ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?

|
Google Oneindia Kannada News

ಬೆಂಗಳೂರು, ನವೆಂಬರ್ 21: ಈರುಳ್ಳಿ ಹೆಚ್ಚಿದರಲ್ಲ, ನೋಡಿದರೇ ಕಣ್ಣೀರು ಬರುವ ಪರಿಸ್ಥಿತಿಯನ್ನು ಈರುಳ್ಳಿ ಬೆಳೆಗಾರರು ಎದುರಿಸುತ್ತಿದ್ದಾರೆ.

ಭಾರತದ ಅತ್ಯಗತ್ಯ ತರಕಾರಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಈರುಳ್ಳಿಯನ್ನು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 1 ರೂ.ನಂತೆ ಮಾರಾಟಮಾಡಲಾಗುತ್ತಿದೆ!

ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು !ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು !

ವಾರದ ಹಿಂದೆ ಕ್ವಿಂಟಾಲ್ ಗೆ ಕೇವಲ 500 ರೂಪಾಯಿ ಇದ್ದ ಈರುಳ್ಳಿ ಬೆಲೆ, ನಂತರ 200 ರೂಪಾಯಿಗೆ ಕುಸಿದು, ಇದೀಗ ಪ್ರತಿ ಕ್ವಿಂಟಾಲ್ ಗೆ 100 ರೂ. ಆಗಿದೆ.

Onion is selling at Rs 1 per kg in Karnataka

ಈರುಳ್ಳಿ ಮಹಾತ್ಮೆ: ಹೋಟೆಲ್ ತಿಂಡಿಗಳ ಬೆಲೆ ಏರಿಕೆ?ಈರುಳ್ಳಿ ಮಹಾತ್ಮೆ: ಹೋಟೆಲ್ ತಿಂಡಿಗಳ ಬೆಲೆ ಏರಿಕೆ?

ಈರುಳ್ಳಿ ಫೂರೈಕೆ ಹೆಚ್ಚಾಗಿ, ಮಾರುಕಟ್ಟೆಗಳಲ್ಲಿ ಈರುಳ್ಳಿ ರಾಶಿ ರಾಶಿ ಬಿದ್ದಿರುವುದೇ ಬೆಲೆ ಇಳಿಕೆಯಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ನೆರೆಯ ತಮಿಳುನಾಡು ಮತ್ತು ಕೇರಳ ಮತ್ತಿತರ ರಾಜ್ಯಗಳಿಗೆ ಕರ್ನಾಟಕ ಈರುಳ್ಳಿಯನ್ನು ಪೂರೈಕೆ ಮಾಡುತ್ತಿತ್ತು. ಆದರೆ ಗಜ ಚಂಡಮಾರುತದ ಕಾರಣದಿಂದಾಗಿ ಈ ರಾಜ್ಯಗಳಿಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಈರುಳ್ಳಿಯನ್ನು ನೆರೆಯ ರಾಜ್ಯಗಳಿಗೆ ಸಾಗಿಸಲು ಸಾಧ್ಯವಾಗಿಲ್ಲ. ಆ ಕಾರಣದಿಂದ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದೆ.

English summary
Onion is selling at Rs 1 per kilogram in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X