ಶರಣರ ಬದುಕು ಮತ್ತು ಬರಹ ಆನ್ಲೈನ್ ರಸಪ್ರಶ್ನೆ
ಇಂದಿನ ಯುಗದಲ್ಲಿ ಶರಣ ತತ್ವಗಳು ಬಹೂ ಮುಖ್ಯ, 12 ನೇ ಶತಮಾನದ ಮಾನವೀಯ ಮೌಲ್ಯಗಳು ಇಂದಿನ ಜನರಿಗೆ ಅತ್ಯವಶ್ಯ.
ಇಡೀ ಜಗತ್ತಿನಲ್ಲೇ 12 ನೇ ಶತಮಾನದ ಕ್ರಾಂತಿ ಬಹೂ ವಿಶಿಷ್ಟ. ಸಾಮಾಜಿಕ ಮೌಢ್ಯ, ತಾರತಮ್ಯ ಮತ್ತು ಸ್ತ್ರೀ ಸ್ವಾತಂತ್ರ್ಯಗಳನ್ನ ಎತ್ತಿ ಹಿಡಿದು ಜಗತ್ತಿಗೆ ಬಹೂ ದೊಡ್ಡ ಕೊಡುಗೆ ನೀಡಿದವರು ನಮ್ಮ ನಾಡಿನ ಶರಣರೆನ್ನುವುದು ನಮಗೆ ಹೆಮ್ಮೆಯ ವಿಷಯ. ಹೀಗಾಗಿ ಇಂದಿನ ಪೀಳಿಗೆಗೆ ಆ ತತ್ವಗಳನ್ನ ಹರಡುವುದು ಬಹು ಮುಖ್ಯ .
ಇದರ ಸಲುವಾಗಿ ಮುಖಪುಟದ ಬಸವಣ್ಣ ಪೇಜ್ ಅಡ್ಮಿನಗಳು ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ, ಕಲ್ಯಾಣ ಕಟ್ಟೋಣ ಎಂಬ ಹೆಸರಲ್ಲಿ ಶರಣರ ಬದುಕು ಮತ್ತು ಬರಹ ಒಳಗೊಂಡಿರುವ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನ ಬುಧುವಾರ ಸಂಜೆ ನಾಲ್ಕರಿಂದ ಐದು ಗಂಟೆಯವರೆಗೆ ನಡೆಸಲಿದ್ದಾರೆ. ಹೀಗಾಗಿ ಬಿಡುವು ಮಾಡಿಕೊಂಡು ಎಲ್ಲರು ಭಾಗವಹಿಸಿ.
ತಾಣ : www.facebook.com/basavanna12
Date : 26/10/2016
ಸಂಜೆ ನಾಲ್ಕು ಗಂಟೆಗೆ ಬಸವಣ್ಣ ಪೇಜ್ ಅಲ್ಲಿ ರಸಪ್ರಶ್ನೆಯ ಲಿಂಕ್ ಅನ್ನು ಹಾಕಲಾಗುತ್ತದೆ, ಆ ಲಿಂಕನ್ನು ಕ್ಲಿಕ್ ಮಾಡಿದಾಗ ರಸಪ್ರಶ್ನೋತ್ತರ ಪೇಜ್ ಹೋಗುತ್ತದೆ ಅಲ್ಲಿ ಒಂದು ಗಂಟೆ ಕಾಲಾವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕು.
ಗೆದ್ದವರಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನ ಕೊಡಲಾಗುವುದು.
ಹೆಚ್ಚಿನ ವಿವರಗಳಿಗೆ : https://www.facebook.com/Basavanna12/
8867734326/9986009952/9972067407