ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಹಳೆಯ ಬಸ್‌ಗಳನ್ನು ಗುಜರಿಗೆ ಹಾಕುವ ಬದಲು ಏನು ಮಾಡುತ್ತಿದ್ದಾರೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜನವರಿ 19: ಹಳೆಯ ಬಿಎಂಟಿಸಿ ಬಸ್‌ಗಳನ್ನು ಗುಜರಿಗೆ ಹಾಕದೆ ಅದನ್ನು ಮೊಬೈಲ್ ಸ್ಕೂಲ್‌ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ.

ಹೇಗೆ ಮೊಬೈಲ್ ಎಟಿಎಂ ನಿಮ್ಮ ಬಳಿಗೆ ಹಣವನ್ನು ಹೊತ್ತು ಬರುವುದೇ ಹಾಗೆಯೇ ಈ ಮೊಬೈಲ್ ಸ್ಕೂಲ್‌ಗಳು ನಿಮ್ಮ ಬಳಿಗೆ ವಿದ್ಯೆಯನ್ನು ಹೊತ್ತು ಬರಲಿವೆ.

ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ

ಕೊರೊನಾ ಬಳಿಕ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ, ಬಡ ಮಕ್ಕಳು ಕೂಲಿ ಮಾಡಿಕೊಂಡು ಪೋಷಕರಿಗೆ ನೆರವಾಗುತ್ತಿದ್ದಾರೆ.ಶಾಲೆಯನ್ನು ದಾಖಲಾಗಿರುವ ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಬಿಬಿಎಂಪಿಯು ಹಳೆಯ ಬಸ್‌ಗಳನ್ನು ಮೊಬೈಲ್ ಸ್ಕೂಲ್‌ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

Old BMTC Buses To Be Re-Purposed Into Mobile Schools

ಶಾಲೆಯಿಂದ ವಂಚಿತರಾದ ಮಕ್ಕಳ ಕುರಿತು ಬಿಬಿಎಂಪಿಯು ಸಮೀಕ್ಷೆ ನಡೆಸಿತ್ತು. ಬಿಬಿಎಂಪಿಯು ಬಿಎಂಟಿಸಿಯಿಂದ 10 ಬಸ್‌ಗಳನ್ನು ನೀಡುವಂತೆ ಕೇಳಿದೆ.
ಪ್ರತಿ ಬಸ್‌ಗಳನ್ನು ಪರಿವರ್ತಿಸಲು ಬಿಬಿಎಂಪಿಗೆ 4 ಲಕ್ಷ ರೂ. ವೆಚ್ಚವಾಗಲಿದೆ. ಬಸ್‌ನಲ್ಲಿ ಮಕ್ಕಳು ಕುಳಿತು ಪಾಠವನ್ನು ಕೇಳಬಹುದಾಗಿದೆ.

ಯಾವ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಶಾಲೆಯಿಂದ ವಂಚಿತರಾಗಿದ್ದಾರೆಂದು ಗಮನಿಸಿ ಆ ಪ್ರದೇಶಗಳಲ್ಲಿ ಮೊಬೈಲ್ ಸ್ಕೂಲ್‌ಗಳು ತೆರಳಲಿವೆ. ಸಮೀಕ್ಷೆಯು ಸ್ಲಂ, ವಲಸೆ ಕಾರ್ಮಿಕರ ಮೇಲೆ ನಡೆಸಲಾಗಿದೆ. 6 ರಿಂದ 14 ವರ್ಷಗಳ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

Recommended Video

karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ತಿಳಿಸಿದೆ. ಕೊರೊನಾ ಸೋಂಕಿನಿಂದಾಗಿ ಸುಮಾರು ಏಳೆಂಟು ತಿಂಗಳುಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಷ್ಟೇ ಅಲ್ಲದೆ ಪ್ರಯಾಣಿಕರು ಎಸಿ ಬಸ್‌ಗಳತ್ತ ಮುಖ ಮಾಡದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ನಿಗಮಗಳು ತಿಳಿಸಿವೆ.

English summary
The COVID-19 outbreak has resulted in a drop in the number of admissions in schools while young children, who should be in school, are found selling miscellaneous items or begging on the streets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X