ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ-ದೇವನಹಳ್ಳಿಯಲ್ಲಿ ಮಧ್ಯರಾತ್ರಿ ಹೆಚ್ಚುತ್ತಿದೆ ಡ್ರ್ಯಾಗ್ ರೇಸ್ : ಕಡಿವಾಣ ಹಾಕೋರಾರು?

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜುಲೈ.24: ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪುಂಡರ ಆರ್ಭಟ ಜೋರಾಗಿದೆ.ಆರ್ಭಟ ಜೋರಾಗಿದೆ ಮಧ್ಯರಾತ್ರಿ ಬೈಕ್ ರೇಸ್ ಶುರುವಾಗಿದ್ದು, ಯಮವೇಗದಲ್ಲಿ ನುಗ್ಗುವ ಬೈಕ್ ಗಳು ಇತರೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ವೀಕೆಂಡ್ ಬಂದ್ರೆ ಸಾಕು, ಯಲಹಂಕ, ದೇವನಹಳ್ಳಿ ನಡುವೆ ಬೈಕ್ ಗಳದ್ದೇ ಸದ್ದು. ಹದಿಹರೆಯದ ಯುವಕರ ಹುಚ್ಚು ಸಾಹಸದಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಕಾಲಿಡುವುದಕ್ಕೂ ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ ಇವತ್ತು.

ಮೂಡಿಗೆರೆ ಕಾಫಿ ತೋಟದಲ್ಲಿ ಧೂಳೆಬ್ಬಿಸಿದ ರೇಸ್ ಕಾರ್‌ಗಳುಮೂಡಿಗೆರೆ ಕಾಫಿ ತೋಟದಲ್ಲಿ ಧೂಳೆಬ್ಬಿಸಿದ ರೇಸ್ ಕಾರ್‌ಗಳು

ಬಾಲಿವುಡ್ ನಲ್ಲಿ ಧೂಳೆಬ್ಬಿಸ್ಸಿದ ಸಿನಿಮಾ ಧೂಮ್. ಚೇಸಿಂಗ್ ದೃಶ್ಯಗಳ ರೋಚಕತೆಯನ್ನು ಕಣ್ಣಿಗೆ ಕಟ್ಟಿಕೊಡುವ ಈ ಸಿನಿಮಾ ಯುವಕರ ನಿದ್ದೆಗೆಡೆಸಿತ್ತು. ಧೂಮ್ ಸಿನಿಮಾದ ಜನಪ್ರಿಯತೆಯಿಂದ ಇದೇ ಹೆಸರಲ್ಲಿ ಸರಣಿ ಚಿತ್ರಗಳು ಬಂದಿವೆ.

On the National Highway 7, bike race has increased

ಇಂತಹದ್ದೇ ಸಿನಿಮಾಗಳಿಂದ ಪ್ರೇರಿತಗೊಂಡ ಯುವಕರು ಚೇಸಿಂಗ್ ಸಾಹಸಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ ಬೈಕ್ ರೇಸ್ ಗೆ ಆರಿಸಿಕೊಂಡ ಜಾಗ ಯಾವುದು ಗೊತ್ತಾ? ರಾಷ್ಟ್ರೀಯ ಹೆದ್ದಾರಿ 7. ಯಲಹಂಕ ಟೂ ದೇವನಹಳ್ಳಿ. ಬೆಂಗಳೂರಿನ ಯುವಕರಿಗೆ ವಿಕೇಂಡ್ ಬಂದ್ರೆ ಮೋಜು ಮಸ್ತಿ ಮಾಡೋ ಖಯಾಲಿ.

ಹುಡ್ಗಿ ಜೊತೆಯಲ್ಲಿದ್ರೆ ಕ್ಲಬ್ ಪಬ್ ಸುತೋಕ್ಕೆ ಹೋಗ್ತಾರೆ. ಸಿಂಗಲ್ ಆಗಿರೋ ಯವಕರು ಇನಷ್ಟು ಯುವಕರನ್ನ ಜೊತೆ ಹಾಕೊಂಡ್ ರಾಜಧಾನಿ ಔಟ್ ಸ್ಕರ್ಟ್ ನಾ ರಾಷ್ಟ್ರೀಯ ಹೆದ್ದಾರಿಗಳಿಗೆ ಲಗ್ಗೆ ಇಡ್ತಾರೆ.

ಐವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರೋ ಯುವಕರು ಹೆದ್ದಾರಿಯನ್ನೇ ರೇಸ್ ಟ್ರ್ಯಾಕ್ ಮಾಡಿಕೊಳ್ತಾರೆ. ಬೆಟ್ ಕಟ್ಕೊಂಡ್ ರೇಸ್ ಗೆ ಇಳಿಯೋ ಯುವಕರ ವೇಗ 150ರಿಂದ 200 ಮುಟ್ಟುತ್ತೆ. ಬೈಕ್ ಗಳಿಂದ ಬರೋ ಶಬ್ದ ಭಯವನ್ನೆ ಹುಟ್ಟಿಸುತ್ತೆ. ಯಮವೇಗದಲ್ಲಿ ಬರೋ ಬೈಕ್ ಗಳಿಂದ ಅಪಘಾತಗಳೂ ನಡೆಯುತ್ತಿವೆ.

ಬೈಕ್ ಗಳಿಗೆ ಅಲ್ಟ್ರೇಷನ್ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಆದ್ರೆ, ಕಾನೂನಿಗೆ ಮಣ್ಣು ಎರಚುವ ಈ ಯುವಕರು ಬೈಕ್ ಗಳನ್ನ ಅಲ್ಟ್ರೇಶನ್ ಮಾಡಿಸ್ಕೊಂಡ್ ಬೈಕ್ ರೇಸ್ ಗೆ ಇಳಿಯುತ್ತಿದ್ದಾರೆ.

ಅಂದಹಾಗೆ ದೇವನಹಳ್ಳಿ ಮತ್ತು ಯಲಹಂಕ ನಡುವೆ ಡ್ರ್ಯಾಗ್ ರೇಸ್ ಮತ್ತು ಬೈಕ್ ವಿಲ್ಹಿಂಗ್ ನಿಂದ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿವೆ. ಇದರಿಂದ ಬೈಕ್ ಸವಾರರು ಜೊತೆಗೆ ಅಮಾಯಕರು ಸಹ ಪ್ರಾಣ ಕಳೆದು ಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದು ಕೊಳ್ಳುತ್ತಿಲ್ಲ.

ಇದು ಮಧ್ಯರಾತ್ರಿಯಲ್ಲಿ ನಡೆಯೋ ಡ್ರ್ಯಾಗ್ ರೇಸ್ ರಹದಾರಿ ಮಾಡಿಕೊಟ್ಟಿದ್ದೆ. ಜೊತೆಗೆ ಇವತ್ತಿನ ಪೋಷಕರ ಅತಿ ಮುದ್ದು ಸಹ ಬೈಕ್ ರೇಸ್ ಹೆಚ್ಚಾಗಲು ಕಾರಣವಾಗಿದೆ. ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಲಕ್ಷ ಬೆಲೆಯ ಬೈಕ್ ಗಳ ತಮ್ಮ ಮಕ್ಕಳಿಗೆ ಕೊಡಿಸುತ್ತಿದ್ದಾರೆ.

ಅಷ್ಟೇ ಅಲ್ಲ ಮಕ್ಕಳು ಎಲ್ಲಿಗೆ ಹೋದ್ರು? ಏನ್ ಮಾಡ್ತಾ ಇದ್ದಾರೆ ಅನ್ನೋ ಕಾಳಜಿ ಸಹ ಇವತ್ತಿನ ಪೋಷಕರಲ್ಲಿ ಇಲ್ಲ. ಶ್ರೀಮಂತರ ಮಕ್ಕಳೇ ಇಂತಹ ದುಶ್ಟಟಗಳಿಗೆ ಬಲಿಯಾಗುತ್ತಿದ್ದು, ಶ್ರೀಮಂತರ ಮಕ್ಕಳ ಹುಚ್ಚಾಟಕ್ಕೆ ಬಲಿಯಾಗ್ತಾ ಇರೋದು ಮಾತ್ರ ಅಮಾಯಕ ಜೀವಗಳು.

ಇದರ ಜೊತೆಯಲ್ಲಿ ಬೈಕ್ ರೇಸ್ ನಲ್ಲಿ ಸಾವನ್ನಪ್ಪುವ ಮಕ್ಕಳು ಪೋಷಕರನ್ನ ಕಣ್ಣಿರಿಡುವಂತೆ ಮಾಡಿದ್ದಾರೆ.

English summary
On the National Highway 7, bike race has increased. Bikes are sounding between Yelahanka to Devanahalli. Other vehicle riders are worried about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X