ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.29ರಂದು ''ಒಂದ್ ಸೆಕೆಂಡ್'' ರಂಗಶಂಕರದಲ್ಲಿ ಮತ್ತೆ ಪ್ರದರ್ಶನ

|
Google Oneindia Kannada News

ಬೆಂಗಳೂರು, ಜನವರಿ 28: ಬೆಂಗಳೂರಿನ ಜನಪ್ರಿಯವಾದ ವಿಮೂವ್ ಥಿಯೇಟರ್ ನಾಟಕ ಸಂಸ್ಥೆಯು ಕಳೆದ ಹದಿಮೂರು ವರ್ಷಗಳಿಂದ ದೇಶದಾದ್ಯಂತ ತನ್ನ ನಾಟಕಗಳ ಪ್ರತಿ ವರ್ಷ ಹಾಗೂ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿ ಮೂವ್ ತಂಡ ತನ್ನ 16ನೇ ರಂಗ ಪ್ರಯೋಗ ''ಒಂದ್ ಸೆಕೆಂಡ್'' ಎಂಬ ಹೊಸ ಕನ್ನಡ ನಾಟಕವನ್ನು ರಂಗದ ಮೇಲೆ ತಂದಿದೆ. ಜನವರಿ 29ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಒಂದ್ ಸೆಕೆಂಡ್ ನಾಟಕವನ್ನು, ಗೋಪಾಲಕೃಷ್ಣಪೆೈ ಅನುವಾದಿಸಿರುವ ಆಧುನಿಕ ಚೀನಿ ಕಥೆಗಳು ಪುಸ್ತಕದಿಂದ ರಂಗಕ್ಕೆ ಅಳವಡಿಸಿಕೊಳ್ಳಲಾಗಿದೆ.

ಈ ನಾಟಕ ಒಬ್ಬ ವ್ಯಕಿಯು ವಾಸ್ತವದ ಹುಡುಕಾಟದ ಕಥೆ, ತನ್ನ ಜೀವನದಲ್ಲಿ ನಡೆದು ಹೋಗಿರುವ ಅತಿ ದೊಡ್ಡ ಸನ್ನಿವೇಶವನ್ನು ಮೆಲುಕು ಹಾಕುತ್ತಾ ಆ ಸನ್ನಿವೇಶ ಹೆೇಗೆ ಅವನ ಜೀವನದ ದಿಕ್ಕನ್ನು ಬದಲಾಯಿಸಿತು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸುತ್ತಿರುವಾಗ ಅವನಿಗೆ ಅರಿವಾಗುವ ಸತ್ಯವೇ ಅವನು ಹುಡುಕುತ್ತಿದ್ದ ವಾಸ್ತವವೆೇ? ಅನ್ನೋ ಪ್ರಶ್ನೆಯಿಂದ ನಾಟಕ ಮಕ್ತಾಯವಾಗುತ್ತದೆ.

Ond Second by WeMove Theatre Play Ranga Shankara

ನಾಟಕ: ಒಂದ್ ನಾಟಕ
ಸಮಯ: 60 ನಿಮಿಷ.
ರಂಗದ ಮೇಲೆ: ಅನಿರುಧ್ ಮಹೇಶ್
ಸಂಗೀತ: ಅಭಿಷೇಕ್ ನರೈನ್
ಬೆಳಕು: ಮಂಜು ನಾರಾಯಣ್ ರಚನೆ,
ನಿರ್ದೇಶನ: ಅಭಿಷೇಕ್ ಅಯ್ಯಂಗಾರ್
ಸ್ಥಳ: ರಂಗ ಶಂಕರ, ಜೆಪಿ ನಗರ, ಬೆಂಗಳೂರು
ದಿನಾಂಕ: ಜನವರಿ 29, ಸಂಜೆ 7.30

ಒಬ್ಬ ಮನುಷ್ಯನ ಒಳ ಯೋಚನೆಗಳನ್ನು ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಹೆೇಗೆ ಜೀವನದ ಕೆಲವು ಮುಖ್ಯ ಸನ್ನಿವೇಶಗಳು ಒಂದು ಜೀವನವನ್ನೇ ಬದಲಾಯಿಸುವುದು ಅನ್ನೋದೆ ನಾಟಕದ ತಿರುಳು! ನಾಟಕದ ಪಾತ್ರಧಾರಿ ತನ್ನ ಕಥೆಯನ್ನು ವ್ಯಕ್ತಪಡಿಸುತ್ತ, ತನ್ನಲ್ಲಿ ಪ್ರತಿಯೊಬ್ಬ ಪ್ರೇಕ್ಷಕನನ್ನು ಬಿಂಬಿಸುವ ತಂತ್ರವನ್ನು ನಾಟಕದಲ್ಲಿ ಅಳವಡಿಸಲಾಗಿದೆ. ನಾಟಕ ವಿಡಂಬನಾತ್ಮಕ ಶೈಲಿಯಲ್ಲಿದ್ದು, ಪಾತ್ರಧಾರನ ಕಥೆಯನ್ನು ಸಮಾಜದ ಆಗು ಹೋಗುಗಳ ಮಧ್ಯೆ ಬಿಂಬಿಸುವ ತನ್ನಲ್ಲಿ ಅಡಗಿರೋ ಪ್ರಶ್ನೆಗಳನ್ನು ಪ್ರೇಕ್ಷಕನಿಗೆ ಕೇಳುತ್ತ ಸಂವಾದಾತ್ಮಕ ಮಾದರಿಯಲ್ಲಿ ನಾಟಕವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡಲಾಗಿದೆ.

English summary
The Kannada play ‘Ond Second’ by WeMove Theatre will be staged on Jan 29 in Ranga Shankara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X