ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ ಚಾಲಕ ಮಾರ್ಗ ಬದಲಿಸಿದ್ರೂ ಯುವತಿ ಸುರಕ್ಷಿತವಾಗಿ ಮನೆಗೆ ಸೇರಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 15: ಓಲಾ ಚಾಲಕನಿಂದ ಪ್ರಯಾಣಿಕರಿಗೆ ಕಿರುಕುಳ ನೀಡುವುದು, ಅತ್ಯಾಚಾರ ಪ್ರಕರಣಗಳನ್ನು ದಿನನಿತ್ಯ ಕೇಳುತ್ತಿದ್ದೇವೆ.

ಆದರೆ ಚಾಲಕರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ. ನಾವು ಹೇಳಿದ ಜಾಗಕ್ಕೆ ಬಾರದೆ ಇರುವುದು, ಅವರು ಅಂದುಕೊಂಡಿರುವ ಯಾವುದೇ ಮಾರ್ಗದಲ್ಲಿ ಸಂಚರಿಸುವುದು, ವೇಗದ ಚಾಲನೆ ಇಂತಹ ಘಟನೆಗಳು ಹೆಚ್ಚಾಗಿವೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ಯುವತಿಯೊಬ್ಬಳು ಈಜಿಪರದಲ್ಲಿರುವ ತನ್ನ ಮನೆಗೆ ತೆರಳಲು ಎಂಜಿ ರಸ್ತೆಯಲ್ಲಿ ಓಲಾ ಬುಕ್ ಮಾಡಿದ್ದಾಳೆ. ಸ್ವಲ್ಪ ಹೊತ್ತಲ್ಲೇ ಚಾಲಕ ತನ್ನ ಮಾರ್ಗವನ್ನು ಬದಲಾಯಿಸಿದ್ದ, ಆಗ ಯುವತಿಗೆ ಗಾಬರಿಯಾಗಿದೆ.

Ola to the rescue! Woman reaches home safe after driver changes route

ತಕ್ಷಣ ಓಲಾ ಕಂಒನಿಯವರು ಕರೆ ಮಾಡಿ ಚಾಲಕ ರೂಟ್ ಬದಲಾಯಿಸಿದ್ದೇಕೆ ಏನಾದರೂ ತೊಂದೆರೆಯಾಗಿದೆಯಾ ಎಂದು ವಿಚಾರಿಸಿದ್ದಾರೆ. ಯುವತಿ ಅಂದು ರಾತ್ರಿ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ. ರಾತ್ರಿ ಹೊತ್ತು ಓಲಾದಲ್ಲಿ ಹೆಣ್ಣುಮಕ್ಕಳು ಓಡಾಡುವುದೇ ಒಂದು ಸವಾಲಿನ ಕೆಲಸ ಎಂದು ಹೇಳಿದ್ದಾಳೆ.

ನಿತ್ಯ ಹೋಗುವ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹೋಗುತ್ತಿದ್ದ, ಆಗ ನಾನು ಆತನನ್ನು ವಿಚಾರಿಸಿದೆ ಯಾವ ರೂಟ್‌ಲ್ಲಿ ಹೋಗ್ತಿದ್ದೀಯಾ ಎಂದು ಕೇಳಿದಾಗ ಆತನ ಗಾಬರಿಕೊಂಡು ಉತ್ತರ ಕೊಡಲು ತಡವರಿಸಿದ.

ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ

ಬಳಿಕ ಆ ರಸ್ತೆ ಬಂದ್ ಆಗಿದೆ ಹಾಗಾಗಿ ನೇರವಾದ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಸಬೂಬು ಹೇಳಿದ ಆದರೆ ಅವನ ಮಾತಲ್ಲಿ ಯಾವುದೇ ಸತ್ಯ ಕಾಣಿಸಲಿಲ್ಲ, ಅಷ್ಟರೊಳಗೆ ಮತ್ತೆ ಓಲಾ ಕಂಪನಿಯಿಂದ ಕರೆ ಬಂತು, ನೀವು ಸೇಫ್ ಆಗಿದ್ದೀರಾ ತಾನೇ ಏನಾದರೂ ತೊಂದರೆ ಇದೆಯಾ ಎಂದು ಅದು ರೆಕಾರ್ಡೆಡ್ ಕಾಲ್ ಆಗಿರದ ಕಾರಣ ಮನೆಗೆ ಹೋಗುವವರೆಗೂ ಕಾಲ್ ಕಟ್ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದೆ.

ನನಗೆ ಸೇಫ್ಟಿ ಕಾಲ್ ಬಂದಿದ್ದು ನೋಡಿ ಆತನಿಗೆ ಭಯವಾಗಿತ್ತು. ಹಾಗೆಯೇ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಎಚ್ಚೆತ್ತುಕೊಂಡಿರುವ ಓಲಾ ಕಂಪನಿಗೆ ಯುವತಿ ಧನ್ಯವಾದ ತಿಳಿಸಿದ್ದಾರೆ.

English summary
'I ensured, I should sound brave and not frightened' said a woman who boarded a cab late at night in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X