ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.1ರಿಂದ ಬೆಂಗಳೂರಲ್ಲಿ ಮನೆಗಳಿಂದ ಹಸಿ ಕಸ ಮಾತ್ರ ಸಂಗ್ರಹ

|
Google Oneindia Kannada News

ಬೆಂಗಳೂರು, ಜುಲೈ 04 : ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 1ರಿಂದ ಪ್ರತಿದಿನ ಕಸಿ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತದೆ. ಹಸಿ, ಒಣ ಕಸವನ್ನು ಬೇರ್ಪಡಿಸದ ಮನೆಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದರು. 'ಕಸ ಸಂಗ್ರಹಣೆಗೆ ಹೊಸ ಟೆಂಡರ್ ಕರೆಯಲಾಗಿದೆ. ಅದು ಅಂತಿಮ ಹಂತದಲ್ಲಿದ್ದು, ಗುತ್ತಿಗೆ ಪಡೆದವರು ಕಸಿ ಕಸವನ್ನು ಮಾತ್ರ ಸಂಗ್ರಹ ಮಾಡಲಿದ್ದಾರೆ' ಎಂದರು.

ಸರ್ಕಾರಿ ಕಚೇರಿಗಳಲ್ಲಿ ಕಸ ಸಂಸ್ಕರಣೆ : ಬಿಬಿಎಂಪಿ ಶಿಫಾರಸುಸರ್ಕಾರಿ ಕಚೇರಿಗಳಲ್ಲಿ ಕಸ ಸಂಸ್ಕರಣೆ : ಬಿಬಿಎಂಪಿ ಶಿಫಾರಸು

'ಹೊಸ ಟೆಂಡರ್ ನೀಡುವ ವೇಳೆ ವಾರಕ್ಕೆ ಎರಡು ಬಾರಿ ಮಾತ್ರ ಒಣ ಕಸ ಸಂಗ್ರಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಒಣ, ಹಸಿ ಕಸ ಒಟ್ಟಾಗಿ ನೀಡುವ ಮನೆಗಳಿಗೆ ದಂಡವನ್ನು ವಿಧಿಸಲಾಗುತ್ತದೆ' ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರುರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರು

Only wet waste will be picked up during door to door collection

'ಕಸ ವಿಂಗಡನೆ ಮಾಡದ ಮನೆಗಳಿಗೆ ವಿಧಿಸುವ ದಂಡ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಎನ್.ಮಂಜುನಾಥ ಪ್ರಸಾದ್ ಹೇಳಿದರು.

ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸಲು ಬರ್ತಿದ್ದಾರೆ ಮೆಕ್ಯಾನಿಕಲ್ ಸ್ವೀಪರ್ಸ್ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸಲು ಬರ್ತಿದ್ದಾರೆ ಮೆಕ್ಯಾನಿಕಲ್ ಸ್ವೀಪರ್ಸ್

ಸೆಪ್ಟೆಂಬರ್ 1 ರಿಂದ ಶೇ 100ರಷ್ಟು ಮನೆ-ಮನೆ ಕಸ ಸಂಗ್ರಹ, ಶೇ 90ರಷ್ಟು ವಿಂಗಡನೆ ಮಾಡಿದ ಕಸ ಸಂಗ್ರಹ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಯಾವುದೇ ಕಸವನ್ನು ನೀಡದ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

English summary
The Bruhat Bengaluru Mahanagara Palike (BBMP) said that only wet waste will be picked up during the door-to-door collection from September 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X