ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹೋಗುವ ದಿನ' ಬಂದರೂ 'ವಿಕ್ರಂ' ಮಾತಿಲ್ಲ! ಇಸ್ರೋ ಜೊತೆ ಕೈಜೋಡಿಸಿದ ನಾಸಾ

|
Google Oneindia Kannada News

ಒಂದು... ಎರಡು... ಮೂರು.... ದಿನಗಳು ಉರುಳುತ್ತಲೇ ಇವೆ. ಹದಿನಾಲ್ಕನೇ ದಿನ ಬಂದರೆ ನೂರಾರು ಕೋಟಿ ಭಾರತೀಯರಷ್ಟೇ ಅಲ್ಲದೆ ವಿಶ್ವದ ನಾನಾ ದೇಶದ ಜನರ ಭರವಸೆ ಹುಸಿಯಾಗುತ್ತದೆ. ಅದಕ್ಕೂ ಮುನ್ನ 'ವಿಕ್ರಂ' ಮೌನ ಮುರಿಯುತ್ತಾನಾ? ಗೊತ್ತಿಲ್ಲ! ಆದರೆ ಇಸ್ರೋ ಮಾತ್ರ 'ವಿಕ್ರಂ' ನನ್ನು ಮಾತನಾಡಿಸಲೇಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಲೇ ಇದೆ... ಭಾರತದ ಐತಿಹಾಸಿಕ ಸಾಧನೆಗೆ ಇಡೀ ಜಗತ್ತೂ ತಲೆಬಾಗುತ್ತಿರುವ ಹೊತ್ತಲ್ಲೇ, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಹ ಇಸ್ರೋ ಜೊತೆ ಕೈಜೋಡಿಸಿ ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸಲಿದೆ.

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

ಕಳೆದ ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಮತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು.

ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?

ಭಾನುವಾರ ಈ ಚಿತ್ರ ಸಿಕ್ಕಾಗಿನಿಂದಲೂ ಇಸ್ರೋ ವಿಜ್ಞಾನಿಗಳು ನಿದ್ದೆ ಬಿಟ್ಟು ವಿಕ್ರಂ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಮಾಡಬಹುದಾದ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೆ ಅದು ಇದುವರೆಗೂ ಸಫಲವಾಗಿಲ್ಲ!

ಇಸ್ರೋ ಜೊತೆ ಕೈಜೋಡಿಸಲಿರುವ ನಾಸಾ

ಇಸ್ರೋ ಜೊತೆ ಕೈಜೋಡಿಸಲಿರುವ ನಾಸಾ

ಈಗಾಗಲೇ ಚಂದ್ರನ ಸುತ್ತ ಸುತ್ತುತ್ತಿರುವ ತನ್ನ ಆರ್ಬಿಟರ್ ಅನ್ನು ನಾಸಾವು ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿರುವ ಸ್ಥಳದ ಬಳಿ ಕಳಿಸಲಿದ್ದು, ಅದರ ಚಿತ್ರವನ್ನು ತೆಗೆದು ಇಸ್ರೋಕ್ಕೆ ನೀಡಲಿದೆ. ಇದರಿಂದ ಸಂವಹನಕ್ಕೆ ಸಹಾಯವಾಗಬಹುದು ಎಂದು ನಾಸಾ ಭರವಸೆ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 17 ರಂದು ನಾಸಾದ ಆರ್ಬಿಟರ್ ವಿಕ್ರಮನ ಬಳಿ ಹಾರಾಡಲಿದೆ.

ಇಸ್ರೋದಿಂದ ಶತಾಯಗತಾಯ ಪ್ರಯತ್ನ

ಇಸ್ರೋದಿಂದ ಶತಾಯಗತಾಯ ಪ್ರಯತ್ನ

ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ISTRAC) ತಂಡ ಈಗಾಗಲೇ ವಿಕ್ರಂ ಜೊತೆ ಸಂಪರ್ಕ ಸಾಧಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಇದುವರೆಗೆ ಯಾವುದೇ ಸಂವಹನ ಸಾಧ್ಯವಾಗಿಲ್ಲ.

'ನಿಖಿಲ್...' ಅಂದ್ರೆ 'ಎಲ್ಲಿದಿಯಪ್ಪಾ?' ಅಂತಂತೆ ವಿಕ್ರಂ ಲ್ಯಾಂಡರ್!'ನಿಖಿಲ್...' ಅಂದ್ರೆ 'ಎಲ್ಲಿದಿಯಪ್ಪಾ?' ಅಂತಂತೆ ವಿಕ್ರಂ ಲ್ಯಾಂಡರ್!

2.1 ಕಿ.ಮೀ. ಅಲ್ಲ, 350 ಮೀ ಅಂತರವಷ್ಟೇ!

2.1 ಕಿ.ಮೀ. ಅಲ್ಲ, 350 ಮೀ ಅಂತರವಷ್ಟೇ!

ಸೆ. 7 ರಂದು ಆರ್ಬಿಟರ್ ನಿಂದ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಳ್ಳುವಾಗ ಚಂದ್ರನಿಗಿಂತ ಕೇವಲ 2.1 ಕಿ.ಮೀ. ದೂರದಲ್ಲಿತ್ತು ಎನ್ನಲಾಗಿತ್ತು. ಆದರೆ ಅದು ಕೇವಲ 350 ಮೀ ದೂರದಲ್ಲಿತ್ತು ಎಂದು ಕೆಲವು ಗ್ರಾಫ್ ಗಳು ತಿಳಿಸಿದ್ದವು.

ವಿಕ್ರಂ ಲ್ಯಾಂಡರ್ ಮುರಿದಿಲ್ಲ

ವಿಕ್ರಂ ಲ್ಯಾಂಡರ್ ಮುರಿದಿಲ್ಲ

ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆಯೇ ವಿಕ್ರಂ ಲ್ಯಾಂಡರ್ ವೇಗ ತಗ್ಗಿಸಿಕೊಳ್ಳಲು ಸಾಧ್ಯವಾಗದೆ ಮುರಿದೇ ಹೋಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಭಾನುವಾರ ಆರ್ಬಿಟರ್ ತೆಗೆದ ಥರ್ಮಲ್ ಚಿತ್ರದಲ್ಲಿ ವಿಕ್ರಂ ಲ್ಯಾಂಡರ್ ನ ಒಂದೇ ಚಿತ್ರ ಪತ್ತೆಯಾಗಿದ್ದು, ಅದರ ಬಿಡಿ ಭಾಗಗಳಲು ಎಲ್ಲಿಯೂ ಕಾಣಿಸದಿರುವುದರಿಂದ ಅದು ಚಂದ್ರನ ಮೇಲ್ಮೈ ಮೇಲೆ ನಿರೀಕ್ಷೆಯಂತೆಯೇ ಸುರಕ್ಷಿತವಾಗಿ ಲ್ಯಾಂಡ್

ಆಗಿದೆ ಎಂಬುದು ದೃಢವಾಗಿತ್ತು. ಲ್ಯಾಂಡರ್ ನ ಒಂದು ಭಾಗ ಬಾಗಿದಂತಾಗಿದ್ದು, ಬೇರೆ ಯಾವುದೇ ಹಾನಿಯಾಗಿಲ್ಲ ಎಂಬುದು ದೃಷವಾಗಿದ್ದರಿಂದ ಭರವಸೆ ಮತ್ತಷ್ಟು ಹೆಚ್ಚಿದೆ. ಆದರೆ ಲ್ಯಾಂಡರ್ ನ ಆಯುಷ್ಯ ಕಡಿಮೆಯಾಗುತ್ತಿರುವುದರಿಂದ ಆತಂಕವೂ ಹೆಚ್ಚಿದೆ.

ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ? ಜ್ಯೋತಿಷಿ, ವಿಜ್ಞಾನಿಗಳು ಏನಂತಾರೆ?ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ? ಜ್ಯೋತಿಷಿ, ವಿಜ್ಞಾನಿಗಳು ಏನಂತಾರೆ?

English summary
ISRO puts all possible efforts to cantact Vikram Lander, It has only few days in its hand. Now NASA also join its hands with ISRO .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X