ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ @ ಬೆಂಗಳೂರು: 35 ಸಾವಿರ ಇದ್ದ ಕಂಟೇನ್ಮೆಂಟ್ ಝೋನ್ ಈಗ ಎಷ್ಟು?

|
Google Oneindia Kannada News

ಬೆಂಗಳೂರು, ನ 16: ಕೆಲವೇ ತಿಂಗಳ ಹಿಂದೆ ಗಲ್ಲಿಗಲ್ಲಿಗಳಲ್ಲಿ ಕಾಣಸಿಗುತ್ತಿದ್ದ ಕಂಟೇನ್ಮೆಂಟ್ ಝೋನ್ ಬೋರ್ಡ್ ಸದ್ಯ ರಾಜಧಾನಿಯಲ್ಲಿ ಎಲ್ಲೂ ಕಾಣಸಿಗುತ್ತಿಲ್ಲ. ಇದಕ್ಕೆ ಕಾರಣ, ಬಿಬಿಎಂಪಿಯ ಬದಲಾದ ನಿಯಮ ಮತ್ತು ಇಳಿಮುಖವಾಗುತ್ತಿರುವ ಪಾಸಿಟೀವ್ ಸಂಖ್ಯೆಗಳು.

ಡಾ.ಸುಧಾಕರ್ ಅವರಿಗೆ ಆರೋಗ್ಯ ಇಲಾಖೆಯನ್ನೂ ನೀಡಿದ ನಂತರ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ನಡುವೆ ಸಮನ್ವಯದ ಕೊರತೆಯಿಲ್ಲ. ಸತತವಾಗಿ ರಾಜಧಾನಿಯಲ್ಲಿ ಕೊರೊನಾ ಹೊಸ ಸೋಂಕಿತರ ಸಂಖ್ಯೆಗಿಂತ, ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚು.

ಬೆಂಗಳೂರು; 4 ಸಾವಿರದ ದಾಟಿದ ಕೋವಿಡ್ ಸಾವಿನ ಸಂಖ್ಯೆಬೆಂಗಳೂರು; 4 ಸಾವಿರದ ದಾಟಿದ ಕೋವಿಡ್ ಸಾವಿನ ಸಂಖ್ಯೆ

ಜೂನ್ ನಿಂದ ಆಗಸ್ಟ್ ಅವಧಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತ್ತಿತ್ತು, ಆ ವೇಳೆ ಸೋಂಕಿತರ ಮನೆಯ ನೂರು ಮೀಟರ್ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿ, ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಆ ಅವಧಿಯಲ್ಲಿ ಸುಮಾರು 35 ಸಾವಿರ ಕಂಟೇನ್ಮೆಂಟ್ ಝೋನ್ ಗಳು ಇದ್ದವು.

Only Two Active Containment Zone In BBMP Limit That Is In Mahadevapura Zone

ಬದಲಾದ ಮಾರ್ಗಸೂಚಿಯ ನಂತರ ಸೋಂಕಿತರ ಮನೆಬಾಗಿಲಿಗೆ ಸಣ್ಣ ಭಿತ್ತಿಪತ್ರವನ್ನು ಅಂಟಿಸಲಾಗುತ್ತಿದೆ. ಆದರೆ, ಇಪ್ಪತ್ತಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು, ನೂರು ಮೀಟರ್ ವ್ಯಾಪ್ತಿಯಲ್ಲಿ ಇದ್ದರೆ ಮಾತ್ರ ಅದನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುತ್ತಿದೆ.

ಈ ರೀತಿಯ ಝೋನ್ ಗಳು ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವುದು ಕೇವಲ ಎರಡು. ಆಗಸ್ಟ್ 21ರಿಂದ ಸುಮಾರು 37 ಕಂಟೇನ್ಮೆಂಟ್ ಝೋನ್ ಗಳಿದ್ದರೂ, ಸದ್ಯ ಸಕ್ರಿಯವಾಗಿರುವ ಝೋನ್ ಗಳು ಎರಡು. ಇವೆರಡೂ ಮಹಾದೇವಪುರ ವ್ಯಾಪ್ತಿಯಲ್ಲಿದೆ.

ಕಂಟೇನ್ಮೆಂಟ್ ಝೋನ್ ನಿಯಮಗಳನ್ನು ಸಡಿಲಿಸಿ, ಆರ್ಥಿಕ ಚಟುವಟಿಕೆಗೆ ಮುಕ್ತ ಅವಕಾಶವನ್ನು ಸರಕಾರ ನೀಡಿತ್ತು. ಸಾರ್ವಜನಿಕರು ಕೆಲವೊಂದು ಮುನ್ನೆಚ್ಚರಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕೆನ್ನುವ ಸೂಚನೆಯಿದ್ದರೂ, ಸಾಮಾಜಿಕ ಅಂತರದ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳುತ್ತಿಲ್ಲ.

English summary
Only Two Active Containment Zone In BBMP (Bengaluru) Limit That Is In Mahadevapura Zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X