ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೆಗುಂದಿ ವ್ಯಾಸರಾಯರ ಬೃಂದಾವನ ಧ್ವಂಸ: ಆನ್‌ಲೈನ್ ಪೆಟಿಷನ್

|
Google Oneindia Kannada News

ಬೆಂಗಳೂರು, ಜುಲೈ 18: ಆನೆಗುಂದಿ ವ್ಯಾಸರಾಯರ ಬೃಂದಾವನ ನಾಶಕ್ಕೆ ಸಂಬಂಧಿಸಿದಂತೆ ಚೇಂಜ್ ಡಾಟ್ ಆರ್ಗ್ ಆನ್‌ಲೈನ್ ಪೆಟಿಷನ್ ಆರಂಭಿಸಿದೆ.

ವ್ಯಾಸರಾಯರ ಬೃಂದಾವನಕ್ಕೆ ನ್ಯಾಯದೊರಕಿಸಿಕೊಡಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆನ್‌ಲೈನ್ ಪಿಟಿಷನ್ ಆರಂಭಿಸಲಾಗಿದೆ.

ಬೃಂದಾವನ ಧ್ವಂಸ: ಕೃತ್ಯ ಮಾಡಿದವರ ವಂಶ ಸರ್ವನಾಶವಾಗಲಿ ಎಂದ ಜಗ್ಗೇಶ್ ಬೃಂದಾವನ ಧ್ವಂಸ: ಕೃತ್ಯ ಮಾಡಿದವರ ವಂಶ ಸರ್ವನಾಶವಾಗಲಿ ಎಂದ ಜಗ್ಗೇಶ್

ನಿಧಿಗಳ್ಳರು ಮಾಡಿದ ಹೇಯ ಕೃತ್ಯ ಎನ್ನುವುದು ತಿಳಿದುಬಂದಿದೆ. ಇದೊಂದು ರಾಷ್ಟ್ರೀಯ ದುರಂತ. ಏಕೆಂದರೆ, ವ್ಯಾಸರಾಜರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಗುರುಗಳಲ್ಲ. ಹಿಂದೂ ಸಾಮ್ರಾಜ್ಯದ ಗುರುಗಳು. ದಕ್ಷಿಣ ಭಾರತದ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನೇ ರಕ್ಷಿಸಿದವರು. ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯವೊಂದನ್ನು ಕೆಲ ಕಾಲ ಆಳಿದ ಏಕೈಕ ಬ್ರಾಹ್ಮಣ ಸನ್ಯಾಸಿ ಇವರು.

Online petition for Brindavan demolision

ವ್ಯಾಸಕೂಟ, ದಾಸಕೂಟಗಳನ್ನು ರಚಿಸಿ, ಅತ್ತ ಸಂಸ್ಕೃತ ಸಂಪ್ರದಾಯ ಉಳಿಸಿ, ಬೆಳೆಸಿ ಇತ್ತ ಕನ್ನಡ ಕ್ರಾಂತಿ ಮೊಳಗಿಸಿದವರು. ಪುರಂದರ ದಾಸರು, ಕನಕದಾಸರು ಉಚ್ಛ್ರಾಯ ಸ್ಥಿತಿಗೆ ಬರಲು ಇವರೇ ಕಾರಣ.

ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಇಂಥ ಮಹಾತ್ಮರ ಮೂಲವೃಂದಾವನ ಧ್ವಂಸ ಒಂದು ದುರಂತ. ಸಮಸ್ತ ಬ್ರಾಹ್ಮಣ ಸಮುದಾಯ ಹಾಗೂ ಇತರರು ಒಕ್ಕೊರಲಿನಿಂದ ಈ ಕೃತ್ಯವನ್ನು ಖಂಡಿಸಲೇ ಬೇಕು. ಪ್ರಕರಣ ಯಾವ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದೆ. ಚೇಂಜ್ ಡಾಟ್ ಆರ್ಗ್(change.org) ವೆಬ್‌ಸೈಟ್‌ಗೆ ಹೋದರೆ ಅಲ್ಲಿಯೇ ನೀವು ರುಜು ಮಾಡಬಹುದು.ವ್ಯಾಸರಾಯರು ಜೀವಿಸಿದ್ದ ಕಾಲ 1447-1539 ಎಂದು ಹೇಳಲಾಗುತ್ತದೆ. ವ್ಯಾಸರಾಯರು 1548 , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

English summary
Change. org started Online petition for Vyasarayara Brindavan demolision in Anegundi of Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X