ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಓಮಿಕ್ರಾನ್ ಎರಡಲ್ಲ ಐದು ಜನಕ್ಕೆ ಹರಡಿದೆ?

|
Google Oneindia Kannada News

ಬೆಂಗಳೂರು ಡಿಸೆಂಬರ್ 2: ಕರ್ನಾಟಕದಲ್ಲಿ ಓಮಿಕ್ರಾನ್ ಎರಡಲ್ಲ ಐದು ಜನಕ್ಕೆ ಹರಡಿದೆ ಎನ್ನುವ ಗುಮಾನಿ ಹರಡಿದೆ. ಆದರೆ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸ್ಪಷ್ಟಣೆ ಸಿಕ್ಕಿಲ್ಲ. ಸಿಲಿಕಾನ್ ಸಿಟಿಗೆ ಓಮಿಕ್ರಾನ್ ಡಬಲ್ ಶಾಕ್ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ಎರಡು ಕೇಸ್ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕರ್ನಾಟಕದ ಮೂಲಕವೇ ಭಾರತದಲ್ಲಿ ಮೊದಲ ಬಾರಿಗೆ ಎರಡು ಓಮಿಕ್ರಾನ್ ಕೇಸ್ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 66 ವರ್ಷದ ವೃದ್ಧನಿಗೆ ಮತ್ತು 46 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ವೈರಸ್ ದೃಢಪಟ್ಟಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇಬ್ಬರು ಸೋಂಕಿತರ ಸ್ಥಿತಿ ಸ್ಥಿರವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಯದೇವ ಆಸ್ಪತ್ರೆಯ ಮುಖ್ಯಸ್ಥ, ಡಾ. ಸಿಎ.ಎನ್ ಮಂಜುನಾಥ್, "ಹಳೆ ವೈರಸ್ ಹೇಗಿದೆ ಅದೇ ತರ ಓಮಿಕ್ರಾನ್. ಭಯಬೀಳುವಂತದ್ದು ಅಗತ್ಯತೆ ಇಲ್ಲ. ಹಳೆಯ ಡೆಲ್ಟಾದಂತೆ ಇದು ಕೂಡ. ಆದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಇದನ್ನು ನಿರ್ಲಕ್ಷ್ಯ ಮಾಡೋದು ಬೇಡ. ಇದು ಹೊಸ ತಳಿ ಇರೋದ್ರಿಂದ ಇದರ ಬಗ್ಗೆ ತಿಳಿಯೋದಕ್ಕೆ ಸಮಯ ಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮ ಕೂಡ ತೆಗೆದುಕೊಳ್ಳಬೇಕು. ಒಂದು ದಿನ ಜ್ವರ ಬಂದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಬೇರೆಯವರಿಗೆ ಹರಡುವುದು ತಪ್ಪುತ್ತದೆ" ಎಂದು ಹೇಳಿದ್ದಾರೆ.

Breaking: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆBreaking: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆ

ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಮಾಡಿದಾಗ ಹೈ ವೈರಲ್ ಲೋಡ್ ಬಂದರೆ ಅವರು ಕ್ವಾರಂಟೈನ್ ಹಾಗೂ ಚಿಕಿತ್ಸೆ ಕಡ್ಡಾಯ ಮಾಡಲಾಗುತ್ತದೆ. ಆರ್‌ಟಿಪಿಸಿಆರ್ ಮಾಹಿತಿ ಮಿಸ್ ಆಗೋ ಚಾನ್ಸ್ ಇದ್ದರೂ ಶೇಕಡಾ 90 ರಷ್ಟು ಮಾಹಿತಿ ಸರಿಯಾಗಿರುತ್ತದೆ ಎಂದು ಅವರು ಹೇಳಿದರು.

 Omicron in Karnataka is not two Spread to five people?

ಕರ್ನಾಟಕ ಜಿನೋಮಿಕ್ಸ್ ಸರ್ವೇಲಿಂಕ್ ಸದಸ್ಯ, ಡಾ.ವಿಶಾಲ್‌ ರಾವ್, "ಡೆಲ್ಟಾ ತೀವ್ರತೆಯಲ್ಲಿ ಓಮಿಕ್ರಾನ್ ಕಂಡುಬಂದಿದೆ. ಆದರೆ ಇದು ನಮ್ಮ ಶಶೀರವನ್ನು ವೇಗವಾಗಿ ಪ್ರವೇಶ ಮಾಡುವ ಪ್ರಯಾಗಗಳನ್ನು ಮಾಡುತ್ತದೆ. ಹೀಗಾಗಿ ವೇಗವಾಗಿ ಹರಡುತ್ತದೆ. ಹೀಗಾಗಿ ವಿಶ್ವಸಂಸ್ಥೆ ಕಾಳಜಿ ವಹಿಸುವಂತೆ ಹೇಳಿದೆ. ಆದರೆ ಜನರು ಆತಂಕಪಡುವಂತದಿಲ್ಲ. ಜನ ಜಾಗೃತರಾಗಿರಬೇಕು. ಮಾಸ್ಕ್‌, ಲಸಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಒಂದು ದೇಶದಿಂದ ಹರಡುವಾಗ ಅದರ ತೀವ್ರತೆ ಕಡಿಮೆ ಆಗಬಹುದು. ಆದರೇ ಇದು ನಿಜ ಎಂದು ಹೇಳಲು ಆಗುವುದಿಲ್ಲ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಮಾಹಿತಿ ಲಭ್ಯವಾಗುತ್ತದೆ. ಆದರೆ ಜನರು ನಿರ್ಲಕ್ಷ್ಯ ತೋರದೆ ಜಾಗೃತಿ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳಬೇಕು. ಎರಡನೇ ಲಸಿಕೆ ಪಡೆದುಕೊಂಡಿಲ್ಲವಾದರೆ ತೆಗೆದುಕೊಳ್ಳಲು ಸಲಹೆ ನೀಡಿದರು.

ಸೋಂಕಿತನ ಟ್ರಾವೆಲ್ ಹಿಸ್ಟ್ರಿ:

46 ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿತ್ತು. ಮೂರು ದಿನ ಮಾತ್ರ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಕಂಪನಿ ಬೋರ್ಡ್ ಮೀಟಿಂಗ್‌ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಶೀಲನೆ ನಡೆಸಲಾಗಿದ್ದು ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ.

"ಜೀವಕ್ಕೆ ಅಪಾಯ ಇದಿಯೋ ಇಲ್ವೋ ಅನ್ನೋದನ್ನ ನೋಡಲಾಗುತ್ತದೆ. ಈವರೆಗೆ ಸೋಂಕಿತರಲ್ಲಿ ಜೀವಕ್ಕೆ ಅಪಾಯವಿರುವುದು ಕಂಡು ಬಂದಿಲ್ಲ. ಹೀಗಾಗಿ ಆಂತಕ ಬೇಡ. ಜಾಗೃತರಾಗಿವಾಗಿರಿ. ವೇಗವಾಗಿ ಇದು ಹರಡುತ್ತದೆ ಆದರೆ ಅಪಾಯವಿಲ್ಲ" ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

English summary
Omicron in Karnataka: There are reported that Omicron is spread to five person not two. However, the Health Department has not clarified this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X