• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಿ ಸೇರಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ 'ಸ್ತ್ರೀ' ಭಾಗ್ಯ!

|

ಬೆಂಗಳೂರು, ಮಾರ್ಚ್ 12: ಪ್ರಯಾಣಕ್ಕೆ ಅಂತ ಹೊರಟಾಗ ಮಹಿಳೆಯರಿಗೆ ಕಾಡುವ ದೊಡ್ಡ ಸಮಸ್ಯೆ ಅಂದ್ರೆ ಅದು 'ಶೌಚಾಲಯ'. ಅನೇಕ ಸ್ಥಳಗಳಲ್ಲಿ, ಹಲವು ಬಸ್ ನಿಲ್ದಾಣಗಳಲ್ಲಿ ಶೌಚಾಲಯದ ವ್ಯವಸ್ಥೆ ಇದೆ ನಿಜ. ಆದ್ರೆ, ಅಲ್ಲಿ ಸಂಪ್ರದಾಯಸ್ತ ಮಹಿಳೆಯರು ನಿರುಮ್ಮಳವಾಗಿ ಶೌಚಕ್ಕೆ ಹೋಗುವುದು ಅಸಾಧ್ಯ. ಸ್ವಚ್ಛತೆಗೆ ಆದ್ಯತೆ ಕೊಡುವವರು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಮಹಿಳೆಯರು ಅಂತಹ ಸ್ಥಳಗಳನ್ನು ಬಳಕೆ ಮಾಡುವುದು ಕಡಿಮೆ.

   Karnataka State Road Transport Corporation fare hiked up to 12 percent

   ಮಹಿಳೆಯರ ಈ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು, ಸ್ವಚ್ಛತೆಗೆ ಇನ್ನಷ್ಟು ಒತ್ತು ಕೊಟ್ಟು 'ಸ್ವಚ್ಛತೆಯತ್ತ ಒಂದು ಹೆಜ್ಜೆ' ಇಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಂದಾಗಿದೆ.

   ಉಚಿತ ಬಸ್ ಪಾಸ್: ಬಿ.ಎಸ್.ವೈ ಬಜೆಟ್ ನಲ್ಲಿ ಹೆಣ್ಮಕ್ಕಳಿಗೆ ಸಿಹಿ ಸಿಕ್ತು ಗುರು!

   ಮಹಿಳೆಯರಿಗೆ ಸ್ವಚ್ಛ ಶೌಚಾಲಯ ಕಲ್ಪಿಸುವ ಸಲುವಾಗಿ 'ಸ್ತ್ರೀ' ಹೆಸರಿನಲ್ಲಿ ಜನ ನಿಬಿಡ ಬಸ್ ಸ್ಟ್ಯಾಂಡ್ ಗಳಲ್ಲಿ ಗುಜರಿ ಬಸ್ ಗಳಿಂದ ಹೈಟೆಕ್ ಟಾಯ್ಲೆಟ್ ಗಳು ರೆಡಿ ಆಗುತ್ತಿವೆ.

   ಗುಜರಿ ಬಸ್ ಗಳಿಂದ ಹೈಟೆಕ್ ಶೌಚಾಲಯ

   ಗುಜರಿ ಬಸ್ ಗಳಿಂದ ಹೈಟೆಕ್ ಶೌಚಾಲಯ

   BIAL (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಹಿಳಾ ಪ್ರಯಾಣಿಕರಿಗಾಗಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸುತ್ತಿದೆ. ಗುಜರಿಗೆ ಸೇರಲಿದ್ದ ಬಸ್ ಗಳು ಹೈಟೆಕ್ ಶೌಚಾಲಯಗಳಾಗಿ ಮಾರ್ಪಾಡಾಗಲಿವೆ. ಇದಕ್ಕಾಗಿ BIAL 12 ಲಕ್ಷ ರೂಪಾಯಿಯನ್ನು ನೀಡಿದೆ.

   ಹೈಟೆಕ್ ಶೌಚಾಲಯದಲ್ಲಿ ಹೇಗಿರಲಿದೆ.?

   ಹೈಟೆಕ್ ಶೌಚಾಲಯದಲ್ಲಿ ಹೇಗಿರಲಿದೆ.?

   ಒಂದು ಬಸ್ ನಲ್ಲಿ ಆರು ಟಾಯ್ಲೆಟ್ ಗಳು ಇರಲಿವೆ. ಅವುಗಳ ಪೈಕಿ ಮೂರು ಇಂಡಿಯನ್ ಸ್ಟೈಲ್. ಬಾಕಿ ಮೂರು ವೆಸ್ಟರ್ನ್ ಸ್ಟೈಲ್. ಇವುಗಳ ಜೊತೆಗೆ ಶವರ್ ಏರಿಯಾ ಕೂಡ ಇರಲಿದ್ದು, ಅವಶ್ಯಕತೆ ಇದ್ದಾಗ ಬಳಕೆ ಮಾಡಿಕೊಳ್ಳಬಹುದು.

   ಕೊಡಗಿನ ಈ ಯುವತಿ ಫಿಲಿಪ್ಪೀನ್ಸ್ ನಲ್ಲಿ ಪೈಲಟ್ ಆದ ಕಥೆ

   ಹೈಟೆಕ್ ಶೌಚಾಲಯದಲ್ಲಿ ಏನೇನಿರಲಿದೆ.?

   ಹೈಟೆಕ್ ಶೌಚಾಲಯದಲ್ಲಿ ಏನೇನಿರಲಿದೆ.?

   ಹೈಟೆಕ್ ಶೌಚಾಲಯವಾಗಿ ಪರಿವರ್ತಿತವಾಗುವ ಗುಜರಿ ಬಸ್ ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಅದರ ಡಿಸ್ಪೆನ್ಸಿಂಗ್ ಮಷಿನ್ ಕೂಡ ಇರಲಿದೆ. ಒಂದು ರೂಪಾಯಿ ಕಾಯಿನ್ ಹಾಕಿ ಸ್ಯಾನಿಟರಿ ಪ್ಯಾಡ್ ಪಡೆಯುವ ವ್ಯವಸ್ಥೆಯೂ ಮಹಿಳೆಯರಿಗೆ ಲಭಿಸಲಿದೆ.

   ಅಮ್ಮಂದಿರಿಗೂ ಅನುಕೂಲ

   ಅಮ್ಮಂದಿರಿಗೂ ಅನುಕೂಲ

   ಮಹಿಳೆಯರ ಜೊತೆಗೆ ಮಕ್ಕಳ ಆರೈಕೆಗೂ ಇಲ್ಲಿ ಒತ್ತು ನೀಡಲಾಗುತ್ತಿದೆ. ಹೀಗಾಗಿ, ಇಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಡೈಪರ್ ಬದಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಿಗಾಗಿ ಪ್ಯಾನಿಕ್ ಬಟನ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

   ಸ್ತ್ರೀ ಟಾಯ್ಲೆಟ್ ಲೋಗೋ ಅನಾವರಣ

   ಸ್ತ್ರೀ ಟಾಯ್ಲೆಟ್ ಲೋಗೋ ಅನಾವರಣ

   ಮಹಿಳಾ ದಿನಾಚರಣೆ ಪ್ರಯುಕ್ತ 'ಸ್ತ್ರೀ ಟಾಯ್ಲೆಟ್' ಲೋಗೋ ಅನಾವರಣಗೊಂಡಿದ್ದು, ಸದ್ಯದಲ್ಲೇ ಹೈಟೆಕ್ ಬಸ್ ಟಾಯ್ಲೆಟ್ ಸೇವೆ ಮಹಿಳೆಯರಿಗೆ ಸಿಗಲಿದೆ. ಪ್ರಯೋಗಾರ್ಥವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮೊದಲ 'ಬಸ್ ಶೌಚಾಲಯ' ಕಾರ್ಯಾರಂಭ ಮಾಡಲಿದೆ. ಮಹಿಳೆಯರ ಪ್ರತಿಕ್ರಿಯೆ ಆಧರಿಸಿ, ಮುಂದಿನ ದಿನಗಳಲ್ಲಿ ಸೇವೆ ವಿಸ್ತರಣೆ ಆಗಲಿದೆ.

   ಲೋಗೋದಲ್ಲೇ ಸ್ತ್ರೀ ಸಂವೇದನೆ

   ಲೋಗೋದಲ್ಲೇ ಸ್ತ್ರೀ ಸಂವೇದನೆ

   ಹೈಟೆಕ್ ಬಸ್ ಶೌಚಾಲಯಗಳ ಲೋಗೋ ಡಿಸೈನ್ ನಲ್ಲೂ ಮಹಿಳಾ ಸಂವೇದನೆ ವ್ಯಕ್ತವಾಗಿದೆ. ಜೊತೆಗೆ ಕನ್ನಡತನವನ್ನೂ ಲೋಗೋ ಒಳಗೊಂಡಿದೆ. ದೂರಕ್ಕೆ ವೆಸ್ಟರ್ನ್ ಸ್ಟೈಲ್ ಟಾಯ್ಲೆಟ್ ಸ್ಟೈಲ್ ನಂತೆ ಕಾಣುವ ಲೋಗೋವನ್ನು ಹತ್ತಿರದಿಂದ ಗಮನಿಸಿದರೆ ಅದರೊಳಗೆ ಕಲಾತ್ಮಕ ಕನ್ನಡದ 'ಸ್ತ್ರೀ' ಅಕ್ಷರ ಅಡಗಿದೆ. 'ಸ್ವಚ್ಛತೆಯತ್ತ ಒಂದು ಹೆಜ್ಜೆ' ಹೆಸರಿನಲ್ಲಿ ಮಹಿಳೆಯರ ಗಮನ ಸೆಳೆಯಲಿದೆ.

   English summary
   Old KSRTC Bus to turn into Toilet for Women at Majestic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more