• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್

|
   ಮುಗಿಯುತ್ತಾ ಯಡಿಯೂರಪ್ಪ ಅಧ್ಯಾಯ..?

   ಬೆಂಗಳೂರು, ಫೆಬ್ರವರಿ 13: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಕಿದ್ದ ಸವಾಲಿಗೆ ಪ್ರತಿ ಸವಾಲಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಪರೇಷನ್ ಕಮಲದ ಸಂಪೂರ್ಣ ಸಂಭಾಷಣೆ ಇರುವ 80 ನಿಮಿಷಗಳ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

   ಅದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ, ಬಿಜೆಪಿ ನಾಯಕ ಶಿವನಗೌಡ ನಾಯಕ್, ಗುರುಮಿಟ್ಕಲ್ ಶಾಸಕನ ಪುತ್ರ ಶರಣಗೌಡ ನಡುವೆ ನಡೆದ ಸಂಭಾಷಣೆಯ ಕೆಲವು ಮುಖ್ಯಾಂಶಗಳು ಇಲ್ಲಿವೆ.

   ಯಡಿಯೂರಪ್ಪ ಅವರ ಈ ಸಂಭಾಷಣೆ ಅವರ ಸ್ಥಾನಕ್ಕೆ ಕಂಟಕವೇ ಎನ್ನುವ ಭಯ ಬಿಜೆಪಿಗೆ ಆರಂಭವಾದಂತಿದೆ. ಬಿಜೆಪಿಗೆ ಕರೆತರಲು ಏನೆಲ್ಲಾ ಆಮಿಷಗಳನ್ನು ಒಡ್ಡಬೇಕೋ ಅದೆಲ್ಲವನ್ನು ಮುಂದಿಟ್ಟಾಗಿದೆ.

   ಚುನಾವಣೆಯಲ್ಲಿ ಎಷ್ಟೇ ಹಣಬೇಕಾದರೂ ಖರ್ಚು ಮಾಡಿ ಗೆಲ್ಲಿಸ್ತೇವೆ ಎನ್ನುವುದು, ನಿನಗೆ ಎಷ್ಟು ಹಣ ಬೇಕೋ ಕೇಳು ಕೊಡ್ತೀವಿ ಎನ್ನುವ ಮಾತು ಸೇರಿದಂತೆ ವ್ಯಕ್ತಿಯನ್ನು ದುಡ್ಡಿನಿಂದ ಕೊಂಡುಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆದಂತೆ ಗೋಚರಿಸುತ್ತಿದೆ.

   ಅಪ್ಪನಿಗೆ ರಾಜೀನಾಮೆ ನೀಡಲು ಹೇಳು, ಬಿಜೆಪಿಯಿಂದ ಚುನಾವಣೆಗೆ ನೀನು ನಿಲ್ಲು

   ಅಪ್ಪನಿಗೆ ರಾಜೀನಾಮೆ ನೀಡಲು ಹೇಳು, ಬಿಜೆಪಿಯಿಂದ ಚುನಾವಣೆಗೆ ನೀನು ನಿಲ್ಲು

   ಯಡಿಯೂರಪ್ಪ: ರಕ್ಷಣೆ ಬೇಕು ರಾಜೀನಾಮೆ ಕೊಡೋಕೆ ಅಂತ ಪೊಲೀಸ್ ರಕ್ಷಣೆಯಲ್ಲಿ ಬಂದು ಸ್ಪೀಕರ್ ಗೆ ರಾಜೀನಾಮೆ ಕೊಡು ಸ್ಪೀಕರ್ ತಪ್ಪಿಸಿಕೊಂಡು ಓಡಾಡೋಕೆ ಆಗುವುದಿಲ್ಲ, ಅಧಿವೇಶನ ನಡೆಯುವ ಸಮಯದಲ್ಲಿ ಕೊಟ್ಟುಬಿಟ್ಟರೆ ಅವನು ಬಿದ್ದಿರ್ತಾನೆ ಅಲ್ಲಿ ಎಂದು ಗುರುಮಿಟ್ಕಲ್ ಶಾಸಕ ನಾಗನಗೌಡ ಪಾಟೀಲ್‌ಗೆ ರಾಜೀನಾಮೆ ಕೊಡಿಸುವ ಪ್ರಯತ್ನ.

   ಬಿಜೆಪಿ ಶಾಸಕ ಶಿವನಗೌಡ ನಾಯಕ್ :ಹೌದು ಸರ್ ಟ್ವೆಂಟಿ ಫೋರ್ ಅವರ್‌ನಲ್ಲಿ ಒಪ್ಪಲೇ ಬೇಕು, ನಿನ್ನ ಅಪ್ಪನ ಒಪ್ಪಿಸಪ್ಪ ಮುಂದಿನ ಸಾಹೇಬರಿಗೆ ಬಿಡು ಏನಾದರಾಗ ಸಾಹೇಬರು ಒಳ್ಳೆಯದೇ ಮಾಡ್ತಾರೆ. ನೀನು ರೆಡಿ ಆಗು ನಾನು ಉಳಿದಿದ್ದು, ವಿಜಯಣ್ಣ ಜೊತೆ ಮಾತಾಡ್ತೀನಿ, ಸಾಹೇಬರ ಆಶೀರ್ವಾದ ಶರಣ್ ಗೌಡ , ನೀವು ಸಮಾಜವರು ಸಮಾಜದವರು ಮುಖ್ಯಮಂತ್ರಿ ಮಾಡಲು ನಮಗೆ ಹೆಮ್ಮೆ ಇರ್ಬೇಕು ಅವನು ಯಾರೋ ಕುಮಾರಸ್ವಾಮಿ ರಾಮನಗರದವರು ಹಾಸನದವರು ಸಂಬಂಧ ಇಲ್ಲದವರಿಗಾಗಿ ಸಾಯ್ತೀ

   ಯಡಿಯೂರಪ್ಪ :ಬಹುತೇಕ ಎಲ್ಲಾ ನಾನ್ ಲಂಗಾಯತ ಬರ್ತೀರಾ ನೀನು ಮಾಡೋಕೆ ಯಾವುದೇ ಅಡ್ಡಿ ಆತಂಕ ತೊಂದ್ರೇನೇ ಇಲ್ಲ.. ನಾವು ಇದು ಆಗೊಲ್ಲ ಅಂದ್ರೆ ನಿನ್ನ ಯಾಕೆ ಕರೆಯೋಕೆ ಹೋಗ್ತೀವಿ ನಿಂಗ್ಯಾಕೆ ತೊಂದರೆ ಕೊಡ್ತಿತ್ವಿ ಮತ್ತು ನಿನ್ನ ತಂದೆ ಇಲ್ಲೇ ಇರ್ಲಿ ಬೆಂಗಳೂರಲ್ಲಿ ನಿನ್ ಕನ್ವಿನ್ಸ್ ಮಾಡಿ ನಿನ್ನ ಪಾಡಿಗೆ ನೀನು ಬಾಂಬೆಗೆ ಹೋಗು ಅವಾಗ ಎಲ್ರೂನೂ ಹದಿನೈದು ಜನ ಆಗ್ಬಿಟ್ಟು ಎಲ್ಲ ಹೊರಟಾಗ ನಿಮ್ಮ ತಂದೆ ಜೊತೆಗೆ ಬಂದು ರಾಜೀನಾಮೆ ಕೊಡೋದು ಅಷ್ಟೇ, ನಿಮ್ಮ ತಂದೆ ಬಾಂಬೆಗೆ ಬರಬೇಕು ಅಂತಿಲ್ಲ..

   ಬಿಎಸ್‌ವೈ ಸವಾಲಿಗೆ ಎಚ್ಡಿಕೆ ಪ್ರತಿ ಸವಾಲು, 80 ನಿಮಿಷದ ಆಡಿಯೋ ರಿಲೀಸ್

   ಬಾಂಬೆಯಲ್ಲಿ ರೆಸಾರ್ಟ್‌ಗೆ ಕಳಿಸಿಲ್ಲ, ಫ್ರೀ ಬಿಟ್ಟಿದ್ದೇವೆ

   ಬಾಂಬೆಯಲ್ಲಿ ರೆಸಾರ್ಟ್‌ಗೆ ಕಳಿಸಿಲ್ಲ, ಫ್ರೀ ಬಿಟ್ಟಿದ್ದೇವೆ

   ಯಡಿಯೂರಪ್ಪ: ನೋಡಣ್ಣ ಒಬ್ಬರನ್ನೂ ನಾವು ರೆಸಾರ್ಟ್‌ಗೆ ಕಳಿಸಿಲ್ಲ, ಬೇಡಾಂದ್ರೂ ಬಾಂಬೆ ಹತ್ರ ಹೋಗಿದ್ವು, ಅಷ್ಟೇ ಎಲ್ಲರನ್ನೂ ಫ್ರೀ ಬಿಟ್ಟಿದ್ದೇವೆ, ಒಬ್ಬರನ್ನೂ ಯಾರೂ ಟಚ್ ಮಾಡಲು ಸಾಧ್ಯವಿಲ್ಲ.

   ಶಿವನಗೌಡ: ನಮ್ಮಲ್ಲಿ ಯಾರೂ ಅಂತವರು ಇಲ್ಲ

   ಅನಾಮದೇಯ: ಇವರು ಕೊಡೋ ಹಣಕ್ಕೆ ಯಾರೂ ಹೋಗ್ತಾರೆ

   ಶಿವನಗೌಡ: ಇಲ್ಲ ಸರ್ಕಾರ ಬೀಳುತ್ತೆ ಅಂತ ಕಾಯ್ತಾ ಇದ್ದಾರೆ, ನಿನ್ನೆ ವೆಂಕಟಪ್ಪ ನಾಯಕ ಕಿವಿದನ್ರಿ ಎರಡು ಮೂರು ದಿನದಿಂದ ಸರ್ಕಾರ ಅಂತೂ ಹೋಗ್ತಾ ಇದೆ ಅದಂತೂ ಖಾತ್ರಿ ಆಗಿದೆ ಅಂತ ಅವರ ಶಾಸಕ ಹೇಳಿದಂತೆ ರೀ ಸರ್ಕಾರ ಅಂತೂ ಹೋಗುತ್ತದೆ. ಸ್ವತಃ ಚೀಫ್ ಮಿನಿಸ್ಟರ್ ಡಿಪ್ರೆಷನ್‌ಗೆ ಹೋಗಿದಾರೆ ಅಂತ.

   ಅನಾಮಿಕ: ಆಮೇಲೆ ಅಸ್ಯುರೆನ್ಸ್ ಅವೆಲ್ಲ ಒಂದು ಕಡೆ ಸರ್ಕಾರ ಬಿದ್ದಮೇಲೆ ವಾಟ್ ಈಸ್ ದಿ ಫ್ಯೂಚರ್ ಪೊಲಿಟಿಕಲಿ ಜನತಾದಳದಲ್ಲಿ ಒಬ್ಬ ಸುಮ್ನೆ ಕುತ್ಕೊಂಡು ಏನು ಮಾಡ್ತೀಯಾ ಆಮೇಲೆ ತಂದೆ ಮಗ ಇಬ್ರ ಮೊಮ್ಮಗ ಇನ್ನು ಡಿ ಅಂತೂ ಅವರ ಏನು ಮಾಡಲ್ಲ, ಅವರ ಲೈಫಿನಲ್ಲಿ ಏನೂ ಮಾಡಿಲ್ಲ.

   ಕುಮಾರಸ್ವಾಮಿ ಅಪರಾಧ ಮಾಡಿದ್ದಾರೆ, ಬಿಎಸ್‌ವೈ ಕೊಟ್ಟ 4 ಕಾರಣ

   ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಸಹಾಯ ಮಾಡಿದ್ರು

   ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಸಹಾಯ ಮಾಡಿದ್ರು

   ಶರಣಗೌಡ: ಒಂದು ಸರ್, ಮೊನ್ನೆ ಎಲೆಕ್ಷನ್ ಸಮಯದಲ್ಲಿ ಕುಮಾರಸ್ವಾಮಿಯವರು ಬಹಳ ಪರ್ಸನಲಿ ಸಹಾಯ ಮಾಡಿದ್ರು.

   ಯಡಿಯೂರಪ್ಪ: ಎಷ್ಟು ಮಾಡಿದ್ರಪ್ಪ

   ಶರಣಗೌಡ: ನಮಗೆ ಅಂತ ಅಂದ್ರೆ ಒಂದು ಫೈನಾನ್ಶಿಯಲ್ ಹೆಲ್ಪ್ ಮಾಡಿ ಚುನಾವಣೆ ಅಂತಂದ್ರೆ ಎಂಎಲ್‌ಎ ಆಗೋಕೆ ಹೆಲ್ಪ್ ಮಾಡಿದ್ದೂ ಅದೊಂದು ಸತ್ಯವಾಗಿ ಮಾಡಿದ್ದಾರೆ.

   ಯಡಿಯೂರಪ್ಪ: ಒಂದೆರೆಡು ಮೂರು ಕೋಟಿ ಕೊಟ್ಟಿರ್ತಾರೆ

   ಶಿವನಗೌಡ: ಜಾಸ್ತಿನೇ ಮಾಡಿರ್ತಾರೆ

   ಯಡಿಯೂರಪ್ಪ: ನನಗವನ ಬಂಡವಾಳ ಗೊತ್ತಿಲ್ವ ಎಷ್ಟು ಕೊಟ್ನಪ್ಪ?

   ಶರಣಗೌಡ: ಅಷ್ಟೇ ಸರ್

   ಆಪರೇಷನ್ ಆಡಿಯೋ : ಸದನದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?

   ನಾಗನಗೌಡ ರಾಜೀನಾಮೆ ಕೊಟ್ಟರೆ ತಕ್ಷಣ 10 ಕೋಟಿ

   ನಾಗನಗೌಡ ರಾಜೀನಾಮೆ ಕೊಟ್ಟರೆ ತಕ್ಷಣ 10 ಕೋಟಿ

   ಯಡಿಯೂರಪ್ಪ: ನನಗೆ ಗೊತ್ತಿರೋದೆ ಇವೆಲ್ಲ, ನಾಳೆ ನೀನು ಬಾಂಬೆಯಿಂದ ರಾಜೀನಾಮೆ ಕೊಡ್ತಿದ್ದಂಗೆನೇ ಅದಕ್ಕೆ ಮುಂಚೆಯೇ ನಿನಗೆ ಯಾರಿಗೆ ಕೊಡಬೇಕು ಹೇಳು ಅವರಿಗೆ 10 ಕೋಟಿ ಕೊಡ್ತೀನಿ.

   ಅನಾಮಿಕ: ಸರ್ಕಾರ ಇದ್ದಾಗ ಎಲೆಕ್ಷನ್‌ಗೆ ಏನು ತೊಂದರೆ ಆಗಲ್ಲ

   ಯಡಿಯೂರಪ್ಪ: ಮಂತ್ರಿ ಆಗಿ ನೀನು ಎಲೆಕ್ಷನ್ ಎದುರಿಸು ಒಳ್ಳೇದಾಗಲ್ಲಪ್ಪಾ

   ಶಿವನಗೌಡ: ಏನೇ ಇದ್ರು ಹೇಳು

   ಶರಣಗೌಡ: ಈಗ ನೀವು ಅಷ್ಟು ಕೊಟ್ಟು ನಾಳೆ ಎಲೆಕ್ಷನ್ ಸೋತ್ರೆ

   ಯಡಿಯೂರಪ್ಪ: ನಾಳೆ ನಾವು ಗೆಲ್ದೆ ಇದ್ದರೆ ನಮ್ಮ ಸಂಖ್ಯೆಗೆ ಏನು ಉಪಯೋಗ ಆಗುತ್ತೆ, ಮೂರು ತಿಂಗಳು ನಾಲ್ಕು ತಿಂಗಳಲ್ಲಿ ಚುನಾವಣೆ ಬರುತ್ತೆ, ನೂರಕ್ಕೆ ನೂರು ನಾನು ಭರವಸೆ ಕೊಡ್ತೀನಿ, ನಿನ್ನ ಗೆಲ್ಲಿಸಲು ಹೆಚ್ಚು ಖರ್ಚು ಮಾಡುವುದು ನನ್ನ ಜವಾಬ್ದಾರಿ.

   ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ!

   ಹಾಸನ ಶಾಸಕ ಪ್ರೀತಂಗೌಡ ಜೊತೆ ನಡೆದಿದೆ ಎನ್ನಲಾದ ಸಂಭಾಷಣೆ ವಿವರಗಳಿಗಾಗಿ ನಿರೀಕ್ಷಿಸಿ...

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Here is some highlights of conversation between the BS yeddyurappa and Sharanagouda.Full audio clip alleged conversation between BS Yeddyurappa and JD(S) MLA's son Sharanagouda emerges.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more