ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಅಲ್ಲಾಹ್ ನಲ್ಲಿ ಪ್ರಾರ್ಥಿಸಿ: ಸಿದ್ದು

By Mahesh
|
Google Oneindia Kannada News

ಬೆಂಗಳೂರು, ಏ.2: ಹಜ್ ಯಾತ್ರೆಗೆ ಈ ಬಾರಿ 21 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದಿಂದ 4,630 ಮಂದಿಗೆ ಮಾತ್ರ ಅವಕಾಶ ಒದಗಿಸಲಾಗಿದೆ.ಆನ್ ಲೈನ್ ಲಾಟರಿ ಮೂಲಕ ಹಜ್ ಯಾತ್ರಿಗಳ ಆಯ್ಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆನ್ ಲೈನ್ ಲಾಟರಿ (ಖುರ್ರ) ಮೂಲಕ ಹಜ್ ಯಾತ್ರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಎಲ್ಲರಿಗೂ ಯಾತ್ರೆಯ ಅವಕಾಶ ಸಿಗಲು ಸಾಧ್ಯವಿಲ್ಲ, ಆದರೆ ಅವಕಾಶ ದೊರೆಯದವರು ನಿರಾಶರಾಗುವುದು ಬೇಡ ಎಂದು ಹೇಳಿದರು. [ಹಜ್ ಯಾತ್ರಿಗಳಿಗೆ ಫ್ರೆಶ್ ಚಿಕನ್, ಮಟನ್ : ಬೇಗ್]

'ಯಾತ್ರಿಗಳು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವಂತೆ ತಿಳಿಸಿದ ಮುಖ್ಯಮಂತ್ರಿಯವರು, ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಎಲ್ಲಾ ಜಾತಿ-ಧರ್ಮದವರು ಒಂದೇ ತಾಯಿ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಾಣವಾಗಬೇಕು. ದೇವರ ಹೆಸರಿನಲ್ಲಿ ಸಾಮರಸ್ಯ ಕದಡುವುದನ್ನು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ. ಬೆಂಗಳೂರಿನಲ್ಲಿ ದೇಶದಲ್ಲೇ ಸುಂದರ ಸುಸಜ್ಜಿತ ಹಜ್‍ಘರ್ ನಿರ್ಮಾಣವಾಗುತ್ತಿದ್ದು, ಮುಂದಿನ ಯಾತ್ರೆ ಅಲ್ಲಿಂದಲೇ ಆರಂಭವಾಗಲಿದೆ' ಎಂದು ತಿಳಿಸಿದರು. [ಹಜ್ ಯಾತ್ರಿಕರನ್ನು ವಂಚಿಸಿದರೆ, ಕೇಸ್]

ಜುಲೈ ತಿಂಗಳಿನಲ್ಲಿ ಹಜ್ ಯಾತ್ರಿಗಳಿಗೆ ತರಬೇತಿ ಏರ್ಪಡಿಸಲಾಗುವುದು. ಇದರಲ್ಲಿ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳ, ನಡವಳಿಕೆಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಂಥ ವ್ಯವಸ್ಥೆ ಇದೆ. ಇದು ಸಚಿವ ರೋಷನ್ ಬೇಗ್ ಅವರ ಕಲ್ಪನೆಯ ಕೂಸು ಎಂದು ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮರ್‌ಗೂಬ್ ಅಹ್ಮದ್ ತಿಳಿಸಿದರು.

ಈ ವರ್ಷ ಹಜ್ ಯಾತ್ರೆ ಕುರಿತು

ಈ ವರ್ಷ ಹಜ್ ಯಾತ್ರೆ ಕುರಿತು

ಹಜ್ ಯಾತ್ರೆಗಾಗಿ ಈ ವರ್ಷ (2015) ಹಸುಳೆಗಳು ಸೇರಿದಂತೆ ಒಟ್ಟು 21,082 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ರಾಜ್ಯದ 4,630 ಜನರಿಗೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿದೆ.

ಇದರಲ್ಲಿ ಎಪ್ಪತ್ತು ವರ್ಷ ಮೀರಿದವರಿಗೆ 989 ಸೀಟುಗಳು ಹಾಗೂ ನಾಲ್ಕನೇ ಬಾರಿ ಅರ್ಜಿ ಸಲ್ಲಿಸಿದವರಿಗೆ 1061 ಸೀಟುಗಳನ್ನು ಮೀಸಲಿರಿಸಲಾಗಿದೆ. ಉಳಿದ 2050 ಸೀಟುಗಳಿಗೆ ಆನ್ ಲೈನ್ ಲಾಟರಿ ಮೂಲಕ ಯಾತ್ರಿಗಳನ್ನು ಆಯ್ಕೆ ಮಾಡಲಾಯಿತು.

ಹಜ್ ಯಾತ್ರೆಗೆ ಮೊದಲ ತಂಡ

ಹಜ್ ಯಾತ್ರೆಗೆ ಮೊದಲ ತಂಡ

ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಂಧ್ರ ಪ್ರದೇಶದ ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳ ಯಾತ್ರಿಗಳು ಪ್ರಯಾಣ ಬೆಳೆಸಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಮೂಲಕ ದಕ್ಷಿಣ ಕನ್ನಡ, ಕೊಡಗು, ಉಡುಪಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಯಾತ್ರಿಗಳು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.

ಹಜ್ ಯಾತ್ರೆಗೆ ಎರಡನೇ ತಂಡ

ಹಜ್ ಯಾತ್ರೆಗೆ ಎರಡನೇ ತಂಡ

ಗೋವಾ ವಿಮಾನ ನಿಲ್ದಾಣದ ಮೂಲಕ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಾತ್ರಿಗಳು ಪ್ರಯಾಣ ಕೈಗೊಳ್ಳಲಿದ್ದಾರೆ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದಿಂದ ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಯಾತ್ರಿಗಳು ಪ್ರಯಾಣ ಕೈಗೊಳ್ಳಲಿದ್ದಾರೆ.

ಹಜ್ ಸಚಿವ ಆರ್.ರೋಷನ್ ಬೇಗ್ ಮಾತನಾಡಿ

ಹಜ್ ಸಚಿವ ಆರ್.ರೋಷನ್ ಬೇಗ್ ಮಾತನಾಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ ಸೌಕರ್ಯಾಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ಮಾತನಾಡಿ, ಖಾಸಗಿಯವರಿಂದ ಯಾತ್ರಿಗಳ ಷೋಷಣೆ ತಡೆಯಲು ಉಮ್ರಾ ಯಾತ್ರೆಯನ್ನು ಸಹ ಹಜ್ ಸಮಿತಿಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಹಜ್‍ಘರ್ ಅತ್ಯಂತ ಸುಸಜ್ಜಿತವಾಗಿದ್ದು, ಹಜ್ ಯಾತ್ರೆಯ ಸಿದ್ಧತೆಯು ನಗರದಲ್ಲಿ ನಡೆಯುವಷ್ಟು ವ್ಯವಸ್ಥಿತವಾಗಿ ಎಲ್ಲಿಯೂ ನಡೆಯುವುದಿಲ್ಲ. ವಲಸೆ ಮತ್ತು ಕಸ್ಟಂ ತಪಾಸಣೆಗಳು ಹಜ್ ಶಿಬಿರದಲ್ಲಿಯೆ ನಡೆಯುವ ನಿದರ್ಶನ ಎಲ್ಲಿಯೂ ಇಲ್ಲ ಎಂದರು.

ಅಡುಗೆ ಮಾಡುವುದು ನಿಷೇಧ

ಅಡುಗೆ ಮಾಡುವುದು ನಿಷೇಧ

ಮದೀನಾದಲ್ಲಿ ಯಾತ್ರಿಗಳು ತಮ್ಮ ವಸತಿ ಗೃಹಗಳಲ್ಲಿ ಅಡುಗೆ ಮಾಡುವುದನ್ನು ಸೌದಿ ಅರೇಬಿಯಾದ ಸರ್ಕಾರ ನಿಷೇಧಿಸಿರುವ ಹಿನ್ನಲೆಯಲ್ಲಿ ಭಾರತೀಯ ಹಜ್ ಯಾತ್ರಿಗಳಿಗೆ ಭಾರತೀಯ ಆಹಾರವನ್ನೇ ಒದಗಿಸುವ ಬಗ್ಗೆ ವಸತಿ ಸೌಲಭ್ಯ ಒದಗಿಸುವ 6 ಸಂಸ್ಥೆಗಳೊಂದಿಗೆ ಭಾರತದ ಕೇಂದ್ರ ಹಜ್ ಸಮಿತಿಯ ನಿಯೋಗವು ಒಪ್ಪಂದ ಮಾಡಿಕೊಂಡಿದೆ

English summary
The process of selecting pilgrims for the annual Haj pilgrimage for 2014 through an online draw of lots, ‘Qurrah’, was initiated in Bengaluru on Thursday(Apr.2) by CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X