'ತೇಜಸ್ವಿ ವಿಸ್ಮಯ' - ಆನ್ಲೈನ್ ರಸಪ್ರಶ್ನೆ ಸ್ಪರ್ಧೆ
ಬೆಂಗಳೂರು, ಸೆಪ್ಟೆಂಬರ್ 01, 2016: ನಮ್ಮ ನಾಡಿನ ಪ್ರಸಿದ್ಧ ಲೇಖಕರೂ, ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರೂ, ವನ್ಯಜೀವಿ ಛಾಯಾಚಿತ್ರಗ್ರಾಹಕರೂ, ಹೋರಾಟಗಾರರೂ, ರೈತ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದವರೂ ಆದ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ ಮುಂದಿನ ಗುರುವಾರದಂದು (08-09-2016) ಆಚರಿಸಲಾಗುತ್ತದೆ
ಫೇಸ್ ಬುಕ್ ನಲ್ಲಿ "ಪೂರ್ಣಚಂದ್ರ ತೇಜಸ್ವಿ" (www.fb.com/PCTejaswi) ಪುಟವನ್ನು ನಡೆಸುತ್ತಿರುವ ತಂಡದವರು ತೇಜಸ್ವಿಯವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ (01-09-2016) ಸಂಜೆ 4 ಗಂಟೆಗೆ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುತ್ತಿದ್ದೇವೆ. ಆಸಕ್ತರು ಮನೆ ಅಥವಾ ಆಫೀಸಿನಿಂದಲೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಕ್ವಿಜ್ ತೆಗೆದುಕೊಳ್ಳಬಹುದು.
1. ಈ ರಸಪ್ರಶ್ನೆ ಸಂಜೆ 4 ರಿಂದ 5 ಗಂಟೆಯವರೆಗೆ ನಡೆಯಲಿದೆ.
2. ತೇಜಸ್ವಿಯವರ ಜೀವನ, ಸಾಹಿತ್ಯ ಮತ್ತು ವಿಚಾರಗಳನ್ನು ಈ ರಸಪ್ರಶ್ನೆ ಒಳಗೊಂಡಿರುತ್ತದೆ. (ಮೂರು ವಿಭಾಗಗಳಲ್ಲಿ ತಲಾ 10 ಪ್ರಶ್ನೆಗಳು, ಒಟ್ಟು 30 ಪ್ರಶ್ನೆಗಳಿರುತ್ತವೆ).
3. ಇಂಟರ್ ನೆಟ್ ಅಥವಾ ತೇಜಸ್ವಿಯವರ ಹೊತ್ತಿಗೆಗಳನ್ನು ಬಳಸಿಕೊಂಡು ಉತ್ತರಿಸಬಹುದು.
4. ಕ್ವಿಜ್ ಲಿಂಕನ್ನು ಮಧ್ಯಾಹ್ನ 3 ಗಂಟೆಗೆ ಫೇಸ್ ಬುಕ್ ಪೇಜ್ www.fb.com/PCTejaswi ನಲ್ಲಿ ಹಾಕಲಾಗುತ್ತದೆ.
5. ಒಬ್ಬರಿಗೆ ಒಮ್ಮೆ ಮಾತ್ರ ಕ್ವಿಜ್ ತೆಗೆದುಕೊಳ್ಳಲು ಅವಕಾಶವಿದ್ದು ಒಂದಕ್ಕಿಂತ ಹೆಚ್ಚು ಬಾರಿ ಕ್ವಿಜ್ ಸಬ್ಮಿಟ್ ಮಾಡಿದರೆ ಅಂತಹವರನ್ನು ಪರಿಗಣಿಸಲಾಗುವುದಿಲ್ಲ.
ರಸಪ್ರಶ್ನೆಯಲ್ಲಿ ಗೆದ್ದವರಿಗೆ ಕೆಳಗಿನ ಬಹುಮಾನಗಳನ್ನು ನೀಡಲಾಗುವುದು.
----------------------
1ನೇ ಬಹುಮಾನ: ತೇಜಸ್ವಿ ಬರಹವಿರುವ ಕಾಲರ್ಡ್ ಟೀ-ಶರ್ಟ್ ಮತ್ತು ತೇಜಸ್ವಿಯವರ ಪುಸ್ತಕ
2ನೇ ಬಹುಮಾನ: ತೇಜಸ್ವಿ ಬರಹವಿರುವ ರೌಡ್ ನೆಕ್ ಟೀ-ಶರ್ಟ್ ಮತ್ತು ತೇಜಸ್ವಿಯವರ ಪುಸ್ತಕ
3ನೇ ಬಹುಮಾನ: ತೇಜಸ್ವಿಯವರ ಪುಸ್ತಕ
ವಿಶೇಷ ಸೂಚನೆ: ಮೇಲಿನ ಬಹುಮಾನಗಳ ಜೊತೆಗೆ ಈ ಮೂರು ಸ್ಥಾನಗಳಲ್ಲಿ ಗೆದ್ದವರಿಗೆ ಸೆಪ್ಟೆಂಬರ್ 10 ಮತ್ತು 11 ರಂದು ನಮ್ಮ ತಂಡ ಹಮ್ಮಿಕೊಂಡಿರುವ "ತೇಜಸ್ವಿ ನೆನಪು - ಚಾರಣ ಮತ್ತು ಚರ್ಚೆ" ಯಲ್ಲಿ ಉಚಿತವಾಗಿ ಭಾಗವಹಿಸಲು ಅವಕಾಶ ನೀಡಲಾಗುವುದು.
ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
---------------------
1. ನಾಳೆ ಮಧ್ಯಾಹ್ನ 3 ಗಂಟೆಗೆ ನಮ್ಮ ಫೇಸ್ ಬುಕ್ ಪೇಜ್ (www.fb.com/PCTejaswi) ನಲ್ಲಿ ಕ್ವಿಜ್ ಲಿಂಕ್ ಹಾಕಲಾಗುತ್ತದೆ.
2. ಸಂಜೆ 4 ಗಂಟೆಗೆ ಲಿಂಕ್ ಆಕ್ಟಿವೇಟ್ ಆಗುತ್ತದೆ.
3. ನಂತರ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಕ್ವಿಜ್ ನ ಮೊದಲ ಪುಟ ತೆರೆದುಕೊಳ್ಳುತ್ತದೆ.
4. ಮೊದಲ ಪುಟದಲ್ಲಿ ಕೆಲವು ಸೂಚನೆಗಳನ್ನು ಹಾಕಲಾಗಿರುತ್ತದೆ. ನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿದರೆ ಮುಂದಿನ ಪುಟದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ ಈ ಮಾಹಿತಿಯನ್ನು ತುಂಬಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪ್ರಶ್ನೆಗಳು ಕಾಣಿಸುತ್ತವೆ.
5. ನಂತರ ನೀವು ಒಂದೊಂದೆ ಪ್ರಶ್ನೆಗೆ ಉತ್ತರಿಸುತ್ತ ಹೋಗಬಹುದು.
6. ಎಲ್ಲಾ ಮೂರು ವಿಭಾಗಗಳಲ್ಲಿ ಮೂವತ್ತು ಪ್ರಶ್ನೆಗಳಗೆ ಉತ್ತರಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕ್ವಿಜ್ ಸಬ್ಮಿಟ್ ಆಗುತ್ತದೆ.
7. ಈ ಕ್ವಿಜ್ ಗೆ ನೀಡಲಾಗುವ ಸಮಯ: 1 ಗಂಟೆ (ಸಂಜೆ 4 ರಿಂದ 5 ರವರೆಗೆ). ಸಂಜೆ 5 ರ ನಂತರ ಲಿಂಕ್ ಅನ್ನು ತೆಗೆದುಹಾಕಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.fb.com/PCTejaswi
- ಪೂರ್ಣಚಂದ್ರ ತೇಜಸ್ವಿ ಫೇಸ್ಬುಕ್ ಪೇಜ್ ಮತ್ತು ಗುಂಪಿನ ಅಡ್ಮಿನ್ ತಂಡ