ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಕಾಮಗಾರಿಯಿಂದ ವಿಶೇಷ ಚೇತನ ಮಕ್ಕಳ ಶಾಲೆಗೆ ಹಾನಿ: ಆನ್‌ಲೈನ್ ದೂರು

|
Google Oneindia Kannada News

ಬೆಂಗಳೂರು, ಏ.9: ಬಿಎಂಆರ್‌ಸಿಎಲ್ ಆರಂಭಿಸುತ್ತಿರುವ ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ವಿಶೇಷ ಚೇತನ ಮಕ್ಕಳ ಶಾಲೆಗೆ ಹಾನಿ ಉಂಟು ಮಾಡಲಿದೆ ಎಂದು ಆಲ್ ಸಸೇಂಟ್ ಚರ್ಚ್ ಆಡಳಿತ ಮಂಡಳಿ ಆನ್‌ಲೈನ್ ಸಹಿ ಸಂಗ್ರಹಕ್ಕೆ ಮುಂದಾಗಿದೆ.

ಬಿಎಂಆರ್‌ಸಿಎಲ್ ವೆಲ್ಲಾರ ಜಂಕ್ಷನ್‌ನಲ್ಲಿ ಎರಡನೇ ಹಂತದ ಗೊಟ್ಟಿಗೆರೆ-ನಾಗವಾರ ಮಾರ್ಗದ ಸುರಂಗ ಮಾರ್ಗವನ್ನು ನಿರ್ಮಿಸಲು ಹೊರಟಿದೆ. ಟೆಂಡರ್ ಕೂಡ ಮುಕ್ತಾಯವಾಗಿದೆ. ವಿಶೇಷ ಮಕ್ಕಳ ಶಾಲೆ ಕಾಂಪೌಂಡ್‌ನ್ನು ಬಿಎಂಆರ್‌ಸಿಎಲ್ ಧ್ವಂಸ ಮಾಡಲು ಹೊರಟಿದೆ ಎಂದು ಚರ್ಚ್ ಆಡಳಿತ ಮಂಡಳಿ ದೂರಿದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಅಷ್ಟೇ ಅಲ್ಲದೆ ಶಾಲೆಯ ಆವರಣದಲ್ಲಿದ್ದ ಮರಗಳನ್ನು ಕೂಡ ಕಡಿಯಲಾಗುತ್ತಿದೆ. ಶಾಲೆಯ ಆವರಣದಲ್ಲಿ 100 ಕ್ಕೂ ಅಧಿಕ ಮರಗಳಿವೆ. ಕೆಲವು 100 ವರ್ಷಕ್ಕಿಂತಲೂ ಹಳೆಯ ಮರಗಳಾಗಿವೆ. ಅಲ್ಲಿ ಸಣ್ಣ ಪುಟ್ಟ ಪ್ರಾಣಿಗಳು, ಪಕ್ಷಿಗಳು ವಾಸಿಸುತ್ತಿವೆ. ಅಲ್ಲಿ ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯುವುದರಿಂದ ಜೀವರಾಶಿಗಳಿಗೆ ಹಾನಿ ಉಂಟಾಗಲಿದೆ ಎನ್ನುವುದು ಚರ್ಚ್ ಆಡಳಿತ ಮಂಡಳಿ ವಾದವಾಗಿದೆ.

Online petition against BMRCL damaging school for specially abled

ಬಿಎಂಆರ್‌ಸಿಎಲ್ ಅರ್ಧ ಎಕರೆ ಜಾಗ ಗುತ್ತಿಗೆ ಪಡೆದು ಅದರಲ್ಲಿ ಮರಗಳನ್ನು ನೆಡುತ್ತೇವೆ ಎಂದು ಹೇಳಿದ್ದಾರೆ ಆದರೆ ಮೆಟ್ರೋ ನಿರ್ಮಾಣವಾದ ಬಳಿಕ ಖಂಡಿತವಾಗಿಯೂ ಅವರು ಮತ್ತೆ ಹಸಿರು ನಿರ್ಮಿಸುತ್ತಾರೆ ಎನ್ನುವ ನಮಗಿಲ್ಲ ಎಂದಿದ್ದಾರೆ. ಬಿಎಂಆರ್‌ಸಿಎಲ್ 3,232 ಚದರ ಮೀಟರ್ ಅಷ್ಟು ಜಾಗವನ್ನು ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ. ಜೊತೆಗೆ 4833 ಚದರಡಿಯಷ್ಟು ಜಾಗವನ್ನು ಗುತ್ತಿಗೆ ಮೂಲಕ ಪಡೆಯಲು ಮುಂದಾಗಿದೆ.

ಇಳಿಯುವ ಮೆಟ್ರೋ ನಿಲ್ದಾಣ ಬಿಟ್ಟು ಬೇರೆಡೆ ಇಳಿದ್ರೂ 50ರೂ ದಂಡ ಕಟ್ಬೇಕುಇಳಿಯುವ ಮೆಟ್ರೋ ನಿಲ್ದಾಣ ಬಿಟ್ಟು ಬೇರೆಡೆ ಇಳಿದ್ರೂ 50ರೂ ದಂಡ ಕಟ್ಬೇಕು

ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇತ್ ಮಾತನಾಡಿ, ಚರ್ಚ್ ಆಡಳಿತ ಮಂಡಳಿ ಜೊತೆಗೆ ಕುಳಿತು ಚರ್ಚೆ ನಡೆಸಲಾಗುತ್ತದೆ, ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಚರ್ಚ್ ಆಸುಪಾಸಿನಲ್ಲಿರುವ ಜಾಗವನ್ನು ಚರ್ಚ್ ಗೆ ನೀಡಲು ನಾವು ಸಿದ್ಧವಿದ್ದೇವೆ. ನಾವು ಹಣವನ್ನು ಭರಿಸುತ್ತೇವೆ ಎಂದು ತಿಳಿಸಿದ್ದಾರೆ.

English summary
Thousands of people have signed an online petition demanding that Bangalore Metro Rail Corporation Ltd. (BMRCL) not go ahead with temporarily acquiring the land of All Saints Church to build the Vellara Junction underground metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X