ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಸುರಂಗ ತೋಡುವಾಗ ತೆರೆದ ಹಳೆ ಬಾವಿ ಪತ್ತೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30: ಬೆಂಗಳೂರು ನಗರದಲ್ಲಿ ಭದ್ರ ಟಿಬಿಎಂ ಯಂತ್ರ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆಯುವಾಗ ಹಳೆಯ ಬಾವಿ ಪತ್ತೆಯಾಗಿದೆ. ಕಟ್ಟಡದ ಕೆಳಭಾಗದಲ್ಲಿ ಬಾವಿ ಪತ್ತೆಯಾಗಿದ್ದು, ಅಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿದೆ.

ನಮ್ಮ ಮೆಟ್ರೋ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ 7.30ರ ವೇಳೆಯಲ್ಲಿ ಭದ್ರ ಟಿಬಿಎಂ ಯಂತ್ರ ಸುರಂಗ ಕೊರೆಯುವಾಗ ಸಿಂಕ್ ಹೋಲ್ ಕಾಣಿಸಿದೆ.

ಸುರಂಗ ಕೊರೆದು ಮುಗಿಸಿದ ಊರ್ಜಾ; ಮೆಟ್ರೋ ಮಾರ್ಗದ ವಿವರ ಸುರಂಗ ಕೊರೆದು ಮುಗಿಸಿದ ಊರ್ಜಾ; ಮೆಟ್ರೋ ಮಾರ್ಗದ ವಿವರ

ವೆಂಕಟೇಶಪುರ ಮೆಟ್ರೋ ಸುರಂಗ ಮಾರ್ಗದಿಂದ ಟ್ಯಾನರಿ ರಸ್ತೆ ಮೆಟ್ರೋ ನಿಲ್ದಾಣದ ಕಡೆಗಿನ ಸುಮಾರು 100 ಮೀಟರ್ ದೂರದಲ್ಲಿ ಸಿಂಕ್ ಹೋಲ್ ಕಾಣಿಸಿದಾಗ ಪರಿಶೀಲನೆ ನಡೆಸಲಾಗಿದೆ.

ಕಟ್ಟಡ ಕುಸಿತ: 40 ಮಂದಿ ನಮ್ಮ ಮೆಟ್ರೋ ಕಾರ್ಮಿಕರು ಬಚಾವ್ ಆಗಿದ್ದು ಹೇಗೆ? ಕಟ್ಟಡ ಕುಸಿತ: 40 ಮಂದಿ ನಮ್ಮ ಮೆಟ್ರೋ ಕಾರ್ಮಿಕರು ಬಚಾವ್ ಆಗಿದ್ದು ಹೇಗೆ?

Old Open Well Found During Namma Metro Tunneling Work

ಇದು ಹಳೆಯ ತೆರದ ಬಾವಿಯಾಗಿದ್ದು ಈಗಿರುವ ಕಟ್ಟಡದ ಕೆಳಗೆ ಮುಚ್ಚಿ ಹೋಗಿತ್ತು. ಕಟ್ಟಡದ ನೆಲ ಮಹಡಿಯಲ್ಲಿ ಕೋಳಿ ಅಂಗಡಿ ಇತ್ತು. ಮೊದಲ ಮಹಡಿಯ ಮನೆಯಲ್ಲಿ 5 ಜನರ ಕುಟುಂಬ ವಾಸವಾಗಿತ್ತು.

 ಬೆಂಗಳೂರು: ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ ಬೆಂಗಳೂರು: ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ

ಸುರಕ್ಷತೆ ದೃಷ್ಟಿಯಿಂದ ಕೋಳಿ ಅಂಗಡಿ ಮುಚ್ಚಲಾಗಿದೆ. ಮೊದಲ ಮಹಡಿಯಲ್ಲಿದ್ದ ಕುಟುಂಬಕ್ಕೆ ನಾಗವಾರದ ಬಳಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.

Old Open Well Found During Namma Metro Tunneling Work

ಕಾಮಗಾರಿ ಮುಂದುವರೆಯಲಿದೆ; ಹಳೆಯ ಬಾವಿಯಲ್ಲಿ ಮರಳು ಮತ್ತು ಕಾಂಕ್ರೀಟ್ ತುಂಬುವ ಕಾರ್ಯ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಬಳಿಕ ಕಟ್ಟಡವನ್ನು ಭದ್ರಗೊಳಿಸಿ ಸುರಂಗ ಮಾರ್ಗ ಕಾಮಗಾರಿ ಮುಂದುವರೆಸಲಾಗುತ್ತದೆ.

ಕಟ್ಟಡದ ಕೆಳಗೆ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡ ಬಳಿಕ ಕಟ್ಟಡದ ಸುರಕ್ಷತೆಯನ್ನು ನೋಡಿಕೊಂಡು ಕುಟುಂಬವನ್ನು ಪುನಃ ಸ್ಥಳಾಂತರ ಮಾಡಲಾಗುತ್ತದೆ ಎಂದು ನಮ್ಮ ಮೆಟ್ರೋ ಹೇಳಿದೆ.

ಯಾವ ಮಾರ್ಗವಿದು?; ಡೈರಿ ಸರ್ಕಲ್ ಮತ್ತು ನಾಗವಾರ ನಡುವಿನ 13.88 ಕಿ. ಮೀ. ನಮ್ಮ ಮೆಟ್ರೋ ಯೋಜನೆ ಭಾಗವಾಗಿ ಭದ್ರ ಟಿಬಿಎಂ ಯಂತ್ರ ಕಳೆದ ಜೂನ್‌ನಲ್ಲಿ ವೆಂಕಟೇಶಪುರ ನಿಲ್ದಾಣ ಬಳಿ ಸುರಂಗ ಕೊರೆಯಲು ಆರಂಭಿಸಿತ್ತು.

ಯೋಜನೆ ಅನ್ವಯ ಟಿಬಿಎಂ ಯಂತ್ರಗಳಾದ ತುಂಗಾ ಮತ್ತು ಭದ್ರ ಮೊದಲು ವೆಂಕಟೇಶಪುರದಿಂದ ದಕ್ಷಿಣಕ್ಕೆ ಟ್ಯಾನರಿ ರಸ್ತೆ ಮಾರ್ಗದಲ್ಲಿ ಸುರಂಗ ಕೊರೆಯಲಿವೆ. ಬಳಿಕ ವೆಂಕಟೇಶಪುರದಿಂದ ನಾಗವಾರ ಕಡೆ ಸುರಂಗ ಕೊರೆಯುವ ಕಾಮಗಾರಿ ನಡೆಸಲಿವೆ.

ಬೆಂಗಳೂರು ಉತ್ತರ ಭಾಗದಲ್ಲಿ ಸುರಂಗ ಮಾರ್ಗ ಕೊರೆಯುವ ಟೆಂಡರ್ ಐಟಿಡಿ ಸೆಮೆಂಟೇಶನ್ ಇಂಡಿಯಾ ಪಡೆದುಕೊಂಡಿದೆ. 4.5 ಕಿ. ಮೀ. ಸುರಂಗ ಮಾರ್ಗದಲ್ಲಿ 4 ಮೆಟ್ರೋ ನಿಲ್ದಾಣ ಬರಲಿವೆ.

ಸಾಮಾನ್ಯವಾಗಿ ಒಂದು ಟಿಬಿಎಂ ಯಂತ್ರ ಪ್ರತಿದಿನ 3-4 ಮೀಟರ್ ಸುರಂಗ ಕೊರೆಯಲಿದೆ. ಆದರೆ ಗಟ್ಟಿಯಾದ ಬಂಡೆ ಸೇರಿದಂತೆ ಅಡಚಣೆ ಉಂಟಾದರೆ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ.

ಟ್ಯಾನರಿ ರಸ್ತೆ-ನಾಗವಾರ ನಡುವಿನ ನಮ್ಮ ಮೆಟ್ರೋ ಕಾಮಗಾರಿಗೆ 1771.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 4.5 ಕಿ. ಮೀ. ಮಾರ್ಗದಲ್ಲಿ ಒಟ್ಟು 3.12 ಕಿ. ಮೀ. ಸುರಂಗ ಮಾರ್ಗವಿರಲಿದೆ. ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬುಕ್ ಕಾಲೇಜು ಮತ್ತು ನಾಗವಾರ ನಿಲ್ದಾಣಗಳು ಬರುತ್ತವೆ.

ಟ್ಯಾನರಿ ರಸ್ತೆ-ನಾಗವಾರ ನಡುವಿನ ನಮ್ಮ ಮೆಟ್ರೋ ಕಾಮಗಾರಿಗೆ 1771.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 4.5 ಕಿ. ಮೀ. ಮಾರ್ಗದಲ್ಲಿ ಒಟ್ಟು 3.12 ಕಿ. ಮೀ. ಸುರಂಗ ಮಾರ್ಗವಿರಲಿದೆ. ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬುಕ್ ಕಾಲೇಜು ಮತ್ತು ನಾಗವಾರ ನಿಲ್ದಾಣಗಳು ಬರುತ್ತವೆ.

ಟ್ಯಾನರಿ ರಸ್ತೆಯ ಸುರಂಗ ಮಾರ್ಗದ ನಿಲ್ದಾಣದಿಂದ ನಾಗವಾರ ನಿಲ್ದಾಣದವರೆಗಿನ ಕಾಮಗಾರಿಗೆ 1771.25 ಕೋಟಿ ರು.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, 4.591 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗುವುದು. ಒಟ್ಟು 3.12 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರದಲ್ಲಿ ನಿಲ್ದಾಣಗಳು

ಸೆಪ್ಟೆಂಬರ್ 22ರಂದು ಕಂಟೋನ್ಮೆಂಟ್-ಶಿವಾಜಿನಗರ ನಡುವೆ ಸುರಂಗ ನಿರ್ಮಿಸುವ ಕಾರ್ಯವನ್ನು 'ಊರ್ಜಾ' ಟಿಬಿಯಂ ಯಂತ್ರ ಪೂರ್ಣಗೊಳಿಸಿತ್ತು. ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ವಿಸ್ತರಿತ ಮಾರ್ಗ ಇದಾಗಿದೆ.

ಬೆಂಗಳೂರು ನಗರದಲ್ಲಿ ಗೊಟ್ಟಿಗೆರೆ-ನಾಗವಾರ ನಡುವೆ ರೀಚ್-6 ಮಾರ್ಗ ನಿರ್ಮಾಣವಾಗುತ್ತಿದೆ. ಡೇರಿ ವೃತ್ತದಿಂದ ನಾಗವಾರ ನಡುವೆ 13.9 ಕಿ. ಮೀ. ಸುರಂಗ ಮಾರ್ಗ, ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ತನಕ 9.28 ಕಿ. ಮೀ. ಮಾರ್ಗದ ಸುರಂಗ ಕೊರೆಯುವ ಪ್ರಕ್ರಿಯೆ ನಡೆಯುತ್ತಿದೆ.

ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆಯುವ ಪ್ರಕ್ರಿಯೆಯಲ್ಲಿ ಊರ್ಜಾ, ವಿಂಧ್ಯ, ಲವಿ, ಅವನಿ, ಭದ್ರ ಸೇರಿ 6ಕ್ಕೂ ಹೆಚ್ಚು ಟಿಬಿಎಂ ಯಂತ್ರಗಳು ತೊಡಗಿವೆ. 2024ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಗುರಿ ಇದೆ.

Recommended Video

ಚೀನಾ ಗೆ ಕಾಡುತ್ತಿದೆ ವಿದ್ಯುತ್ ಸಮಸ್ಯೆ | Oneindia Kannada

English summary
A sink hole appeared during Namma Metro tunneling works at Bengaluru. Later old open well found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X