ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ನಿಲ್ದಾಣ: ಪಾರ್ಕಿಂಗ್, ಕೂಲಿ ಬುಕಿಂಗ್ ಇನ್ನು ಆನ್ ಲೈನ್

|
Google Oneindia Kannada News

ಬೆಂಗಳೂರು, ಜನವರಿ 13: ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಇಲಾಖೆ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು, ಪಾರ್ಕಿಂಗ್ ಕಾಯ್ದಿರಿಸುವಿಕೆ, ಕೂಲಿಗಳ ವ್ಯವಸ್ಥೆ, ವ್ಹೀಲ್ ಚೇರ್ ಎಲ್ಲವನ್ನೂ ಆನ್ ಲೈನ್ ನಲ್ಲಿ ಕಾಯ್ದಿರಿಸುವಂತಹ 'ಆರ್ ಟ್ರ್ಯಾಕ್ ' ಸೇವೆ ಶೀಘ್ರದಲ್ಲಿ ಜಾರಿಗೆ ಬರಲಿದೆ.

ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಮೊದಲ ಬಾರಿಗೆ ಆರ್ ಟ್ರ್ಯಾಕ್ ಎಂಬ ಆನ್ ಲೈನ್ ಬುಕಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ದೇಶದಲ್ಲೇ ಆರ್ ಟ್ರ್ಯಾಕ್ ವ್ಯವಸ್ಥೆ ಹೊಂದಿದ್ದ ಮೊದಲ ರೈಲ್ವೆ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮೊದಲ ಹಂತದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಮೈಸೂರು ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿಹುಬ್ಬಳ್ಳಿ- ಧಾರವಾಡ, ಮಂಗಳೂರು, ದಾವಣಗೆರೆ, ಬೆಳಗಾವಿ ತುಮಕೂರಿನಲ್ಲಿ ಆರ್ ಟ್ರ್ಯಾಕ್ ಯೋಜನೆ ಜಾರಿಗೆ ಬರಲಿದೆ.

Online booking for parking, wheel chair and coolies in Bengaluru Railway station

ರೈಲ್ವೆ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತದ್ದರು. ನೂರಾರು ವಾಹನಗಳು ಪಾರ್ಕಿಂಗ್ ಮಾಡುವುವುದರಿಂದ ಬಳಿಕ ಬಂದ ಸವಾರರಿಗೆ ವಾಹನ ನಿಲುಗಡೆ ಮಾಡಲು ಸ್ಥಳ ಇಲ್ಲದೆ, ಬಳಿಕ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಇದೆ.

ಇದರಿಂದ ಆ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದಲ್ಲದೆ, ಉತರ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ, ಪ್ರಯಾಣಿಕರು ತಮ್ಮ ಸರಕುಗಳನ್ನು ಹೊರಲು ಹಮಾಲಿಗಳು ಹಾಗೂ ವೃದ್ಧರಿಗೆ ವ್ಹೀಲ್ ಚೇರ್ ತರಲು ಹುಡುಕಾಟ ನಡೆಸುವಂತಹ ಪರಿಸ್ಥಿತಿ ಇದೆ.

ಅಂಗೈಯಲ್ಲಿ ಸಿಗಲಿದೆ ಮಾಹಿತಿ: ಆರ್ ಟ್ರ್ಯಾಕ್ ಯೋಜನೆಯಡಿ ಐ ಪಾರ್ಕಿಂಗ್ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತದೆ. ಸಾರ್ವಜನಿಕರು ಮೊದಲು ಈ ತಂತ್ರಾಂಶದ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅಲ್ಲಿ ಹೆಸರು ಮತ್ತು ಟಿಕೇಟ್ ನ ಪಿಎನ ಆರ್ ಸಂಖ್ಯೆ ನಮೂದಿಸಿ ನಿಲ್ದಾಣಗಳಲ್ಲಿ ಲಭ್ಯತೆ ಇರುವ ಪಾರ್ಕಿಂಗ್ ಜಾಗ ನೋಡಬೇಕು.

ಹಾಗೆಯೇ ಎಷ್ಟು ಸಮಯಕ್ಕೆ ಪಾರ್ಕಿಂಗ್ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ನಂತರ ಲಭ್ಯತೆ ಆಧರಿಸಿ ಮಾಹಿತಿ ಲಭ್ಯವಾಗಲಿದೆ. ನಂತರ ಲಭ್ಯತೆ ಆಧರಿಸಿ ಪಾರ್ಕಿಂಗ್ ಗೆ ಮುಂಗಡ ಜಾಗ ಕಾಯ್ದಿರಿಸಿಕೊಳ್ಳಬಹುದು.

English summary
Karnataka Railway police have implementing online booking system for wheel chair, parking and coolies in Bengaluru railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X