• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ನೋಡಿ ಟೆನ್ಶನ್ ಆಗ್ಬೇಡಿ!

By ಶ್ರೀಹರ್ಷ ಸಾಲಿಮಠ
|

ಕನ್ನಡ ಎಂಬುದು ಬಂಗಾರ. ಇಂಗ್ಲೀಷ್ ಕಾಗೆ ಬಂಗಾರ. ನನ್ನ ಎಸ್ಎಸ್ಎಲ್ಸಿ ಅಂಕಪಟ್ಟಿ ಜನ್ಮದಿನದ ಪುರಾವೆಯಾಗಿದ್ದಕ್ಕಿಂತ ಹೆಚ್ಚಿನ ಬಳಕೆಗೆ ಬಂದಿಲ್ಲ. ಅಷ್ಟು ಚಿಕ್ಕ ವಯಸ್ಸಿನ ಹುಡುಗರು ದಿನಕ್ಕೆ ಎಂಟು ಹತ್ತು ತಾಸು ಕೂತು ಓದುವುದು ಪಿಯುಸಿ ಸೀಟು ಗಿಟ್ಟಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಎಲ್ಲೂ ಬಳಕೆಯಾಗುವುದಿಲ್ಲ. ಸೋ ಜಾಸ್ತಿ ಓವರ್ ಆಕ್ಟಿಂಗ್ ಮಾಡಬೇಡಿ...! ಹುಟ್ಟಿಸ್ದೋನು ಹುಲ್ಲು ಮೇಯಿಸ್ತಾನೆ!

ನಂಗೊಂದು ವಿಷ್ಯಾ ಹೇಳು ಗುರು.. ಬೇರೆ ಎಲ್ಲಾ ವಿಷಯಗಳೂ ಪೂರ್ತಿ ಮಾರ್ಕ್ಸ್ ತೆಗೆಯೋದು ಒಪ್ಪುತ್ತೇನೆ. ಆದರೆ, ಇಂಗ್ಲೀಷ್ ಮತ್ತು ಸಮಾಜದಲ್ಲಿ ಪೂರ್ತಿ ಮಾರ್ಕ್ಸ್ ಹೆಂಗೆ? ಎಲ್ಲಾದರೂ ಹುಡುಕಿ ಅಂಕ ಕತ್ತರಿಸೋ ಎಲ್ಲಾ ಅವಕಾಶಗಳೂ ಇರ್ತವೆ.[ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]

ನಮಗೆ ಕೃಷ್ಣ ದೇವರಾಯನ ಹೆಸರು krishna ಅಂತ ಬರಿಬೇಕೊ ಅಥವಾ krushna ಬರೀಬೇಕೊ ಅನ್ನೋದರಲ್ಲೇ ಅಂಕಗಳು ಹೋಗಿರೋದು. ಇಂಗ್ಲೀಷಲ್ಲಿ ವಾಕ್ಯದ ಮಧ್ಯೆ he ಅನ್ನುವ ಬದಲು He (ಮೊದಲಕ್ಷರ capital) ಅಂತ ಬರೆದರೆ ದೇವರನ್ನು ಸಂಬೋಧಿಸುತ್ತೇವಂತೆ! ಹಾಗಾದರೆ ಮಧ್ಯದಲ್ಲಿ i ಅನ್ನು I ಎಂದು ಬರೆಯುವುದರಿಂದ ನಮ್ಮನ್ನು ನಾವೇ ದೇವರೆಂದು ಸಂಬೋಧಿಸಿಕೊಳ್ಳುತ್ತೇವಾ ? ಅಂತ ಕೇಳಿದ್ದೆ.[SSLC ಫಲಿತಾಂಶ: ಬೇಡದ ವಿಷಯಕ್ಕೆ ಕಲಬುರಗಿ ಪ್ರಥಮ]

"ಅಹಂ ಬ್ರಹ್ಮಾಸ್ಮಿ" ಇಂಗ್ಲೀಷ್ ಗ್ರಾಮರಲ್ಲಿ ವರ್ಕ್ ಔಟ್ ಆಯ್ತಲ್ಲ ಅಂತ! ನನಗೆ ಇಂಗ್ಲೀಶಲ್ಲಿ ಶೇ.40 ರಷ್ಟು ಅಂಕಗಳು ಸ್ಪೆಲ್ಲಿಂಗ್ ಮಿಸ್ಟೇಕುಗಳಿಂದಾಗಿಯೇ ಕಡಿತಗೊಳ್ಳುತ್ತಿದ್ದವು. mail- male, maid-made ಗಳು ಯಾವತ್ತಿಗೂ ನನಗೆ ಒಗ್ಗಿ ಬಂದದ್ದಿಲ್ಲ. femail ಅಂತ ಪದೇ ಪದೇ ಬರೆದು ಪದೇ ಪದೇ ಬೈಸಿಕೊಂಡದ್ದಿದೆ. [ಎಸ್ಸೆಸ್ಸೆಲ್ಸಿ ಟಾಪರ್ ರಂಜನ್ ಬಗ್ಗೆ ರಂಜನೀಯ ಟ್ರಾಲ್ಸ್]

ಸ್ಪೆಲ್ಲಿಂಗ್ ಒಂದು ಯಾವತ್ತಿಗೂ ಕಾಡುವ ಭೂತ ನನಗೆ. ತಪ್ಪು ಸ್ಪೆಲ್ಲಿಂಗ್ ಗಳಿಗೆ ಕೆಂಪು ಅಡಿಗೆರೆ ಹಾಕಿ ತೋರಿಸುವ ವ್ಯವಸ್ತೆ ಕಂಪ್ಯೂಟರ್ ಗಳಲ್ಲಿ ಇಲ್ಲದಿದ್ದಿದ್ದರೆ ನನ್ನ ಪರಿಸ್ಥಿತಿ ಶೋಚನೀಯವಾಗಿರುತ್ತಿತ್ತು. ಅಂತಾಗಿಯೂ ಎಸೆಸ್ಸೆಲ್ಸಿಯಲ್ಲಿ ನನಗೆ ಇಂಗ್ಲೀಶಲ್ಲಿ 90+ ಅಂಕ ಬಂದದ್ದು ಇಂದಿಗೂ ಅರಗಿಸಿಕೊಳ್ಳಲಾರದ ಅಚ್ಚರಿ. [2016ರ ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು]

ಪಬ್ಲಿಕ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮೌಲ್ಯಮಾಪಕ ತನ್ನ ಹೆಂಡತಿಯೊಡನೆ ಜಗಳವಾಡಿಕೊಂಡು ಕೆಡಿಸಿಕೊಂಡು ಬಂದ 'ಮೂಡ್' ಅನ್ನು ಸರಿಪಡಿಸುವ ಗುರುತರ ಜವಾಬ್ದಾರಿ ನಮ್ಮ ಉತ್ತರ ಪತ್ರಿಕೆಗಳ ಮೇಲಿರುತ್ತದೆ. ಇದಕ್ಕಾಗಿ ಉತ್ತರಗಳನ್ನು ಹೇಗೆ ಬರೆಯಬೇಕು, ಹೇಗೆ ಪಾಯಿಂಟ್ ಗಳನ್ನು ಮಾಡಿ ಬರೆಯಬೇಕು, ಮುಖ್ಯ ಅಂಶಗಳನ್ನು ಅಡಿಗೆರೆ ಹಾಕಿ ಬರೆಯಬೇಕು ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು.

ಮುಖ್ಯಾಂಶ ಎಂದರೆ 'ಯಾವುದು' ಎಂದು ಅರ್ಥವಾಗುತ್ತಿರಲಿಲ್ಲ. is, was ಗಳಿಗೂ ಅಡಿಗೆರೆ ಹಾಕುತ್ತಿದ್ದೆ. ಎಸಕ ಪದಗಳಿಲ್ಲದೆ ವಾಕ್ಯ ಅರ್ಥಹೀನವಾಗುತ್ತದೆ. ಹಾಗಾಗಿ ಅದೂ ಮುಖ್ಯ ಅಂಶವೇ ಎಂಬುದು ನನ್ನ ಘನಚಿಂತನೆಯಾಗಿತ್ತು.[ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ]

ಕಡೆಗೆ ಎಸ್ಸೆಲ್ಸಿಯಲ್ಲಿ ಸಂಸ್ಕೃತ 123, ಗಣಿತ, ಇಂಗ್ಲೀಷ್, ಕನ್ನಡ 90 ಕ್ಕಿಂತ ಹೆಚ್ಚು ಅಂಕಗಳು ಬಂದಿದ್ದವು. (ನಮ್ಮ ಗಣಿತ ಮೇಷ್ಟ್ರೂ ಸ್ಪೆಲ್ಲಿಂಗ್ ಮಿಸ್ಟೇಕ್ ಗೆ ಅಂಕ ಕಡಿಯುತ್ತಿದ್ದರು. ತಕಳಿ!) ಶಾಲೆಯ ಟೆಸ್ಟ್ ಗಳಲ್ಲಿ ಎಂದೂ ಎಪ್ಪತ್ತಕ್ಕಿಂತ ಹೆಚ್ಚು ತೆಗೆಯದವನು ಅನಾಮತ್ತು ನಾಲ್ಕು ವಿಷಯಗಳಲ್ಲಿ 90 ಕ್ಕಿಂತ ಹೆಚ್ಚು ತೆಗೆದದ್ದು ಕಂಡು ಇಂಗ್ಲೀಷ್ ಸ್ಪೆಲ್ಲಿಂಗ್ ಕೊಟ್ಟ ಹೊಡೆತದ ಬಗ್ಗೆ ವಿಷಾದವೆನಿಸುತ್ತದೆ.[ಬೆಳ್ತಂಗಡಿಯ ಸುಶ್ರುತ್ ರಾಜ್ಯಕ್ಕೆ ದ್ವಿತೀಯ]

ಮೊದಲ ಭಾಷೆಯಾಗಿ ಕನ್ನಡ ತೆಗೆದುಕೊಂಡ ಹುಡುಗರು ಎಂದೂ 125 ಕ್ಕೆ 125 ತೆಗೆದದ್ದಿಲ್ಲ. ಸಂಸ್ಕೃತದಲ್ಲಿ ಇದು ಅನಾಯಾಸ! ವಿಜ್ಞಾನದಲ್ಲಿ ಕಡಿಮೆ ಬಂದದ್ದಕ್ಕೆ ಕಾರಣ ನಾವು ಬಾಟನಿಯಲ್ಲಿ ಭಯಾನಕ ವೀಕು. ಈಗಲೂ ಸಾಸಿವೆ-ರಾಗಿ, ಜೀರಿಗೆ-ಬಡೇಸೋಪು, ತೊಗರಿ-ಉದ್ದು ನಡುವೆ ವ್ಯತ್ಯಾಸ ತಿಳಿಯುವುದಿಲ್ಲ.[ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!]

ಅಲ್ಲೇ ಒಂದಿಪ್ಪತ್ತು ಅಂಕಗಳು ಕಳೆದುಹೋಗಿದ್ದವು. ಹೈಬಿಸ್ಕಸ್(ದಾಸವಾಳ) ದ ಸ್ಪೆಲ್ಲಿಂಗ್ ಅರ್ಥವಾಗುವುದಕ್ಕೇ ಒಂದು ವಾರ ಬೇಕಾಯಿತು. ಸಮಾಜ ಶಾಸ್ತ್ರದಲ್ಲಿ ಕಡಿಮೆ ಅಂಕಗಳು ಅತ್ಯಂತ ಸಹಜ. ಯಾಕೆಂದರೆ Environment ಅನ್ನು ಒಬ್ಬರು ಎನ್ವಿರಾನ್ ಮೆಂಟ್ ಎಂದು ಸಂಬೋಧಿಸಿದರೆ ಮತ್ತೊಬ್ಬರು ಎನ್ವಾಯರ್ನ್ ಮೆಂಟ್ ಎಂದು ಉಚ್ಚರಿಸುವರು.

ಅಂತೂ ಈ ಇಂಗ್ಲೀಷ್ ಸ್ಪೆಲ್ಲಿಂಗ್ ಎಂಬುದು ಮೂರುವರ್ಷ ನನ್ನ ಆತ್ಮವಿಶ್ವಾಸವನ್ನೆಲ್ಲ ಹಿಮ್ಮುರಿಗೆ ಕಟ್ಟಿ ಹಾಕಿದ್ದು ಸುಳ್ಳಲ್ಲ. ಕನ್ನಡ ಮಾದ್ಯಮದಲ್ಲಿ ಓದುತ್ತಿದ್ದಾಗ ಈ ತೊಂದರೆಗಳೆಲ್ಲ ಕಾಣಿಸಿಕೊಳ್ಳಲೇ ಇಲ್ಲ. ವಿಷಯ ಸುಲಭವಾಗಿ ತಲೆಗೆ ಹೋಗುವುದು. ಇಂಗ್ಲೀಷ್ ಮಾದ್ಯಮಕ್ಕೆ ಬಂದಾಗ ಇರೋ ಬರೋ ಮಿದುಳೆಲ್ಲ ಸ್ಪೆಲ್ಲಿಂಗ್ ಗಳಿಗೇ ಬಳಕೆಯಾಗೋದು.[ತಾಯಿ ಶವ ಮನೆಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಹುಡುಗಿ]

ಕನ್ನಡ ಎಂಬುದು ಬಂಗಾರ. ಇಂಗ್ಲೀಷ್ ಕಾಗೆ ಬಂಗಾರ. ನನ್ನ ಎಸ್ ಎಸ್ ಎಲ್ಸಿ ಅಂಕಪಟ್ಟಿ ಜನ್ಮದಿನದ ಪುರಾವೆಯಾಗಿದ್ದಕ್ಕಿಂತ ಹೆಚ್ಚಿನ ಬಳಕೆಗೆ ಬಂದಿಲ್ಲ. ಅಷ್ಟು ಚಿಕ್ಕ ವಯಸ್ಸಿನ ಹುಡುಗರು ದಿನಕ್ಕೆ ಎಂಟು ಹತ್ತು ತಾಸು ಕೂತು ಓದುವುದು ಪಿಯುಸಿ ಸೀಟು ಗಿಟ್ಟಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಎಲ್ಲೂ ಬಳಕೆಯಾಗುವುದಿಲ್ಲ. ಸೋ ಜಾಸ್ತಿ ಓವರ್ ಆಕ್ಟಿಂಗ್ ಮಾಡಬೇಡಿ...! ಹುಟ್ಟಿಸ್ದೋನು ಹುಲ್ಲು ಮೇಯಿಸ್ತಾನೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Open letter to Ranjan S Topper in Karnataka SSLC 2016. How he got out of out in English and Social Studies. It is really astonishing, result sheet created history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more