ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Clinic: ಗಣರಾಜ್ಯೋತ್ಸವದ ವೇಳೆಗೆ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್‌ಗಳು ಆರಂಭ ಎಂಬ ಸಚಿವರ ಮಾತು ನಿಜವಾಯಿತೇ?

243 ನಮ್ಮ ಕ್ಲಿನಿಕ್‌ಗಳು ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ವೇಲೆಗೆ ಕಾರ್ಯನಿರ್ವಹಿಸಲಿವೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಆರೋಗ್ಯ ಸಚಿವ ಸುಧಾಕರ್ ಘೋಷಿಸಿದ್ದರು. ಹಾಗಾದರೆ ಈ ಗಣರಾಜ್ಯೋತ್ಸವಕ್ಕೆ ಕಾರ್ಯನಿರ್ವಹಿಸಲಿರುವ ಕ್ಲಿನಿಕ್‌ಗಳೆಷ್ಟು ತಿಳಿಯಿರಿ.

|
Google Oneindia Kannada News

ಬೆಂಗಳೂರು, ಜನವರಿ. 24: ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ನಮ್ಮ ಕ್ಲಿನಿಕ್‌ಗಳು ಜನವರಿ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಘೋಷಿಸಿದ್ದರು. ಹಾಗಾದರೇ ಇನ್ನೆರಡು ದಿನಗಳಲ್ಲಿ 243 ನಮ್ಮ ಕ್ಲಿನಿಕ್‌ಗಳು ಜನರ ಸೇವೆಗೆ ಮುಕ್ತವಾಗಲಿವೆಯೇ ಎಂದರೆ ಖಂಡಿತ ಇಲ್ಲ.

ಜನವರಿ ಮೊದಲ ವಾರದಲ್ಲಿಯೇ 243 ನಮ್ಮ ಕ್ಲಿನಿಕ್‌ಗಳು ಕೆಲಸ ಮಾಡಲಿವೆ ಎಂದು ಘೋಷಿಸಿದ್ದರೂ ಜನವರಿ 26 ರ ವೇಳೆಗೆ ಜನರ ಸೇವೆಗೆ ದೊರೆಯುವುದು ಮಾತ್ರ ಕೇವಲ 108 ಕೇಂದ್ರಗಳು ಮಾತ್ರ.

ಸಚಿವ ಸುಧಾಕರ್ ಸಿಕ್ಕಿರುವುದು ಈ ಕ್ಷೇತ್ರದ ಜನರ ಭಾಗ್ಯ: ಸಚಿವ ಮುನಿರತ್ನ ಪ್ರಶಂಸೆಸಚಿವ ಸುಧಾಕರ್ ಸಿಕ್ಕಿರುವುದು ಈ ಕ್ಷೇತ್ರದ ಜನರ ಭಾಗ್ಯ: ಸಚಿವ ಮುನಿರತ್ನ ಪ್ರಶಂಸೆ

"ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಜನವರಿ ಮೊದಲ ವಾರದಲ್ಲಿ ತೆರೆಯಲು ನಿರ್ಧರಿಸಲಾಗಿತ್ತು. ಆದರೆ, 108 ಮಾತ್ರ ಜನವರಿ 26 ರ ವೇಳೆಗೆ ಕಾರ್ಯನಿರ್ವಹಿಸಲಿದೆ. ಇತರ 135 ಕೇಂದ್ರಗಳು ಯಾವಾಗ ಪ್ರಾರಂಭವಾಗುತ್ತವೆ ಎಂದು ತಿಳಿದಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗರಿಗೆ ಗಣರಾಜ್ಯೋತ್ಸವ ಕೊಡುಗೆ: 108 ನಮ್ಮ ಕ್ಲಿನಿಕ್‌ ಆರಂಭ

ಬೆಂಗಳೂರಿಗರಿಗೆ ಗಣರಾಜ್ಯೋತ್ಸವ ಕೊಡುಗೆ: 108 ನಮ್ಮ ಕ್ಲಿನಿಕ್‌ ಆರಂಭ

"ನಾವು ಈ ವಾರ 108 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಯೋಜಿಸುತ್ತಿದ್ದೇವೆ. ಬಹುಶಃ ಗಣರಾಜ್ಯ ದಿನದಂದು ಇವುಗಳನ್ನು ಆರಂಭಿಸಬಹುದು. ಕಾರ್ಯಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಉಳಿದ ಕ್ಲಿನಿಕ್‌ಗಳನ್ನು ಕೂಡ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು" ಎಂದು ಬಿಬಿಎಂಪಿ ವಿಶೇಷ ಆಯುಕ್ತ ಆರೋಗ್ಯ ಕೆ ವಿ ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಬಿಬಿಎಂಪಿ ವಾರ್ಡ್‌ನ ಎಲ್ಲಾ 243 ವಾರ್ಡ್‌ಗಳಲ್ಲಿ ಒಂದು ನಮ್ಮ ಕ್ಲಿನಿಕ್ ಇರುತ್ತದೆ. ಪ್ರತಿ ಕ್ಲಿನಿಕ್‌ನಲ್ಲಿಯೂ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ಡಿ ಉದ್ಯೋಗಿಗಳು ಇರುತ್ತಾರೆ.

ನಮ್ಮ ಕ್ಲಿನಿಕ್‌ಗಳಿಗೆ ಸ್ಥಳ ಗುರುತಿಸುವುದು ವಿಳಂಬಕ್ಕೆ ಕಾರಣ

ನಮ್ಮ ಕ್ಲಿನಿಕ್‌ಗಳಿಗೆ ಸ್ಥಳ ಗುರುತಿಸುವುದು ವಿಳಂಬಕ್ಕೆ ಕಾರಣ

ನಮ್ಮ ಕ್ಲಿನಿಕ್‌ಗಳ ಆರಂಭಕ್ಕೆ ವಿಳಂಬವಾಗಿರುವ ಪ್ರಮುಖ ಕಾರಣವೆಂದರೆ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು. ಇದರ ಜೊತೆಗೆ ಕ್ಲಿನಿಕ್‌ಗಳ ಸ್ಥಾಪನೆಗೆ ಸರಿಯಾದ ಸ್ಥಳಗಳನ್ನು ಗುರುತಿಸುವುದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ನಮ್ಮ ಕ್ಲಿನಿಕ್‌ಗಳಿಗೆ ಡಿಸೆಂಬರ್‌ನಲ್ಲಿ ಉಳಿದ ವೈದ್ಯರನ್ನು ನೇಮಿಸಲು ಅಧಿಸೂಚನೆ ಹೊರಡಿಸಿದ್ದೇವೆ. ಶೀಘ್ರದಲ್ಲೇ ನೇಮಕಾತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ 108 ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುವುದು, ಉಳಿದವುಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. 108 ಕ್ಲಿನಿಕ್‌ಗಳಿಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಜೊತೆಗೆ ಆರೋಗ್ಯ ಯೋಜನೆಗಳ ಜಾಗೃತಿ

ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಜೊತೆಗೆ ಆರೋಗ್ಯ ಯೋಜನೆಗಳ ಜಾಗೃತಿ

"ನಗರದ ಪ್ರತಿ ವಾರ್ಡ್‌ಗಳಲ್ಲಿ ಕನಿಷ್ಠ ಒಂದು ನಮ್ಮ ಕ್ಲಿನಿಕ್ ಇರುತ್ತದೆ. ಇವುಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತವೆ. ನಮ್ಮ ಕ್ಲಿನಿಕ್‌ಗಳು ಆರೋಗ್ಯ ಸೇವೆಯನ್ನು ಒದಗಿಸುವುದರ ಜೊತೆಗೆ ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಗಮನಹರಿಸುತ್ತವೆ ಎಂದು ಸಚಿವ ಡಾ.ಕೆ.ಸುಧಾಕರ್ ಕಳೆದ ತಿಂಗಳು ತಿಳಿಸಿದ್ದರು.

ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಸ್ತಿತ್ವದಲ್ಲಿವೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ನಗರ ಪ್ರದೇಶಗಳಲ್ಲಿ ಸಾಕಷ್ಟು ಸರ್ಕಾರಿ ಆರೋಗ್ಯ ಕೇಂದ್ರಗಳಿಲ್ಲ, ಆದ್ದರಿಂದ ಈ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದರು.

ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರ್ಚುವಲ್ ಆಗಿ 114 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದಿದ್ದರು.

1,000 ರಿಂದ 1,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಸರ್ಕಾರಿ ಕಟ್ಟಡಗಳು ಮತ್ತು ಬಾಡಿಗೆ ಆವರಣದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ವರ್ಷ ಇದಕ್ಕಾಗಿ ಸರ್ಕಾರವು 138 ಕೋಟಿ ರೂಪಾಯಿ ವ್ಯಯಿಸಲಿದೆ.

ಈ ಕ್ಲಿನಿಕ್‌ಗಳಲ್ಲಿ ಗರ್ಭಧಾರಣೆ, ಪ್ರಸವಪೂರ್ವ ಆರೈಕೆ, ನವಜಾತ ಶಿಶುಗಳ ಆರೈಕೆ, ಬಾಲ್ಯ ಮತ್ತು ಹದಿಹರೆಯದವರ ಆರೈಕೆ, ಸಾರ್ವತ್ರಿಕ ರೋಗನಿರೋಧಕ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕಗಳು, ಸಾಂಕ್ರಾಮಿಕ ರೋಗ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಕಾಯಿಲೆಗಳ ಆರೈಕೆ, ಮಧುಮೇಹ, ರಕ್ತದೊತ್ತಡ , ದೀರ್ಘಕಾಲದ ಕಾಯಿಲೆಗಳು ಮತ್ತು ಬಾಯಿಯ ಕಾಯಿಲೆಗಳಿಗೆ ಉಚಿತವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ.

English summary
Namma Clinics: Only 108 out of 243 Namma Clinics will operational by January 26 in bengaluru. Health Minister Dr K Sudhakar last October announced 243 Namma Clinics. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X