ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಈರುಳ್ಳಿ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದ್ದ ಈರುಳ್ಳಿ ದರ ಅಂತೂ ಕಡಿಮೆಯಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಜಿಗೆ 80 ರಿಂದ 90 ರುಪಾಯಿವರೆಗೆ ಮಾರಾಟವಾಗುತ್ತಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 50 ರಿಂದ 70 ರುಪಾಯಿಗೆ ಹಾಗೂ ಕಡಿಮೆ ಗುಣಮಟ್ಟದ ಈರುಳ್ಳಿ 30 ರಿಂದ 40 ರವರೆಗೆ ಮಾರಾಟವಾಗುತ್ತಿದೆ. ಯಶವಂತಪುರ ಕೃಷಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಸಗಟು ಬೆಲೆ ಕ್ವಿಂಟಾಲ್ ಗೆ 5500 ರಿಂದ 10 ಸಾವಿರ ರುಪಾಯಿವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ಆವಕದಲ್ಲಿ ಹೆಚ್ಚಳವಾಗಿರುವುದರಿಂದ ಬೆಲೆ ಕಡಿಮೆಯಾಗುತ್ತಿದೆ ಎಂದು ಮಾರುಕಟ್ಟೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿ

Onion Price Cut Down In Bengaluru Market

ಮಹಾರಾಷ್ಟ್ರ, ಗುಜರಾತ ಹಾಗೂ ರಾಜಸ್ತಾನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಳವಾಗಿದ್ದು ಹಾಗೆಯೇ ಕೇಂದ್ರ ಸರ್ಕಾರ ಟರ್ಕಿ ಮತ್ತು ಈಜಿಪ್ತ್‌ನಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಹೀಗಾಗಿ ಈರುಳ್ಳಿ ದರ ನಿಯಂತ್ರಣಕ್ಕೆ ಬಂದಿದ್ದು, ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವಾರ ಈರುಳ್ಳಿಯ ದರ ಗಣನೀಯ ಹೆಚ್ಚಳವಾಗಿ 180 ರುಪಾಯಿಯ ಗಡಿ ತಲುಪಿತ್ತು.

English summary
After one month later Onion Price Cut down In Bengaluru Market. per kg onion sale rate is rs 80 to 90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X