ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಗವಾನ್‌ಗೆ ನೀಡಿರುವ ಪ್ರಶಸ್ತಿ ಹಿಂಪಡೆಯಲು ಹಕ್ಕೊತ್ತಾಯ

By ಶ್ರೀವತ್ಸ ಜೋಶಿ
|
Google Oneindia Kannada News

ವಿವಾದಾತ್ಮಕ ಚಿಂತಕ, ಬರಹಗಾರ, ತರ್ಜುಮೆಗಾರ ಪ್ರೊಫೆಸರ್ ಕೆಎಸ್ ಭಗವಾನ್ ಅವರನ್ನು ರಾಜ್ಯ ಸರಕಾರ ಪ್ರತಿಷ್ಠಿತ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಭಗವದ್ಗೀತೆ ಸುಡಬೇಕು, ರಾಮ ಹುಟ್ಟೇ ಇಲ್ಲ ಎಂಬಂತಹ ಹೇಳಿಕೆ ನೀಡುತ್ತಲೇ ಕನ್ನಡಿಗರ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ವ್ಯಕ್ತಿಗೆ ಪ್ರಶಸ್ತಿ ನೀಡುತ್ತಿರುವುದು ಎಷ್ಟು ಸರಿ ಎಂಬುದು ಕನ್ನಡಿಗರ ಪ್ರಶ್ನೆ. ಇದರ ವಿರುದ್ಧ ಚೇಂಜ್.ಆರ್ಗ್ ನಲ್ಲಿ ಚಳವಳಿ ಶುರುವಾಗಿದ್ದು, ಪ್ರಶಸ್ತಿಯ ಗೌರವ ಕಳೆಯುವ ಮುನ್ನ ಇವರಿಗೆ ನೀಡಿರುವ ಪ್ರಶಸ್ತಿಯನ್ನೇ ಹಿಂಪಡೆಯಿರಿ ಎಂದು ಶ್ರೀವತ್ಸ ಜೋಶಿ ಆಗ್ರಹಿಸಿದ್ದಾರೆ.

***
ಅಂದು:
"ಪುರದಪುಣ್ಯಂ ಪುರುಷರೂಪಿಂದ ಪೋಗುತಿದೆ| ಪರಿಜನದ ಭಾಗ್ಯವಡವಿಗೆ ನಡೆಯುತಿದೆ||"

ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲೊಂದಾದ ಹರಿಶ್ಚಂದ್ರಕಾವ್ಯದಲ್ಲಿ ರಾಘವಾಂಕನು ಬರೆದದ್ದು. ರಾಜಾ ಹರಿಶ್ಚಂದ್ರನು ವಿಶ್ವಾಮಿತ್ರ ಮುನಿಗೆ ತನ್ನ ರಾಜ್ಯಾದಿಗಳನ್ನು ಕೊಟ್ಟು, ಪಟ್ಟಣ ಬಿಟ್ಟು ಹೋಗುವಾಗ ಅಯೋಧ್ಯಾನಗರದ ಜನರು ಗೋಳಿಡುವ ಸನ್ನಿವೇಶ.

***
ಇಂದು:
"ಕಸಾಯಿಖಾನೆಯಪಾಪಂ ಪ್ರಶಸ್ತಿರೂಪಿಂದ ಬಂದಿದೆ| ಕರುನಾಡಜನರ ದೌರ್ಭಾಗ್ಯ ಹೇಳತೀರದಾಗಿದೆ||"

"ಕಸಾ"ಯಿಖಾನೆ ಅಂದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೆ.ಎಸ್.ಭಗವಾನವೆಂಬ ಸಮಾಜಕಂಟಕ ಕ್ರಿಮಿಗೆ ಪ್ರಶಸ್ತಿ ಕೊಟ್ಟು ಕನ್ನಡದಲ್ಲಿ ಇದುವರೆಗಿನ ಶ್ರೇಷ್ಠ ಸಾಹಿತ್ಯಿಕ ಮೌಲ್ಯಗಳನ್ನೆಲ್ಲ ಕಸಾಯಿಖಾನೆಯಲ್ಲಿ ಕೊಚ್ಚಿಹಾಕಿರುವ, ಇಂಥ ಹೀನ ಕೃತ್ಯಗಳು ಕಣ್ಣೆದುರೇ ನಡೆಯುವುದನ್ನು ನೋಡಿ ಕನ್ನಡಿಗರು ಗೋಳಿಡಬೇಕಾಗಿ ಬಂದಿರುವ ಸಂದರ್ಭ. [ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ]


***
ದೌರ್ಭಾಗ್ಯ ಎಂದು ಹಳಿದುಕೊಳ್ಳುತ್ತ ಈ ದೊಂಬರಾಟವನ್ನು ನೋಡುತ್ತ ನಾವು ಕನ್ನಡಿಗರು ಸುಮ್ಮನಿರುವುದು ಸರಿಯಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅವಮಾನ ಮಾಡಿದ ವ್ಯಕ್ತಿಶಕ್ತಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕು. ಮೊದಲ ಹಂತವಾಗಿ ಈ 'ಸಹಿ ಆಂದೋಲನ'ದಲ್ಲಿ ಪಾಲ್ಗೊಳ್ಳಬೇಕು.

ಲಿಂಕ್ ಇಲ್ಲಿದೆ

***
ಪೂರಕ ಮಾಹಿತಿಗೆ:

2013ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಕೆ.ಎಸ್.ಭಗವಾನ್ ಮತ್ತು ಇತರ ನಾಲ್ಕು ಜನರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಅಭಿಮಾನಿಗಳಾದ ನಮಗೆ ಆಶ್ಚರ್ಯವೂ ಆಘಾತವೂ ಆಗಿದೆ.

ಕಳೆದ ಎರಡು-ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಸಾಹಿತ್ಯಿಕ-ವೈಚಾರಿಕ ವಲಯದಲ್ಲಿ ಆಗಿರುವ ಬೆಳವಣಿಗೆಗಳನ್ನು ನೋಡಿದ ಯಾರಿಗೇ ಆದರೂ ಈ ಆಘಾತಕ್ಕೆ ಕಾರಣ ಏನು ಎನ್ನುವುದು ತಿಳಿಯುತ್ತದೆ. ಕೆ.ಎಸ್.ಭಗವಾನ್ ಅನೇಕ ತಿಂಗಳಿಂದ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳ ಬಗ್ಗೆ ಯಾವ ಆಧಾರವೂ ಇಲ್ಲದ ಸುಳ್ಳುಗಳನ್ನೂ ಅಪವಾದಗಳನ್ನೂ ಜನರಿಗೆ ಅಸಹ್ಯವೆನ್ನಿಸುವ ಕೊಳಕು ಹೇಳಿಕೆಗಳನ್ನೂ ಕೊಟ್ಟಿರುವುದು ಸರ್ವವಿದಿತ.

ಇಡೀ ರಾಜ್ಯದಲ್ಲಿ ಈ ವ್ಯಕ್ತಿಯ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಒಟ್ಟಾಗಿರುವಾಗ, ಸಾಹಿತ್ಯ ಅಕಾಡೆಮಿ, ಗೌರವ ಪ್ರಶಸ್ತಿ ಕೊಡುವ ಮೂಲಕ ತನ್ನ ಮತ್ತು ಪ್ರಶಸ್ತಿಯ ಗೌರವ ಕಳೆದಿದೆ. ಈ ಪ್ರಶಸ್ತಿಯನ್ನು ಅಕಾಡೆಮಿ ಕೂಡಲೇ ಹಿಂಪಡೆಯಬೇಕು ಮತ್ತು ಪ್ರಶಸ್ತಿ ಪುರಸ್ಕೃತರ ಇಡೀ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕು. ಇದು ಕನ್ನಡಿಗನಾಗಿ ನನ್ನ ಹಕ್ಕೊತ್ತಾಯ.

ಭಗವಾನ್ ಹೇಳಿಕೆಗಳ ಕೆಲವು ಉದಾಹರಣೆಗಳು ಇಲ್ಲಿವೆ:
ಭಗವದ್ಗೀತೆ ಸುಡಲೆತ್ನಿಸಿದ ಪ್ರೊ. ಭಗವಾನ್
ಒಂದು ವಿಡಿಯೋ ತುಣುಕು

ಕನ್ನಡಿಗರ ಭಾವನೆಗೆ ಬೆಲೆ ಕೊಡದೆ, ಸಾಹಿತ್ಯ ಅಕಾಡೆಮಿ ತನ್ನ ಮೂಗಿನ ನೇರಕ್ಕೆ ನಡೆದರೆ, ಅದು ಕರ್ನಾಟಕಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ಹೆಮ್ಮೆಯ ವಿಷಯವೇ? ದಯವಿಟ್ಟು ಯೋಚಿಸಿ. ಸಹಿ ಸಂಗ್ರಹ ಆಂದೋಲನದಲ್ಲಿ ಭಾಗವಹಿಸಿ. ನಿಮಗೆ ಸಮ್ಮತಿಯಾದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

English summary
An online petition has been filed by Rohith Chakrathirtha against Karnataka Sahitya Academy award to atheist K.S. Bhagawan, an Indian rationalist, writer, translator and a retired professor. Srivathsa Joshi writes why this award should be withdrawn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X