ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ಇಂಡಿಯಾ ಫಲಶ್ರುತಿ: ಸುಧಾಕರ್‌ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕೊರೊನಾ ಸೋಂಕಿತರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಗುಡ್ ನ್ಯೂಸ್ ನೀಡಿದ್ದಾರೆ. RT-PCR ಮತ್ತು Rapid ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ಬಂದು ಕೊರೊನಾ ಸೋಂಕಿನ ಲಕ್ಷಣ ಕಾಣಿಸುತ್ತಿರುವವರಿಗೂ ಸರ್ಕಾರದಿಂದ ಬೆಡ್ ನೀಡಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ.

ಆರೋಗ್ಯ ಇಲಾಖೆಯ ಪರಿಷ್ಕೃತ ಸುತ್ತೋಲೆಯಿಂದ ಆರ್‌ಟಿ- ಪಿಸಿಆರ್ ಟೆಸ್ಟ್ ಅಥವಾ ಆಂಟಿಜನ್ ಟೆಸ್ಟ್ ನಲ್ಲಿ ಕೊರೊನಾ ನೆಗಟಿವ್ ವರದಿ ಬಂದರೂ ಚಿಕಿತ್ಸೆ ಪಡೆಯಬಹುದಾಗಿದೆ. ಎರಡೂ ಪರೀಕ್ಷೆ ಹೊರತು ಪಡಿಸಿ ಸಿಟಿ ಸ್ಕ್ಯಾನ್ ಅಥವಾ ವೈದ್ಯರು ಇದು ಕೊರೊನಾ ಲಕ್ಷಣ ಎಂದು ಪರಿಗಣಿಸಿದರೆ ಸರ್ಕಾರದ ವತಿಯಿಂದಲೇ ಐಸಿಯು ಬೆಡ್ ನೀಡುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಸರ್ಕಾರದ ವತಿಯಿಂದ ಸೌಲಭ್ಯ ಸಿಗುವಂತಾಗಿದೆ.

5 ರೂಪಾಯಿಗೆ ಸಿಟಿ ಸ್ಕ್ಯಾನ್, ವೈರಲ್ ವಿಡಿಯೋ ಸತ್ಯ ಬಹಿರಂಗ5 ರೂಪಾಯಿಗೆ ಸಿಟಿ ಸ್ಕ್ಯಾನ್, ವೈರಲ್ ವಿಡಿಯೋ ಸತ್ಯ ಬಹಿರಂಗ

ರೂಪಾಂತರಿ ಕೊರೊನಾ ಲಕ್ಷಣಗಳು ಮೊದಲ ಅಲೆಗಿಂತಲೂ ಭಿನ್ನವಾಗಿದೆ. ಆರ್‌ಟಿ- ಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ಅಂತ ವರದಿ ಬರುತ್ತಿದೆ. ಆದರೆ ಸಿಟಿ ಸ್ಕ್ಯಾನ್ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ರೂಪಾಂತರ ಕೊರೊನಾ ಲಕ್ಷಣಗಳು ಭಿನ್ನವಾಗಿದೆ. ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೊರೊನಾ ಲಕ್ಷಣ ಇರುವುದು ಬೆಳಕಿಗೆ ಬರುತ್ತಿದೆ ಎಂಬ ಭಯಾನಕ ಸತ್ಯವನ್ನು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮರ್ ಬಹಿರಂಗಪಡಿಸಿದ್ದರು. ರೂಪಾಂತರಿ ಕೊರೊನಾ ವೈರಸ್ ನ ಲಕ್ಷಣಗಳ ಸತ್ಯಾಂಶವನ್ನು ಮಾಧ್ಯಮದ ಮೂಲಕ ಬಹಿರಂಗ ಪಡಿಸಿದ್ದರು. ಡಾ. ಶಿವಕುಮಾರ್ ಅವರ ಹೇಳಿಕೆ ಆಧರಿಸಿ ಒನ್ಇಂಡಿಯಾ ಕನ್ನಡ ವಿಸ್ತೃತ ವರದಿ ಪ್ರಕಟಿಸಿತ್ತು.

OneIndia Kannada impact : State government changes Covid treatment rules for Corona Infected peoples

ಆರ್‌ಟಿ-ಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ಬಂದು, ಸಿಟಿ ಸ್ಕ್ಯಾನ್‌ನಲ್ಲಿ ಪಾಸಿಟಿವ್ ಬಂದು ಕೊರೊನಾ ಸೋಂಕಿತ ರೋಗಿಗಳು ಬೆಡ್ ಸಿಗದೇ ಪರದಾಡುತ್ತಿರುವ ಬಗ್ಗೆ ಒನ್ ಇಂಡಿಯಾ ಕನ್ನಡ ವರದಿ ಪ್ರಕಟಿಸಿತ್ತು. ಸರ್ಕಾರದ ಮೊದಲಿನ ನಿಯಮದ ಪ್ರಕಾರ ಆರ್‌ಟಿ-ಪಿಸಿಆರ್ ಅಥವಾ ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದರೆ ಮಾತ್ರ ಸರ್ಕಾರದ ಕೋಟಾದಡಿ ಕೊರೊನಾ ಸೋಂಕಿತರಿಗೆ ಬೆಡ್ ಸಿಗುತ್ತಿತ್ತು. ಇದರಿಂದ ಈ ಎರಡೂ ಪರೀಕ್ಷೆಗಳಲ್ಲಿ ನೆಗಟಿವ್ ಬಂದರೂ ಕೊರೊನಾ ಸೋಂಕಿನಿಂದ ಹಲವರು ಪರದಾಡುತ್ತಿರುವ ಬಗ್ಗೆ ಒನ್ಒಂಡಿಯಾ ಕನ್ನಡ ಬೆಳಕು ಚೆಲ್ಲಿತ್ತು. ಸಮಸ್ಯತೆಯ ವಾಸ್ತವವನ್ನು ಅರಿತ ಆರೋಗ್ಯ ಇಲಾಖೆ ಇದೀಗ ನಿಯಮಗಳನ್ನು ಬದಲಿಸಿ ಆದೇಶ ಹೊರಡಿಸಿದೆ.

ಕೊರೊನಾ ಸೋಂಕಿಗೆ ಭಾರತೀಯ ಮನೆ ವೈದ್ಯ ಪದ್ಧತಿಯಲ್ಲಿ ಮೆಡಿಸಿನ್ ಅಡಗಿದೆಕೊರೊನಾ ಸೋಂಕಿಗೆ ಭಾರತೀಯ ಮನೆ ವೈದ್ಯ ಪದ್ಧತಿಯಲ್ಲಿ ಮೆಡಿಸಿನ್ ಅಡಗಿದೆ

OneIndia Kannada impact : Karnataka Govt changes Covid treatment rules for Covid-19 Infected peoples

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಆದೇಶ ಹೊರಡಿಸಿದ್ದು, " ಕೊರೊನಾ ಸೋಂಕಿತರ ಆರೋಗ್ಯ ರಕ್ಷಣ ಮಾಡುವ ಸಂಬಂಧ ಕೆಲವರಿಗೆ ಆರ್‌ಟಿ-ಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬರುತ್ತಿದೆ. ಆದರೆ ಅಂತಹ ಬಹುತೇಕರಲ್ಲಿ ಕೊರೊನಾ ಲಕ್ಷಣ ಕಾಣಿಸುತ್ತಿವೆ. ಅಂಥವರ ಆರೋಗ್ಯ ಕಾಪಾಡುವ ಉದ್ದೇಶದಿಂದ ನೆಗಟಿವ್ ವರದಿ ಬಂದಿದ್ದರೂ, ಅಂತವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಅವರನ್ನು ದಾಖಲಾತಿ ಮಾಡಿಕೊಳ್ಳಬೇಕು. ಅವರಿಗೆ ಸರ್ಕಾರದ ವತಿಯಿಂದ ಬೆಡ್ ನೀಡಿ ಚಿಕಿತ್ಸೆ ಕೊಡಬಹುದು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ಹಿಂದೆ ನೀಡಿದ್ದ ಪ್ರೋಟೋಕಾಲ್ ಬಿಟ್ಟು, ಸೋಂಕಿತರಿಗೆ ಹೊಸ ನಂಬರ್ ನೀಡಿ ಚಿಕಿತ್ಸೆ ನೀಡಲೂ ಸೂಚಿಸಿದೆ ಎಂದು ತಿಳಿಸಿದ್ದಾರೆ.

OneIndia Kannada impact : State government changes Covid treatment rules for Corona Infected peoples

ಈ ಹಿಂದೆ ಕೊರೊನಾ ಸೋಂಕಿತರಿಗೆ ಆರ್‌ಟಿಪಿಸಿಆರ್ ಇಲ್ಲವೇ ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದರೆ ಮಾತ್ರ ಬಿಯು ನಂಬರ್ ಕ್ರಿಯೇಟ್ ಮಾಡಲಾಗುತ್ತಿತ್ತು. ಆ ನಂಬರ್ ಬಂದ ಬಳಿಕವಷ್ಟೇ ಸರ್ಕಾರದಿಂದ ಬೆಡ್ ನೀಡಲಾಗುತ್ತಿತ್ತು. ಇದೀಗ ಪರಿಷ್ಕೃತ ಆದೇಶದಿಂದ ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡಲೇ ಸರ್ಕಾರದ ಕೋಟಾದಡಿಯ ಬೆಡ್ ಪಡೆದು ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.

Recommended Video

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಸೋಂಕಿತ ಕೈದಿಗಳ ಆರೋಗ್ಯ ವಿಚಾರಿಸಿದ ಸಚಿವ ಬಸವರಾಜ್ ಬೊಮ್ಮಾಯಿ | Oneindia Kannada

English summary
The Department of Health has issued a new directive to hospitalize and treat those with corona symptoms know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X