ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್

|
Google Oneindia Kannada News

ಬೆಂಗಳೂರು,ಜನವರಿ 28: ಈ ವರ್ಷ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್ ಜಾರಿಗೆ ಬರಲಿದೆ.

ಈ ಕುರಿತು ರಾಜ್ಯಪಾಲ ವಿಆರ್ ವಾಲಾ ತಿಳಿಸಿದ್ದಾರೆ. ಈಗಾಗಲೇ ಉದ್ದೇಶಿಸಲಾಗಿರುವ ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.

ಔಟರ್ ರಿಂಗ್ ರೋಡ್ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ ಔಟರ್ ರಿಂಗ್ ರೋಡ್ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ

ರಾಜ್ಯ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮದ ವತಿಯಿಂದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು, ಅಲ್ಲದೆ, ಹಂತ 2 ಹಾಗೂ ಹಂತ 2ಎ ಕಾಮಗಾರಿಗಳಿಗಳು ಪ್ರಗತಿಯಲ್ಲಿದ್ದು, 2022ರೊಳಗೆ 75 ಕಿ.ಮೀಗಳಷ್ಟು ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

One Nation One Card For Namma Metro, BMTC This Year: Governor Vajubhai Vala

ಬಿಬಿಎಂಪಿ ಅಧಿನಿಯಮವನ್ನು ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ ರಚಿಸಲಾಗಿದೆ. ಅಲ್ಲದೆ ನಗರದ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಿಷನ್ 2022 ಪ್ರಾರಂಭಿಸಲಾಗಿದೆ.

ನಗರದಲ್ಲಿ 8015 ಕೋಟಿ ರೂ ವೆಚ್ಚದಲ್ಲಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.ಸಂಚಾರ ದಟ್ಟಣೆಯನ್ನು ನಿವಾರಿಸಲು 15,767 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಗಳಿಗೆ ಸಂಬಂಧಿಸಿದ ನವ ನಗರೋತ್ಥಾನ ಕಾರ್ಯಕ್ರಮದಲ್ಲಿ 1060 ಕೋಟಿಗೆ ಅನುಮೋದನೆ ನೀಡಲಾಗಿದೆ. ಹೊಸದಾಗಿ ಸೇರಿದ 110 ಗ್ರಾಮಗಳಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಲು 1000 ಕೋಟಿ ನೀಡಲಾಗಿದೆ ಎಂದು ರಾಜ್ಯಪಾಲರು ವಿವರಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಲಿದೆ.ಸಾರಿಗೆ ಇಲಾಖೆಯು 4 ಕೋಟಿ ವೆಚ್ಚದಲ್ಲಿ ಬೆಸ್ಕಾಂ ಮೂಲಕ ಬೆಂಗಳೂರು ನಗರದಲ್ಲಿ 126 ಎಸಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ.

English summary
The much-awaited ‘common mobility card’ for metro and bus users in Bengaluru will be rolled out this year, Karnataka Governor Vajubhai R Vala said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X