ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಹೊಸ ಯೋಜನೆ; ಬೀದಿಬದಿ ಆಹಾರವೂ ಆನ್‌ಲೈನ್ ಮೂಲಕ ಮನೆಗೆ!

|
Google Oneindia Kannada News

ಬೆಂಗಳೂರು, ಜುಲೈ07: ಸ್ಟಾರ್ ಹೋಟೆಲ್‌ಗಳು, ಹೈ-ಫೈ ರೆಸ್ಟೋರೆಂಟ್‌ ಗಳಿಗೆ ಮಾತ್ರ ಸೀಮಿತವಾಗಿದ್ದ ಆನ್‌ಲೈನ್ ಆಹಾರ ಮಾರಾಟಕ್ಕೆ ಬೀದಿ ಬದಿಯ ಆಹಾರ ಮಾರಾಟಗಾರರು ಪ್ರವೇಶಿಸಲು ಬಿಬಿಎಂಪಿ ಹೊಸ ಯೋಜನೆ ತರಲು ಮುಂದಾಗಿದೆ. ಇಷ್ಟು ದಿನ ಹೈ ಫೈ ಹೊಟೇಲ್ ಮೂಲಕ ಆನ್‌ಲೈನ್‌ನಲ್ಲಿ ಆಹಾರ ಡೆಲಿವರಿ ಪಡೆಯುತ್ತಿದ ಸಿಲಿಕಾನ್ ಸಿಟಿ ಜನರಿಗೆ ಬೀದಿ ಬದಿಯ ಆಹಾರ ಆನ್‌ಲೈನ್ ಮೂಲಕ ಸವಿಯಲು ಯೋಜನೆ ಜಾರಿಗೆ ತರುತ್ತಿದೆ.

ನಾಲಿಗೆಗೆ ಸವಿ ಸಿವಿಯದ ರುಚಿಕರವಾದ ತಿಂಡಿ ತಿನಿಸುಗಳು ಬೇಕೇಬೇಕು. ಜನರು ಅತ್ಯುತ್ತಮ ರುಚಿಕರವಾದ ಆಹಾರ ಅದೆಲ್ಲಿ ಸಿಕ್ಕರು ಸಹ ಅದೆಷ್ಟು ದೂರದಲ್ಲಿದ್ದರು ಸರಿ ಹೋಗಿ ತಿಂದು ಬರುತ್ತಾರೆ. ಇನ್ನು ಹಲವಾರು ಬೆಂಗಳೂರು ನಿವಾಸಿಗಳು ತಮಗೆ ಬೇಕಾದ ಹೋಟೆಲ್‌ನ ಊಟ ತಿಂಡಿಯನ್ನು ಆನ್‌ಲೈನ್ ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ. ಆ ಮೂಲಕ ಮನೆಯಲ್ಲೋ ಕಚೇರಿಯಲ್ಲೋ ಕುಳಿತು ಸವಿಯುತ್ತಾರೆ.

ಇನ್ನು ಬೆಂಗಳೂರು ಜನ ಹೋಟೆಲ್ ತಿಂಡಿ,ತಿನಿಸುಗಳಿಗೆ ಮಾತ್ರವಲ್ಲ ಬೀದಿ ಬದಿಯ ತಳ್ಳುವ ಗಾಡಿಯ ಊಟವನ್ನು ಇಷ್ಟಪಡುತ್ತಾರೆ. ಸ್ಟಾರ್ ಹೋಟಲ್‌ಗಿಂತಲೂ ಬೀದಿ ಬದಿಯ ಊಟವೇ ರುಚಿಕರ ಎಂದು ನಾಲಿಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಬೀದಿಬದಿ ಆಹಾರ ಆನ್‌ಲೈನ್ ಮೂಲಕ ತರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇದೀಗ ಈ ಅವಕಾಶವೂ ಒದಗಿ ಬರುತ್ತಿದೆ.

ಸ್ವಿಗ್ಗಿ, ಜೋಮೋಟೋ ಗಳಲ್ಲಿ ಬೀದಿ ಬದಿ ಅಹಾರಗಳು ಡಿಲಿವರಿ!

ಸ್ವಿಗ್ಗಿ, ಜೋಮೋಟೋ ಗಳಲ್ಲಿ ಬೀದಿ ಬದಿ ಅಹಾರಗಳು ಡಿಲಿವರಿ!

ಕೆಲವು ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ. ಜೊಮೋಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಸ್ವಿಗ್ಗಿ, ಜೊಮೋಟೋ ಸೇರಿ ಇನ್ನಿತರೆ ಆಹಾರ ಸರಬರಾಜು ಆ್ಯಪ್‌ಗಳು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯೋಜನೆ ಜಾರಿಗೆ ತರುತ್ತಿದೆ.

ಹೊಸ ಪ್ರಯೋಗಕ್ಕೆ ಬಿಬಿಎಂಪಿ ಸಿದ್ದತೆ

ಹೊಸ ಪ್ರಯೋಗಕ್ಕೆ ಬಿಬಿಎಂಪಿ ಸಿದ್ದತೆ

ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಬೀದಿಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಆಹಾರ ಪದಾರ್ಥಗಳನ್ನೂ ಇನ್ನೂ ಮುಂದೆ ಅನ್‌ಲೈನ್ ಆ್ಯಪ್ ಮುಖಾಂತರ ಮಾರಾಟ ಮಾಡಬಹುದಾಗಿದೆ, ಇನ್ನೂ ಕೇಂದ್ರ ಸರ್ಕಾರದ ಈ ಯೋಜನೆಯನ್ನೂ ಬಿಬಿಎಂಪಿ ಜಾರಿಗೆ ತರಲು ಮುಂದಾಗಿದೆ, ನಗರದಲ್ಲಿನ ಬೀದಿ ಬದಿಯ ಆಹಾರ ಮಾರಾಟಕ್ಕೆ ಉತ್ತೇಜನ ನೀಡಲು, ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಸಿದ್ದತೆ ನಡಿಸ್ತಿದೆ. ಇದಕ್ಕಾಗಿ ಬಿಬಿಎಂಪಿ ಆನ್‌ಲೈನ್ ಆ್ಯಪ್‌ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದೆ.

ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯ

ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯ

ನಗರದಲ್ಲಿ ಬೀದಿ ಬದಿಯ ಅಹಾರ ಮಾರಾಟಗಾರರ ಲೆಕ್ಕ ಮಾಡಿ ಇವರುಗಳಿಗೆ ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಚತಾ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಒಟ್ಟು 7 ದಿನಗಳ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯಿಸಲಿದೆ. ಆ ಹಣವನ್ನು ಕೇಂದ್ರ ಸರ್ಕಾರ ಯೋಜನೆ‌ ಅಡಿಯಲ್ಲಿ ನೀಡಲಾಗಿರುವ ಅನುದಾನದಿಂದ ಪಡೆಯಲಾಗುತ್ತದೆ ಅಂತ ಬಿಬಿಎಂಪಿ ವಿಶೇಷ ಆಯುಕ್ತ ಡಾ. ರಾಮ್ ಪ್ರಸಾತ್ ಮನೋಹರ್, ವಿಶೇಷ ಆಯುಕ್ತರು(ಆಸ್ತಿಗಳು) ತಿಳಿಸಿದರು.

ಆಗಸ್ಟ್ 15 ಕ್ಕೆ ಈ ಹೊಸ ಯೋಜನೆ ಜಾರಿ

ಆಗಸ್ಟ್ 15 ಕ್ಕೆ ಈ ಹೊಸ ಯೋಜನೆ ಜಾರಿ

ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನಗರದಲ್ಲಿ 40 ಸಾವಿರ ಬೀದಿಬದಿ ಆಹಾರ ಮಾರಾಟಗಾರರು ಇದರೆ, ಜತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ, ಬೀದಿ ಬದಿ ಆಹಾರ ಮಾರಾಟಗಾರರ ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇನ್ನೂ ಬೀದಿಬದಿ ವ್ಯಾಪಾರಕ್ಕೆ ಪಾಲಿಕೆಯಿಂದ ಎರಡು ಲಕ್ಷ ಸಾಲ ನೀಡಲು ಮುಂದಾಗಿದೆ, ಹೀಗೆ ಅಂದು ಕೊಂಡಂತೆ ಆದರೆ, ಇದೇ ಆಗಸ್ಟ್ 15ಕ್ಕೆ ಈ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಸಿದ್ದತೆ ಕೈಗೊಳ್ಳುತ್ತಿದೆ.

Recommended Video

Swiggy ಹುಡುಗ ಕುದುರೆ ಏರಿ ಬಂದವನು ಅಸಲಿಗೆ ಯಾರುಗೊತ | OneIndia Kannada

English summary
BBMP new scheme to train street food vendors from Food Safety and Standards Authority of India (FSSAI) to maintain clean while preparing food. Online delivery apps can deliver food from Street vendors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X