ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸ್ವಯಂ ಪ್ರಮಾಣೀಕರಣ ಇದ್ದರೆ ಸಾಕು

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಇನ್ನುಮುಂದೆ ವಸತಿ ಕಟ್ಟಡ ಅನುಮತಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ರಾಜ್ಯದ ಪಾಲಿಕೆ ಹಾಗೂ ಸ್ಥಳೀಯ ಕಟ್ಟಡ ನಿರ್ಮಾಣ ಅನುಮತಿ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣ ಅನುಮತಿ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಕರ್ನಾಟಕ ನಗರ ಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ-2017 ನಿಯಮ ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದ ಪ್ರಕಾರ ಬೈಲಾ ಅನುಷ್ಠಾನಕ್ಕೆ ಒಪ್ಪಿಸ ಯಾವುದೇ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,130 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ನೆಲಮಹಡಿ ಮತ್ತು ಎರಡು ಅಂತಸ್ತಿನ ಕಟ್ಟಡಗಳಿಗೆ ಸ್ವಯಂ ಪ್ರಮಾಣೀಕರಣವೇ ಸಾಕು.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಈವರೆಗೂ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡುವ ಅಧಿಕಾರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಗರ ಯೋಜನಾ ವಿಭಾಗದ ಅಧಿಕಾರಿಗಳ ಕೈಯಲ್ಲಿತ್ತು. ಸ್ವಯಂ ಪ್ರಮಾಣೀಕರಣ ಎಂದರೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಕೊಡುವ ಅಧಿಕಾರವು ಸರ್ಕಾರದಿಂದ ಮಾನ್ಯತೆ ಪಡೆದ ಆರ್ಕಿಟೆಕ್ಟ್ ಎಂಜಿನಿಯರ್ ಅಥವಾ ಕಟ್ಟಡ ವಿನ್ಯಾಸ ಸಲಹೆಗಾರರಿಗೇ ದೊರೆಯುತ್ತದೆ.

online application submission for building approval

ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ನಗರ ಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ-2017 ರ ಕರಡು ಪ್ರತಿಯನ್ನು ಜುಲೈ 11 ರಂದೇ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿತ್ತು.

 ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ಇದೀಗ ಅಂತಿಮ ಆದೇಶ ಹೊರಡಿಸಿದ್ದು, ಬೈಲಾ ಜಾರಿಯಿಂದಾಗಿ ಬೆಂಗಳೂರು ಸೇರಿ 11 ನಗರ ಪಾಲಿಕೆ ಹಾಗೂ 275 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 105 ಚ.ಮೀ ಗಿಂತ ಕಡಿಮೆ ಅಳತೆಯ ನಿವೇಶನದಲ್ಲಿ ನಿರ್ಮಿಸುವ ಅತಿ ಕಡಿಮೆ ರಿಸ್ಕ್ ಹೊಂದಿರುವ ನೆಲ ಅಂತಸ್ತು ಮತ್ತು ಗರಿಷ್ಠ ಎರಡು ಅಂತಸ್ತಿನ ವಸತಿ ಕಟ್ಟಡಗಳು ಹಾಗೂ 105 ಚ.ಮೀ ನಿಂದ 500 ಚ.ಮೀ ವರೆಗಿನ ವಿಸ್ತೀರ್ಣದ ಕಡಿಮ ರಿಸ್ಕ್ ಹೊಂದಿರುವ ನೆಲ ಮಹಡಿ ತರೆ ಕಟ್ಟಡ ಕಟ್ಟಲು ಅರ್ಜಿ ದಾರರು ಸ್ವಯಂ ಪ್ರಮಾಣೀಕರಿಸಿದರೆ ಸಾಕು.

English summary
State government launches new platform for building approval, Building owners can apply in online only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X