• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ರೋದಿಂದ ಅಪೂರ್ವ ಅವಕಾಶ: ಚಂದ್ರಯಾನವನ್ನು ನೀವೂ ನೋಡಬಹುದು!

|

ಬೆಂಗಳೂರು, ಜುಲೈ 3: ಭೂಮಿಯ ಉಪಗ್ರಹ ಚಂದ್ರನ ಕುರಿತ ಅಧ್ಯಯನಕ್ಕಾಗಿ 'ಚಂದ್ರಯಾನ-1' ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಅನೇಕ ಮಾಹಿತಿಗಳನ್ನು ಕಲೆಹಾಕುವುದರಲ್ಲಿ ಸಫಲವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ, ಈ ಸರಣಿಯ ಮತ್ತೊಂದು ಮಹತ್ವದ ಯೋಜನೆಗೆ ಕೈ ಹಾಕಿದೆ.

ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2 ಇದೇ ತಿಂಗಳ 15ರಂದು ನಭಕ್ಕೆ ಚಿಮ್ಮಲಿದೆ. ಈ ಮೂಲಕ ಇಸ್ರೋ ಚಂದ್ರನ ಅಧ್ಯಯನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಲಿದೆ. ಈ ಸುದ್ದಿ ಭಾರತೀಯರಲ್ಲಿ ಪುಳಕ ಹುಟ್ಟಿಸಿದೆ.

ಬಾಹ್ಯಾಕಾಶದಲ್ಲಿ ತನ್ನದೇ ನಿಲ್ದಾಣ ಸ್ಥಾಪಿಸಲಿದೆ ಇಸ್ರೋ

ಇದುವರೆಗೂ ಇಸ್ರೋದಿಂದ ನೌಕೆಗಳು, ಉಪಗ್ರಹಗಳನ್ನು ಉಡಾವಣೆ ಮಾಡುವ ಸಂದರ್ಭದಲ್ಲಿ ಕೆಲವು ಸೀಮಿತ ಗಣ್ಯರಿಗೆ ಅದನ್ನು ವೀಕ್ಷಿಸುವ ಅವಕಾಶ ನೀಡಲಾಗುತ್ತಿತ್ತು. ಸಾರ್ವಜನಿಕರು ಟಿವಿ ವಾಹಿನಿಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲಭ್ಯವಿದ್ದರೆ ಮಾತ್ರ ವೀಕ್ಷಿಸಬಹುದಾಗಿತ್ತು. ಆದರೆ, ಈ ವಿಶೇಷ ಗಳಿಗೆಯನ್ನು ಸಂಸ್ಥೆಯ ವಿಜ್ಞಾನಿಗಳು ಮಾತ್ರವಲ್ಲ, ಸಾರ್ವಜನಿಕರೂ ಕಣ್ತುಂಬಿಕೊಳ್ಳಲು ಇಸ್ರೋ ಅವಕಾಶ ನೀಡುತ್ತಿದೆ.

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಉಪಕರಣಗಳು ಚಂದ್ರನ ಅಂಗಳಕ್ಕೆ ತೆರಳಲಿವೆ.

ಅಂತರ್ಜಾಲದಲ್ಲಿ ನೋಂದಾಯಿಸಿಕೊಳ್ಳಿ

ಅಂತರ್ಜಾಲದಲ್ಲಿ ನೋಂದಾಯಿಸಿಕೊಳ್ಳಿ

ಚಂದ್ರಯಾನ-2ರ ಉಡಾವಣೆಯ ಸಂದರ್ಭದಲ್ಲಿ ಸಾರ್ವಜನಿಕರು ನೇರವಾಗಿ ಹಾಜರಿದ್ದು ವೀಕ್ಷಿಸಲು ಇಸ್ರೋ ಅವಕಾಶ ಕಲ್ಪಿಸುತ್ತಿದೆ. ಇದಕ್ಕಾಗಿ ಸಾರ್ವಜನಿಕರು ಅಂತರ್ಜಾಲದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕಾಗಿದೆ. ಜುಲೈ 4ರಿಂದ ಅಂತರ್ಜಾಲ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಸ್ರೋ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಆದರೆ, ಯಾವ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಯಾವುದೇ ಲಿಂಕ್ ನೀಡಿಲ್ಲ.

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ

ಜುಲೈ 15ರಂದು ಉಡಾವಣೆ

ಜುಲೈ 15ರಂದು ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ರಂದು ನಸುಕಿನ 2.51ಕ್ಕೆ ಚಂದ್ರಯಾನ-2 ಉಡಾವಣೆಯಾಗಲಿದೆ. 3.8 ಟನ್ ತೂಕದ ಆರ್ಬಿಟರ್, ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ಅನ್ನು ಒಳಗೊಂಡಿರುವ ಜಿಎಸ್‌ಎಲ್‌ವಿ ಮಾರ್ಕ್ 3 ನೌಕೆಯು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಲಿದೆ.

ಸ್ಟೇಡಿಯಂ ಗ್ಯಾಲರಿಯಲ್ಲಿ ಅವಕಾಶ

ಸ್ಟೇಡಿಯಂ ಗ್ಯಾಲರಿಯಲ್ಲಿ ಅವಕಾಶ

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಶಾಲವಾದ ಮೈದಾನದ ಮಾದರಿ ಇದ್ದು, ಇಲ್ಲಿನ ಗ್ಯಾಲರಿಯಲ್ಲಿ 5000 ಮಂದಿ ಕುಳಿತುಕೊಂದು ವೀಕ್ಷಿಸಬಹುದಾದ ಸಾಮರ್ಥ್ಯವಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇಲ್ಲಿ ಕುಳಿತು ನೇರವಾಗಿ ಉಡಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ಹೆಮ್ಮೆಯ ಚಂದ್ರಯಾನ 2: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಸೆಪ್ಟೆಂಬರ್ 6ಕ್ಕೆ ಚಂದ್ರನ ಸ್ಪರ್ಶ

ಸೆಪ್ಟೆಂಬರ್ 6ಕ್ಕೆ ಚಂದ್ರನ ಸ್ಪರ್ಶ

ಕಕ್ಷಾಗಾಮಿ ಒಳಗೊಂಡಿರುವ 3,800 ಕೆಜಿ ತೂಕದ ನೌಕೆ, ಚಂದ್ರನಿಂದ 100 ಕಿ.ಮೀ ದೂರದಲ್ಲಿ ಸುತ್ತುಹಾಕಲಿದೆ. ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 6ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಜ್ಞಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ. ಇದುವರೆಗೂ ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ISRO offered an online registration opportunity for public to watch the Chandrayaan-2 mission, which is supposed to launch on July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more