ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲ್ಕ್ ಬೋರ್ಡ್ ಕಾರಿಡಾರ್ ಒಂದು ಭಾಗ ಸಂಚಾರಕ್ಕೆ ಮುಕ್ತ

|
Google Oneindia Kannada News

ಬೆಂಗಳೂರು, ಆಗಸ್ಟ್ 27 : ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರಂಭಿಸಲಾದ ಕಾರಿಡಾರ್ ಯೋಜನೆ ಕುಂಟುತ್ತಾ ಸಾಗಿದೆ. ಬಿಬಿಎಂಪಿ ರಸ್ತೆಯ ಒಂದು ಭಾಗವನ್ನು ಉದ್ಘಾಟನೆ ಮಾಡಲು ದಿನಾಂಕ ನಿಗದಿ ಮಾಡಿದೆ.

2 ರಸ್ತೆಗಳ ಕಾರಿಡಾರ್ ಯೋಜನೆ ಸಿದ್ಧವಾಗಿದ್ದು 2012ರಲ್ಲಿ. ಕೆರೆ ಅಭಿವೃದ್ಧಿ ಪ್ರಾಧಿಕಾರ 2014ರ ಮಾರ್ಚ್‌ನಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಿತು. 2016ರಲ್ಲಿ ಆರಂಭವಾದ ಕಾಮಗಾರಿ 2 ವರ್ಷದಲ್ಲಿ ಪೂರ್ಣಗೊಳ್ಳಬೇಕಿತ್ತು.

ಸಿಲ್ಕ್‌ ಬೋರ್ಡ್‌ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣಕ್ಕೆ ಮತ್ತೊಂದು ಟೆಂಡರ್‌ಸಿಲ್ಕ್‌ ಬೋರ್ಡ್‌ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣಕ್ಕೆ ಮತ್ತೊಂದು ಟೆಂಡರ್‌

2020ರ ಆಗಸ್ಟ್ ಬಂದರೂ ಒಂದು ಬದಿಯ ರಸ್ತೆ ಕಾಮಗಾರಿಯೇ ಕುಂಟುತ್ತಾ ಸಾಗಿದೆ. 4 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಒಂದು ಬದಿ ರಸ್ತೆಯನ್ನು ಜನರ ಸಂಚಾರಕ್ಕೆ ಆಗಸ್ಟ್ 29ರಂದು ಮುಕ್ತಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ಕೆಆರ್‌ಪುರಂ- ಸಿಲ್ಕ್ ಬೋರ್ಡ್ ಮೆಟ್ರೋಗೆ ಸಿಕ್ತು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಕೆಆರ್‌ಪುರಂ- ಸಿಲ್ಕ್ ಬೋರ್ಡ್ ಮೆಟ್ರೋಗೆ ಸಿಕ್ತು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ

One Side Road Of Corridor At Silk Board Junction Open On August 29

ಕಾರಿಡಾರ್‌ಗಾಗಿ ಮರ ಕಡಿಯುವುದು ಸೇರಿದಂತೆ ವಿವಿಧ ವಿರೋಧಗಳು ಎದುರಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಪೂರ್ಣಗೊಂಡರೆ ಬಿಟಿಎಂ, ಬನಶಂಕರಿ, ಜೆ. ಪಿ. ನಗರ ಮುಂತಾದ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಬೇಗ ತಲುಪಬಹುದಾಗಿದೆ.

ಸಿಲ್ಕ್ ಬೋರ್ಡ್‌ ಮೆಟ್ರೋಗೆ ಕೂಡಿ ಬರದ ಮುಹೂರ್ತ, ಟೆಂಡರ್ ಮತ್ತೆ ರದ್ದು ಸಿಲ್ಕ್ ಬೋರ್ಡ್‌ ಮೆಟ್ರೋಗೆ ಕೂಡಿ ಬರದ ಮುಹೂರ್ತ, ಟೆಂಡರ್ ಮತ್ತೆ ರದ್ದು

ಬಿಬಿಎಂಪಿ ಸಹಾಯಕ ಇಂಜಿನಿಯರ್ ರವೀಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. "ನವೆಂಬರ್ ವೇಳೆಗೆ ಕಾರಿಡಾರ್ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗ ಒಂದು ಕಡೆಯ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಿದ್ದೇವೆ. ಆಗಸ್ಟ್ 29ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ" ಎಂದು ಹೇಳಿದ್ದಾರೆ.

"ಒಂದು ಕಡೆಯ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾದರೆ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿನ ಶೇ 20ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಕಾರಿಡಾರ್ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸಂಚಾರಿ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ" ಎಂದು ಸಂಚಾರ ವಿಭಾಗದ ಸಹಾಯಕ ಆಯುಕ್ತ ತಿಮ್ಮಯ್ಯ ಸಿ. ಇ. ತಿಳಿಸಿದ್ದಾರೆ.

English summary
BBMP will open one side of road of 20 metre corridor at Silk Board Junction on August 29, 2020. Police said that by this 20 percent of traffic will reduced in junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X