• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆ

|

ಬೆಂಗಳೂರು, ಮಾರ್ಚ್ 30: ವಿದ್ಯಾರ್ಥಿಗಳಿಲ್ಲದೆ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆಯೊಂದನ್ನು ಮುಚ್ಚಲಾಗಿದೆ.

1870ರಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಮಾಡೆಲ್ ಸ್ಕೂಲ್ ಆಫ್ ಎಜುಕೇಷನ್ ಸೊಸೈಟಿ ಮೊದಲ ಕನ್ನಡ ಮೀಡಿಯಂ ಶಾಲೆಯನ್ನು ಸ್ಥಾಪನೆ ಮಾಡಲಾಗಿತ್ತು.

ಚಾಮರಾಜಪೇಟೆಯ ನೂರಿಪ್ಪತ್ತೈದು ಮಾಸದ ನೆನಪುಗಳು!ಚಾಮರಾಜಪೇಟೆಯ ನೂರಿಪ್ಪತ್ತೈದು ಮಾಸದ ನೆನಪುಗಳು!

ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯೇ ಇರಲಿಲ್ಲ ಹಾಗಾಗಿ ಅನಿವಾರ್ಯವಾಗಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಲ್ಲಿ ಈಗ ಮಾಸಿದ ಕಪ್ಪು ಬೋರ್ಡ್ ಮುರಿದ ಕುರ್ಚಿ, ವಿದ್ಯಾರ್ಥಿಗಳಿಲ್ಲ ಬೆಂಚುಗಳನ್ನು ನೋಡಬಹುದು.

ಇನ್ನೂ ಶಾಲೆಯ ನಾಮಫಲಕವನ್ನು ಕೂಡ ಶುಚಿಗೊಳಿಸುವವರಿಲ್ಲ, ಜಿಆರ್ ವಿಶ್ವನಾಥ್ ಹಾಗೂ ನಟ ವಿಷ್ಣುವರ್ಧನ್ ಕೂಡ ಇದೇ ಶಾಲೆಯಲ್ಲಿ ಕಲಿತವರು. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಮಾಡೆಲ್ ಹೈಸ್ಕೂಲ್ 1957ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತ್ತು. ಹಾಗೆಯೇ ಬಿಸಿಯೂಟ ವ್ಯವಸ್ಥೆಯೂ ಕೂಡ ಇತ್ತು.

ಶಾಲೆಯನ್ನು ಮುಚ್ಚುವ ಮೊದಲು ಸುಮಾರು ಎರಡು ಮೂರು ವರ್ಷಗಳ ಕಾಲ ನಾವು ಗಮನಿಸಿದ್ದೇವೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿತ್ತು.

2017ರಲ್ಲಿ ಒಂದೇ ಒಂದು ವಿದ್ಯಾರ್ಥಿಯಿಲ್ಲದೆ ಮುಚ್ಚುವ ಪರಿಸ್ಥಿತಿ ಬಂದಿತ್ತು. ಆದರೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಯಾವುದೇ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬಾರದು ಎಂದು ಆದೇಶ ಹೊರಡಿಸಿದರು.

   RCBಯ Dan Christian ಬಗ್ಗೆ ನಿಮಗೆಷ್ಟು ಗೊತ್ತು | Oneindia Kannada

   ಆದರೂ 2018ರಲ್ಲಿ ಅನಿವಾರ್ಯವಾಗಿ ಮುಚ್ಚಬೇಕಾಯಿತು, ಇದೀಗ ಮಾಡೆಲ್ ಶಾಲೆಗೆ 150 ವರ್ಷಗಳ ಸಂಭ್ರಮ ಆದರೆ ಆಚರಿಸಲು ವಿದ್ಯಾರ್ಥಿಗಳೂ ಇಲ್ಲ ಶಿಕ್ಷಕರೂ ಇಲ್ಲ, ಮಾಡೆಲ್ ಶಾಲೆ ಇನ್ನು ನೆನಪು ಮಾತ್ರ.

   English summary
   The Model Highschool in Chamarajpet Bengaluru's first kannada medium school started in the summer of 1870 with approval from the British administration has faded into oblivion with student enrolments completely stopping three years ago.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X