !

Recommended Video

Australia ಬ್ಯಾಟ್ಸ್ಮನ್‌ಗಳನ್ನು ಕಟ್ಟಿ ಹಾಕಿದ Team India ಬೌಲರ್ಸ್ | Oneindia Kannada

ಮುಂದಿನ ದಿನಗಳಲ್ಲಿ ಈ ಅನಿರೀಕ್ಷಿತ ಮತ್ತು ಆಶ್ಚರ್ಯಕರ ಕಾರ್ಯಚರಣೆ ಮುಂದುವರೆಸಲಾಗುವುದು. ಹೆಚ್ಚು ಅಪಘಾತ ನಡೆಯುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವ ಜಾಗಗಳನ್ನು ಗುರುತಿಸಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಪೊಲೀಸರು ಕೆಲವು ಸ್ಥಳಗಳಲ್ಲಿ ಪ್ರಕರಣ ದಾಖಲಿಸುವುದಿಲ್ಲ ಎಂದು ಭಾವಿಸಿ ಸಂಚಾರ ನಿಯಮ ಉಲ್ಲಂಘಿಸುತ್ತಾರೆ. ಇದನ್ನು ತಡೆಯುವ ಉದ್ದೇಶದಿಂದ ಹೊಸ ಜಾಗಗಳಲ್ಲಿ ಆಪರೇಷನ್ ಸ್ಪೆಷಲ್ ಚೆಕ್ ಆರಂಭಿಸಲಾಗಿದೆ. ಬೆಂಗಳೂರು ರಸ್ತೆಗಳನ್ನು ಸುರಕ್ಷಿತ ರಸ್ತೆಗಳನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

English summary
Bengaluru traffic police collected RS 26 lakh fine within two hours in special drive for traffic rules violations, know more .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X