ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಆಪರೇಷನ್ ಅಪಾರ್ಟ್‌ಮೆಂಟ್ ಶುರು

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಅಪಾರ್ಟ್‌ಮೆಂಟ್ ನೆಲಸಮಕ್ಕೆ ಮುಂದಾಗಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಧರಣಿ ಆರಂಭಿಸಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ನಿಶಿತಾವ ಪ್ಲಾಟಿನಂ ಅಪಾರ್ಟ್‌ಮೆಂಟ್ ನೆಲಸಮ ಮಾಡಲು ಮುಂದಾಗಿದೆ, 2016ರಲ್ಲಿ ಎಲ್ಲರೂ ಈ ಅಪಾರ್ಟ್‌ಮೆಂಟ್‌ನಲ್ಲಿ ಮನೆಗಳನ್ನು ಖರೀದಿಸಿದ್ದರು. ಒಟ್ಟು 25 ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ಪ್ರತಿ ಫ್ಲಾಟ್‌ಗೆ 50 ಲಕ್ಷ ರೂ ಕೊಟ್ಟು ಖರೀದಿಸಿದ್ದರು. ಎಷ್ಟೋ ಮಂದಿ ಇನ್ನೂ ಕಂತುಗಳನ್ನು ಪೂರೈಸಿಲ್ಲ.

ಬಿಬಿಎಂಪಿಯಲ್ಲಿ 4 ಕೋಟಿ ರು ಹಗರಣ; 3 ಅಧಿಕಾರಿಗಳ ಅಮಾನತುಬಿಬಿಎಂಪಿಯಲ್ಲಿ 4 ಕೋಟಿ ರು ಹಗರಣ; 3 ಅಧಿಕಾರಿಗಳ ಅಮಾನತು

ಬಿಲ್ಡರ್ ತಪ್ಪಿನಿಂದ ಈಗ 25 ಕುಟುಂಬಗಳು ಬೀದಿಗೆ ಬಂದಿವೆ, ನಮ್ಮದೇನು ತಪ್ಪಿದೆ ಎಂದು ನಿವಾಸಿಗಳು ಕೇಳುತ್ತಿದ್ದಾರೆ. ಗರ್ಭಿಣಿ, ವಯಸ್ಸಾದವರು, ಮಕ್ಕಳು ಸಾಕಷ್ಟು ಮಂದಿ ಅಲ್ಲಿ ವಾಸಿಸುತ್ತಿದ್ದಾರೆ. ಅಕ್ರಮವಾಗಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ.

Operation Apartment Started In Bengaluru

ಇದೀಗ ಬಿಬಿಎಂಪಿಯು ಕಾಂಪೌಂಡ್ ಕೆಡವಿದ್ದು, ಶೀಘ್ರ ಅಪಾರ್ಟ್‌ಮೆಂಟ್ ನೆಲಸಮ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಎಲ್ಲರನ್ನೂ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದು ನಾಲ್ಕು ಅಂತಸ್ಥಿನ ಕಟ್ಟಡವಾಗಿದೆ.

ಕೊಚ್ಚಿಯ ಮರಡು ಪ್ರದೇಶದ ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 19 ಮತ್ತು 21 ಅಂತಸ್ತಿನ ಎರಡು ಗಗನಚುಂಬಿ ಅಪಾರ್ಟ್‌ಮೆಂಟ್‌ಗಳನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಅಲ್ಲಿನ ಸರಕಾರವು ಭಾರಿ ಪ್ರಮಾಣದ ಸ್ಫೋಟಕ ಬಳಸಿ ಧ್ವಂಸಗೊಳಿಸಿತ್ತು.

ಸಿಲಿಕಾನ್‌ ಸಿಟಿಯ ತ್ವರಿತ ಬೆಳವಣಿಗೆಯಿಂದ ರಾಜಕಾಲುವೆಗಳು, ಕೆರೆಗಳು ಸಾಕಷ್ಟು ಒತ್ತುವರಿಯಾಗಿವೆ. ಮೀಸಲು ಪ್ರದೇಶದಲ್ಲೇ (ಬಫರ್‌ಜೋನ್‌) ಸಾವಿರಾರು ಕಟ್ಟಡಗಳು ತಲೆ ಎತ್ತಿವೆ.

English summary
BBMP is Ready To Demolish Nishitava Platinum Apartment In Puttenahalli Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X