ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಕಾ ಸ್ಫೋಟ: 9ರಲ್ಲಿ ಒಬ್ಬರ ಮೃತದೇಹ ಇಂದು ಬೆಂಗಳೂರಿಗೆ ತರುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಏ.23: ಶ್ರೀಲಂಕಾದಲ್ಲಿ ಭಾನುವಾರ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕರ್ನಾಟಕದ 9 ಮಂದಿಯರಲ್ಲಿ ಓರ್ವರ ಮೃತದೇಹವನ್ನು ಇಂದು ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.

ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಡೆದ ಬಾಂಬ್​ ಸ್ಫೋಟದಲ್ಲಿ 9 ಮಂದಿ ಕನ್ನಡಿಗರು ಮೃತಪಟ್ಟಿರುವುದು ದೃಢವಾಗಿದೆ. ಅವರ ಕೊಲಂಬೋದಿಂದ ಬೆಂಗಳೂರಿಗೆ ತರಲು ರಾಜ್ಯದಿಂದ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಪರಿಷತ್​ ಸದಸ್ಯ ಈ.ಕೃಷ್ಣಪ್ಪ ನೇತೃತ್ವದ ನಿಯೋಗ ಕೊಲಂಬೋಗೆ ತೆರಳಿದೆ. ಆದರೆ, ಮೃತದೇಹಗಳನ್ನು ರಾಜ್ಯಕ್ಕೆ ತರಲು ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ : ನೋಡೆಲ್ ಅಧಿಕಾರಿ ನೇಮಕಶ್ರೀಲಂಕಾ ಸರಣಿ ಬಾಂಬ್ ಸ್ಫೋಟ : ನೋಡೆಲ್ ಅಧಿಕಾರಿ ನೇಮಕ

ಮೃತರು ಕೊಲಂಬೊಗೆ ಬಂದ ಉದ್ದೇಶದ ಬಗ್ಗೆ ಸ್ಥಳೀಯ ಪೊಲೀಸರು ಈ.ಕೃಷ್ಣಪ್ಪ ತಂಡವನ್ನು ಕೌನ್ಸಿಲಿಂಗ್ ಮಾಡಲಿದ್ದಾರೆ. ಕಾನೂನು ಪ್ರಕ್ರಿಯೆಗಳು ಇನ್ನೂ ಶುರುವಾಗದ ಕಾರಣ, ಮೃತದೇಹಗಳು ಇಂದು ಬೆಂಗಳೂರಿಗೆ ತಲುಪುದು ಅನುಮಾನವಾಗಿದೆ.

One dead body will come to Bengaluru From Sri lanka Today

ಶ್ರೀಲಂಕಾ ಬಾಂಬ್ ಸ್ಫೋಟ: ಬಾಂಗ್ಲಾ ಪ್ರಧಾನಿ ಮೊಮ್ಮಗ ವಿಧಿವಶಶ್ರೀಲಂಕಾ ಬಾಂಬ್ ಸ್ಫೋಟ: ಬಾಂಗ್ಲಾ ಪ್ರಧಾನಿ ಮೊಮ್ಮಗ ವಿಧಿವಶ

ಸದ್ಯ ಮೃತದೇಹಗಳ ಗುರುತು ಪತ್ತೆ ಹಚ್ಚಲು ಆಧಿಕಾರಿಗಳು ಮುಂದಾಗಿದ್ದಾರೆ. ಇನ್ನು ನಾಗರಾಜ ರೆಡ್ಡಿ ಮೃತದೇಹ ಸಂಜೆ ವೇಳೆಗೆ ಬೆಂಗಳೂರು ತಲುಪು ಸಾಧ್ಯತೆ ಇದೆ. ನಾಗರಾಜರೆಡ್ಡಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹ ಸಾಗಿಸಲು ಸ್ಥಳೀಯ ಆಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಇಂದು ಸಂಜೆ 6.45ರ ವೇಳೆಗೆ ನಾಗರಾಜ ರೆಡ್ಡಿ ಮೃತದೇಹ ಬೆಂಗಳೂರು ತಲುಪುವ ಸಾಧ್ಯತೆ ಇದೆ. ಇದುವರೆಗೂ 310ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

English summary
One dead bodu will come to Bengaluru From Sri lanka Today, Eight deadbodies will not came soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X