ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೇತನ್ ಭಗತ್ ಮೇಲೆ ಕತೆ ಕದ್ದ ಆರೋಪ, ಬೆಂಗ್ಳೂರಿನಲ್ಲಿ ಕೇಸ್

ಬೆಂಗಳೂರು ಮೂಲದ ಲೇಖಕಿ ಅನ್ವಿತಾ ಭಾಜಪೇಯಿ ಎಂಬುವರು ಚೇತನ್ ಭಗತ್ ವಿರುದ್ಧ ಕೋರ್ಟಿನಲ್ಲಿ ಕೇಸ್ ಹಾಕಿದ್ದು, 'ಒನ್ ಇಂಡಿಯನ್ ಗರ್ಲ್' ಕೃತಿ ಮಾರಾಟ ಸ್ಥಗಿತಕ್ಕೆ ಆದೇಶಿಸುವಂತೆ ಅರ್ಜಿ ಹಾಕಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್, 25: ಜನಪ್ರಿಯ ಲೇಖಕ, ಕಾದಂಬರಿಕಾರ ಚೇತನ್ ಭಗತ್ ಅವರ ಮೇಲೆ ಮತ್ತೊಮ್ಮೆ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ. ಬೆಂಗಳೂರು ಮೂಲದ ಲೇಖಕಿ ಅನ್ವಿತಾ ಭಾಜಪೇಯಿ ಎಂಬುವರು ಚೇತನ್ ಭಗತ್ ವಿರುದ್ಧ ಕೋರ್ಟಿನಲ್ಲಿ ಕೇಸ್ ಹಾಕಿದ್ದು, 'ಒನ್ ಇಂಡಿಯನ್ ಗರ್ಲ್' ಕೃತಿ ಮಾರಾಟ ಸ್ಥಗಿತಕ್ಕೆ ಆದೇಶಿಸುವಂತೆ ಅರ್ಜಿ ಹಾಕಿದ್ದಾರೆ.

ಅನ್ವಿತಾ ಬಾಜಪೇಯಿ ಹಾಗೂ ಚೇತನ್ ಭಗತ್ ಇಬ್ಬರು ಫೇಸ್ ಬುಕ್ ಮೂಲಕ ಕೂಡಾ ತಮ್ಮ ವಾದ ಪ್ರತಿವಾದ ಮಂಡಿಸಿದ್ದಾರೆ. ಈ ಹಿಂದೆ ಚೇತನ್ ಭಗತ್ ಅವರ ಹಾಫ್ ಗರ್ಲ್ ಫ್ರೆಂಡ್ ಕೃತಿ ಕೂಡಾ ಕೃತಿ ಚೌರ್ಯ ಆರೋಪ ಎದುರಿಸಿತ್ತು. ಪಾಟ್ನ ಮೂಲಕ ಲೇಖಕರೊಬ್ಬರು, ಚೇತನ್ ವಿರುದ್ಧ ಕತೆ ಕದ್ದ ಆರೋಪ ಹೊರೆಸಿದ್ದರು.

One Indian Girl Plagiarism: Bengaluru-Based Author files case against Chetan Bhagat

2014ರಲ್ಲಿ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಬಂದಿದ್ದ ಚೇತನ್ ಭಗತ್ ಅವರಿಗೆ 'ಡ್ರಾಯಿಂಗ್ ಪ್ಯಾರಲಲ್ಸ್' ಪ್ರತಿ ನೀಡಿ ಆ ಕಥೆ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವಂತೆ ಕೋರಿದ್ದೆ. 2016 ಅಕ್ಟೋಬರ್ ತಿಂಗಳಲ್ಲಿ ಒನ್ ಇಂಡಿಯನ್ ಗರ್ಲ್ ಪ್ರಕಟವಾಯಿತು. ಅದರ ಕಥೆ ನೋಡಿ ಆಘಾತವಾಯಿತು.

ಪುಸ್ತಕದ ಮಾರಾಟ ನಿಲ್ಲಿಸಿ, 5 ಲಕ್ಷ ಪರಿಹಾರ ನೀಡಬೇಕು ಎಂದು ಚೇತನ್ ಅವರಿಗೆ ವಕೀಲರ ಮೂಲಕ ನೋಟಿಸ್ ಕಳಿಸಲಾಗಿದೆ. ಆದರೆ, ನೋಟಿಸ್ ಗೆ ಉತ್ತರ ಸಿಗದ ಕಾರಣ ಸಿವಿಎಲ್ ಕೋರ್ಟ್ ಮೆಟ್ಟಿಲೇರಿದ್ದೇನೆ. ಆರು ತಿಂಗಳುಗಳ ಕಾಲ ಪುಸ್ತಕ ಮಾರಾಟ ನಿಲ್ಲಿಸಲಾಗಿತ್ತು. ಆದರೆ, ಈಗ ಮತ್ತೆ ಪುಸ್ತಕ ಮಾರಾಟವಾಗುತ್ತಿದೆ ಎಂದು ಅನ್ವಿತಾ ಹೇಳಿಕೊಂಡಿದ್ದಾರೆ.

ಆದರೆ, ಅನ್ವಿತಾ ಅವರ ಆರೋಪಗಳನ್ನು ಅಲ್ಲಗೆಳೆದಿರುವ ಚೇತನ್, ಅನ್ವಿತಾ ಅವರ ಯಾವುದೇ ಪುಸ್ತಕವನ್ನು ಓದಿಲ್ಲ. ಒನ್ ಇಂಡಿಯನ್ ಗರ್ಲ್ ನನ್ನ ಸ್ವಂತ ಕೃತಿ, ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.

ಈ ನಡುವೆ ಪ್ರಕಾಶಕ ಸಂಸ್ಥೆ ರೂಪ ಪಬ್ಲಿಷರ್ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿಲ್ಲ. ಚೇತನ್ ಅವರ ಮತ್ತೊಂದು ಕೃತಿ 'ಫೈವ್ ಪಾಯಿಂಟ್ ಸಮ್ ಒನ್' ದೆಹಲಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗುತ್ತಿರುವ ಸುದ್ದಿ ಕೂಡಾ ಬಂದಿದೆ.

English summary
One Indian Girl author Chetan Bhagat has been accused of plagiarism by a Bengaluru-based author Anvita Bajpai. Bhagat has denied the claims made by Anvita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X