ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಮುಂದಿನ ಕ್ಷಿಪಣಿಗೆ ಅಬ್ದುಲ್ ಕಲಾಂ ಹೆಸರು

By ಡಾ. ಅನಂತಕೃಷ್ಣನ್ ಎಂ
|
Google Oneindia Kannada News

ಬೆಂಗಳೂರು, ಆಗಸ್ಟ್, 06 : ಮುಂದಿನ ದಿನಗಳಲ್ಲಿ ಭಾರತದಿಂದ ಉಡಾವಣೆಯಾಗುವ ಬ್ರಹ್ಮಸ್ ನ ಹೈಪರ್ ಸಾನಿಕ್ ಕ್ಷಿಪಣಿಗೆ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡುವ ನಿರ್ಧಾರ ತೆಗೆದುಕೊಂಡಿದೆ.

ಬ್ರಹ್ಮಸ್ ನ ಮುಖ್ಯಸ್ಥರಾದ ಸುಧೀರ್ ಕುಮಾರ್ ಮಿಶ್ರಾ ಶನಿವಾರ ಈ ನಿರ್ಧಾರ ಪ್ರಕಟಿಸಿದ್ದು, ಈಗಾಗಲೇ ಹೈಪರ್ ಸಾನಿಕ್ ಕ್ಷಿಪಣಿ ಉಡಾವಣೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅತಿಶೀಘ್ರದಲ್ಲಿ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ ಎಂದು ತಿಳಿಸಿದರು.[ನಿಷ್ಕ್ರಿಯವಾಯ್ತು ಕಲಾಂರ ಸಾಮಾಜಿಕ ಜಾಲತಾಣ ಖಾತೆಗಳು]

OneIndia Special: Hypersonic BrahMos missile named after Dr Abdul Kalam

ಇದೀಗ ಉಡಾವಣೆಗೆ ತಯಾರಾಗುತ್ತಿರುವ ಭವಿಷ್ಯದ ಹೈಪರ್‌ಸಾನಿಕ್ ಕ್ಷಿಪಣಿ ಕುರಿತು ಕಲಾಂ ಬಹು ದೊಡ್ಡ ಕನಸನ್ನು ಇಟ್ಟುಕೊಂಡಿದ್ದರು. ಆ ಕಾರಣಕ್ಕಾಗಿ ಅವರ ಕನಸಿನ ಕೂಸನ್ನು ಅವರ ಹೆಸರಿನಲ್ಲಿಯೇ ಉಡಾವಣೆ ಮಾಡಲು ನಿರ್ಣಯಿಸಿದ್ದೇವೆ ಎಂದರು.

ಬ್ರಹ್ಮಸ್ ನ ಪ್ರತಿಯೊಂದು ಭಾಗಗಳ ಸೃಷ್ಟಿಕರ್ತರು ಗುರುಗಳಾದ ಕಲಾಂ. ಇದು ಅವರ ಯೋಚನೆ, ಯೋಜನೆಯ ಫಲ. ಇದರಲ್ಲಿ ಜೀವಂತಿಕೆ, ಆತ್ಮ ಇದೆ ಎಂದಾದರೆ ಅದು ಕಲಾಂ ಅವರದದ್ದು ಎಂದು ಬಹಳ ಭಾವಪೂರ್ಣವಾಗಿ ಕಲಾಂ ಅವರ ಸಾಮರ್ಥ್ಯವನ್ನು ಮಿಶ್ರಾ ಅವರು ಕೊಂಡಾಡಿದರು.

OneIndia Special: Hypersonic BrahMos missile named after Dr Abdul Kalam

ಸೂಪರ್ ಸಾನಿಕ್ ಕ್ಷಿಪಣಿಯ ತಯಾರಿಕೆಯಲ್ಲಿ ಹಲವಾರು ಯುವ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಾಕಷ್ಟು ಪರಿಶ್ರಮ ವಹಿಸುವರೆಂಬ ನಂಬಿಕೆ ಇದೆ ಹಾಗೂ ಇದು ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ ಎಂಬ ವಿಶ್ವಾಸ ಇದೆ ಎಂದು ತಮ್ಮ ಗುಂಪಿನ ಕಾರ್ಯವೈಖರಿ ಕುರಿತು ಭರವಸೆ ವ್ಯಕ್ತಪಡಿಸಿದರು.

English summary
India will name its next-generation hypersonic version of BrahMos supersonic cruise missile after former President Dr A P J Abdul Kalam."The DNA for BrahMos was created by Guru Kalam. It was his idea. The soul of BrahMos is definitely Guru Kalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X