ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮೊದಲಗೆ ಬಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ರಾಜ್ಯದಲ್ಲಿ ಮೊದಲ ಸಲ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ಕಳೆದ ಒಂದು ವಾರದಿಂದ 34, 38, 17, 25 ಹೀಗೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೆ ಇತ್ತು. ಆದರೆ, ಇಂದು ಕೇವಲ 4 ಜನ ಸೋಂಕಿತರು ಮಾತ್ರ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹೌದು, ನಿನ್ನೆ ಸಂಜೆಯಿಂದ ಈವರೆಗೆ ಕೇವಲ 4 ಹೊಸ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Only 4 New Cases Found In Karnataka Today

ಭಾರತದಲ್ಲಿ ಕೊರೊನಾದಿಂದ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯಭಾರತದಲ್ಲಿ ಕೊರೊನಾದಿಂದ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯ

ಈ ನಾಲ್ಕು ಕೇಸ್‌ಗಳು ದಾಖಲಾಗಿರುವುದು ಮೈಸೂರಿನಲ್ಲಿ ಎನ್ನುವುದು ಗಮನಾರ್ಹ. ಇಬ್ಬರು ಮೈಸೂರು ನಗರ ಹಾಗು ಮತ್ತಿಬ್ಬರು ನಂಜನಗೂಡು ಮೂಲದವರು. ಮೈಸೂರು ನಗರದ ನಿವಾಸಿಗಳು ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದರೆ, ನಂಜನಗೂಡಿನ ಇಬ್ಬರು ಈ ಹಿಂದಿನ ಸೋಂಕಿತರ ಜೊತೆಯಲ್ಲಿ ಸಂಪರ್ಕ ಹೊಂದಿದ್ದವರು.

ಸದ್ಯ, ಕರ್ನಾಟಕದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಕ್ಯೆ 388ಕ್ಕೇರಿದೆ. ಇದರಲ್ಲಿ ಸೋಂಕಿತರಲ್ಲಿ 105 ಜನರು ಗುಣಮುಖರಾಗಿದ್ದಾರೆ. 14 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.

ಕೊರೊನಾ ಸಂಬಂಧ ಸಿಎಂ ಮುಂದೆ 15 ಬೇಡಿಕೆಯಿಟ್ಟ ಕಾಂಗ್ರೆಸ್ ನಿಯೋಗಕೊರೊನಾ ಸಂಬಂಧ ಸಿಎಂ ಮುಂದೆ 15 ಬೇಡಿಕೆಯಿಟ್ಟ ಕಾಂಗ್ರೆಸ್ ನಿಯೋಗ

ಉಳಿದ 269ರಲ್ಲಿ ಗರ್ಭಿಣಿ ಸೇರಿದಂತೆ 266 ಜನರ ಆರೋಗ್ಯ ಸ್ಥಿರ, 3 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.

English summary
Only 4 new Coronavirus case found from yesterday evening to till afternoon. now, total number COVID19 cases in Karnataka 338.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X