ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ ಮುಗಿಲು ಮುಟ್ಟಿದ ಹಿರಿಯ ನಾಗರಿಕ ಸಂಭ್ರಮ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 01 : ವಿಶ್ವ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ನವದೆಹಲಿಯ ಇಂಡಿಯಾ ಗೇಟ್ ಬಳಿ ಆಯೋಜನೆಯಾಗಿದ್ದ ಹೆಲ್ಪ್ ಏಜ್ ಇಂಡಿಯನ್ಸ್ ವಾಕ್ಥಾನ್ ನಲ್ಲಿ ಸಾಕಷ್ಟು ಮಂದಿ ಭಾಗವಹಿಸಿ ಸಂಭ್ರಮಪಟ್ಟರು.

ಉದಯಪುರದಲ್ಲಿ ಬಾಯಾರಿದ ಚಿರತೆಯೊಂದು ತನ್ನ ದಾಹ ತೀರಿಸಿಕೊಳ್ಳಲು ಹೋಗಿ ಬಿಂದಿಗೆಗೆ ಮುಖ ಹಾಕಿದೆ ಇದರ ಪರಿಣಾಮ ಚಿರತೆ ಕಾಡಿಗೆ ಹೋಗಲು ದಾರಿ ಕಾಣದೆ 4-5 ಗಂಟೆಗಳ ನಿಂತ ಸ್ಥಳದಲ್ಲಿಯೇ ಒದ್ದಾಡಬೇಕಾಗಿತ್ತು.

ಹಸುವಿನ ಗೋ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡ ಆರೋಪದಡಿ ದೆಹಲಿಯ ಬಿಸಾರ ಜಿಲ್ಲೆಯ ಮಹಮ್ಮದ್ ಇಖ್ಲಾಕ್ ಅವರ ಮೇಲೆ ಹಲ್ಲೆ ನಡೆಸಿದ ಉದ್ರಿಕ್ತ ಗುಂಪೊಂದು ಅವರನ್ನು ಕೊಂದು ಹಾಕಿದೆ. ಆತನ ಮಗನ ಮೇಲೆಯೂ ಹಲ್ಲೆ ನಡೆಸಿದೆ.[ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ: ಸಿದ್ದರಾಮಯ್ಯ]

ಅಕ್ಟೋಬರ್ 2 ರ ಗಾಂಧಿ ಜಯಂತಿಯ ಪ್ರಯುಕ್ತ ಜನರು, ಗಣ್ಯರು ಭಾರೀ ತಯಾರಿ ನಡೆಸುತ್ತಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆಕಾಶದಲ್ಲಿ ಮಾನವರು ಹಾರಾಟ ನಡೆಸಿ ದಾಖಲೆ ನಿರ್ಮಿಸಲು ಹರಸಾಹಸ ಮಾಡಿ ನೋಡುಗರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ.

ಮುಗ್ದಮಕ್ಕಳಂತಿರುವ ಹಿರಿಯರ ನಗು

ಮುಗ್ದಮಕ್ಕಳಂತಿರುವ ಹಿರಿಯರ ನಗು

ವಿಶ್ವ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ನವದೆಹಲಿಯ ಇಂಡಿಯಾ ಗೇಟ್ ಬಳಿ ಆಯೋಜನೆಯಾಗಿದ್ದ ಹೆಲ್ಪ್ ಏಜ್ ಇಂಡಿಯನ್ಸ್ ವಾಕ್ಥಾನ್ ನಲ್ಲಿ ಸಾಕಷ್ಟು ಹಿರಿಯರು ಪಾಲ್ಗೊಂಡು ಸಂಭ್ರಮಿಸಿದ್ದು ಹೀಗೆ

ಆಕಾಶದಲ್ಲೊಂದು ಮಾನವರ ಹೂವು

ಆಕಾಶದಲ್ಲೊಂದು ಮಾನವರ ಹೂವು

ಹಲವಾರು ಮಂದಿ ಪೆರಿಸ್ ನಲ್ಲಿ ಆಕಾಶ ಹಾರಾಟ ನಡೆಸಿದ್ದು, ಸುಮಾರು 202 ಮಂದಿ ದಾಖಲೆ ನಿರ್ಮಿಸುವ ಸಲುವಾಗಿ 1,000 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಮೂಲಕ ನೋಡುಗರನ್ನು ದಂಗು ಬಡಿಸಿದರು.

ಪುಟಾಣಿ ಗಾಂಧಿಗಳು

ಪುಟಾಣಿ ಗಾಂಧಿಗಳು

ಭೋಪಾಲ್ ಅಕ್ಟೋಬರ್ ಎರಡರಂದು ಆಚರಿಸುವ ಮಹಾತ್ಮ ಗಾಂಧಿ ಜಯಂತಿಯ ಪ್ರಯುಕ್ತ ಭೋಪಾಲ್ ನ ಫೌಂಡೇಶನ್ ಶಾಲೆಯಲ್ಲಿ ಹಿಂದಿನ ದಿನ ಹಮ್ಮಿಕೊಂಡಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಗಾಂಧಿ ವೇಷ ಧರಿಸಿ ಗಾಂಧಿ ಫೋಟೋ ಹಿಡಿದು ಗಾಂಧಿ ಫೋಟೋದ ಮುಂದೆ ನಿಂತದ್ದು ಹೀಗೆ.[ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!]

ಗಾಂಧಿ ಜಯಂತಿ ಸಿದ್ಧತೆ ಭಾರೀ ಜೋರು

ಗಾಂಧಿ ಜಯಂತಿ ಸಿದ್ಧತೆ ಭಾರೀ ಜೋರು

ಭುವನೇಶ್ವರದಲ್ಲಿ ಅಕ್ಟೋಬರ್ 2ರಂದು ನಡೆಯುವ ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ಪ್ರತಿಮೆಯ ಸ್ಚಚ್ಛತೆಯಲ್ಲಿ ತನ್ಮಯನಾಗಿದ್ದಾನೆ ಪೌರ ಕಾರ್ಮಿಕ

ನಾಳೆ ಬಾಪೂಜಿ ಹುಟ್ಟುಹಬ್ಬ

ನಾಳೆ ಬಾಪೂಜಿ ಹುಟ್ಟುಹಬ್ಬ

ಅಕ್ಟೋಬರ್ 2ರ ಶುಕ್ರವಾರದಂದು ದೇಶಾದ್ಯಂತ ಗಾಂಧಿ ಜಯಂತಿ ಆಚರಣೆಗೊಳ್ಳಲಿದೆ. ಈ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಾಪೂಜಿ ಸ್ಮಾರಕ ಸಮಿತಿಯ ಅಧ್ಯಕ್ಷರಾದ ಜಟಿನ್ ಚಂದ್ರ ದಾಸ್ ಅವರು ಕೊಲ್ಕತ್ತಾದ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಗಾಂಧಿ ಪ್ರತಿಮೆಯ ಸ್ವಚ್ಛತಾ ಕಾರ್ಯದಲ್ಲಿ ಮಗ್ನನಾಗಿರುವುದು.[ಅಯೋಧ್ಯೆ ಕಾಮನ್ ವೆಲ್ತ್ ಗಾಂಧಿ ಬಂಧ!]

ಹಿಮದ ನಡುವೆ ಮೂಡಿದ ಸೂರ್ಯ

ಹಿಮದ ನಡುವೆ ಮೂಡಿದ ಸೂರ್ಯ

ಕೆಲವು ನಿಮಿಷಗಳ ಕಾಲ ಸಿಟ್ಜರ್ಲೆಂಡಿನ ಬಳಿಯ ಹಿಮ ಪರ್ವತದ ಬಳಿಯ ಎಮ್ಸ್ ಮರಗಳ ನಡುವೆ, ಸೂರ್ಯನ ಒಂದು ಸುಂದರ ಪ್ರಖರತೆ ಕಂಡು ಬಂದಿತು. ಈ ಸೌಂದರ್ಯ ನಿಮಗೆ ಕೇವಲ ವರ್ಷಕ್ಕೆ ಎರಡು ಬಾರಿ ಮಾತ್ರ ಗೋಚರಿಸಲಿದೆ. [2015ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ]

ಚಿರತೆಯೂ ಹೆಲ್ಮೆಟ್ ಧರಿಸಿತ್ತು

ಚಿರತೆಯೂ ಹೆಲ್ಮೆಟ್ ಧರಿಸಿತ್ತು

ಉದಯ್ ಪುರದ ಒಂದು ಚಿರತೆಗೆ ಬಾಯಾರಿಕೆಯಾಗಿತ್ತು. ಎಲ್ಲೂ ನೀರು ಸಿಗದ ಪರಿಣಾಮ ಉದಯ್ ಪುರದ ಒಂದು ಹಳ್ಳಿಗೆ ಬಂದು ನೀರು ಕುಡಿಯಲು ಬಾಯಿ ಹಾಕಿದಾಗ ಇಡೀ ಮುಖ ಬಿಂದಿಗೆಯೊಳಗೆ ಸಿಕ್ಕಿಸಿಕೊಂಡು ಫಜೀತಿಗೆ ಒಳಗಾಯಿತು.

ಮುಗಿಲು ಮುಟ್ಟಿದ ಸಂಬಂಧಿಕರ ರೋಧನ

ಮುಗಿಲು ಮುಟ್ಟಿದ ಸಂಬಂಧಿಕರ ರೋಧನ

ನವದೆಹಲಿಯ ಬಿಸಾರ್ ಜಿಲ್ಲೆಯ ಮೊಹಮ್ಮದ್ ಇಖ್ಲಾಕ್ ತನ್ನ ಮನೆಯಲ್ಲಿ ದನದ ಮಾಂಸವನ್ನು ರಹಸ್ಯವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಎಂದು ಸಿಟ್ಟಿಗೆದ್ದ ಉದ್ರಿಕ್ತರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಆತನನ್ನು ಕಳೆದುಕೊಂಡ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತ್ತು.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]

ನಾಳೆಯಿಂದ ವಸ್ತುಗಳು ದುಬಾರಿಯಾಗಬಹುದು!

ನಾಳೆಯಿಂದ ವಸ್ತುಗಳು ದುಬಾರಿಯಾಗಬಹುದು!

ವಾರ್ಷಿಕ ಟೋಲ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು, ದೇಶದಲ್ಲಿ 90 ಲಕ್ಷ ಹಾಗೂ ಕರ್ನಾಟಕದಲ್ಲಿ 9 ಲಕ್ಷ ಸರಕು ಸಾಗಣೆ ವಾಹನಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲಾರಿ ಮಾಲೀಕರ ಏಜೆಂಟರ ಬೇಡಿಕೆಗಳಿಗೆ ಯಾವುದೇ ಮಾನ್ಯತೆ ನೀಡದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ

English summary
One man is death in Delhi for allegedly consuming beef at home.Freedom fighter and President of Bapuji Smarak Samity Jatin Chandra Das cleans a statue of Mahatma Gandhi ahead of his birth anniversary at Gandhi Bhavan in Kolkata etc. this is Thursday News.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X